‘ನಾನು ಮುಂಗಾರು ಮಳೆ ಮಾಡಿದ್ರೆ ಅಟ್ಟರ್​ ಫ್ಲಾಪ್ ಆಗುತ್ತಿತ್ತು’; ಓಪನ್ ಆಗಿ ಹೇಳಿದ್ದ ಸುದೀಪ್

ಕಿಚ್ಚ ಸುದೀಪ್ ಸ್ಟಾರ್ ನಟ. ಅವರು ಚಿತ್ರರಂಗಕ್ಕೆ ಕಾಲಿಟ್ಟು 28 ವರ್ಷಗಳು ಕಳೆದಿದೆ. ಈ ವೇಳೆ ಅವರಿಗೆ ಅಪಾರ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸುದೀಪ್ ಅವರನ್ನು ಆರಾಧಿಸುವ ಅನೇಕರಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು ಭಾಷೆಯಲ್ಲೂ ಅವರು ನಟಿಸಿ ಫೇಮಸ್ ಆಗಿದ್ದಾರೆ. ಅವರು ‘ಮುಂಗಾರು ಮಳೆ’ ಸಿನಿಮಾ ಮಾಡಿದ್ದರೆ ಫ್ಲಾಪ್ ಆಗುತ್ತಿತ್ತಂತೆ.

‘ನಾನು ಮುಂಗಾರು ಮಳೆ ಮಾಡಿದ್ರೆ ಅಟ್ಟರ್​ ಫ್ಲಾಪ್ ಆಗುತ್ತಿತ್ತು’; ಓಪನ್ ಆಗಿ ಹೇಳಿದ್ದ ಸುದೀಪ್
ಗಣೇಶ್​-ಸುದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 10, 2024 | 7:59 AM

‘ಮುಂಗಾರು ಮಳೆ’ 2006ರಲ್ಲಿ ರಿಲೀಸ್ ಆದ ಸಿನಿಮಾ. ಈ ಚಿತ್ರವನ್ನು ಜನರು ಸಾಕಷ್ಟು ಇಷ್ಟಪಟ್ಟರು. ನೂರಾರು ದಿನಗಳ ಕಾಲ ಸಿನಿಮಾ ಪ್ರದರ್ಶನ ಕಂಡಿತ್ತು. ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಖ್ಯಾತಿ ಹೆಚ್ಚಿತು. ಗಣೇಶ್ ನಟನೆಯನ್ನು ಎಲ್ಲರೂ ಹೊಗಳಿದರು. ಅವರು ದೇವ್​ದಾಸ್ ತರ ಆ್ಯಕ್ಟಿಂಗ್ ಮಾಡಿದ್ದು ಜನರಿಗೆ ಇಷ್ಟ ಆಗಿತ್ತು. ಈ ಸಿನಿಮಾನ ಸುದೀಪ್ (Kichcha Sudeep) ಮಾಡಿದ್ದರೆ? ಹೀಗೊಂದು ಪ್ರಶ್ನೆ ಕೆಲವರಿಗೆ ಒಮ್ಮೆಯಾದರೂ ಎದುರಾಗಿರುತ್ತದೆ. ಸುದೀಪ್ ಪ್ರಕಾರ ಈ ಚಿತ್ರವನ್ನು ಅವರು ಮಾಡಿದ್ದರೆ ದೊಡ್ಡ ಫ್ಲಾಪ್ ಆಗುತ್ತಿತ್ತಂತೆ. ಈ ಮೊದಲು ಸುದೀಪ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದರು.

ಸುದೀಪ್ ಅವರು ಸ್ಟಾರ್ ನಟ. ಅವರು ಚಿತ್ರರಂಗಕ್ಕೆ ಕಾಲಿಟ್ಟು 28 ವರ್ಷಗಳು ಕಳೆದಿದೆ. ಈ ವೇಳೆ ಅವರಿಗೆ ಅಪಾರ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸುದೀಪ್ ಅವರನ್ನು ಆರಾಧಿಸುವ ಅನೇಕರಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು ಭಾಷೆಯಲ್ಲೂ ಅವರು ನಟಿಸಿ ಫೇಮಸ್ ಆಗಿದ್ದಾರೆ. ಅವರು ನಟನೆಯಲ್ಲಿ ಸಾಕಷ್ಟು ಪಳಗಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಮಾಡಿ ತೋರಿಸುತ್ತಾರೆ. ಆದರೆ, ‘ಮುಂಗಾರು ಮಳೆ’ ಚಿತ್ರದಲ್ಲಿನ ಪ್ರೀತಮ್ ಪಾತ್ರವನ್ನು ಗಣೇಶ್ ರೀತಿ ಮಾಡಲು ಸಾಧ್ಯವಿರಲಿಲ್ಲ ಎಂದು ಸುದೀಪ್ ಈ ಮೊದಲು ಹೇಳಿಕೊಂಡಿದ್ದರು.

ಸುದೀಪ್ ಬಿಗ್ ಬಾಸ್ ನಡೆಸಿಕೊಡುತ್ತಾರೆ. ಸೀಸನ್ 6ರಲ್ಲಿ ಗಣೇಶ್ ಅವರು ಸಿನಿಮಾ ಪ್ರಚಾರಕ್ಕಾಗಿ ಬಿಗ್ ಬಾಸ್ ವೇದಿಕೆ ಏರಿದ್ದರು. ಈ ವೇಳೆ ಸುದೀಪ್ ಅವರು ಒಂದು ಪ್ರಶ್ನೆ ಕೇಳಿದ್ದರು. ‘ನಾವಿಬ್ಬರೂ ಸಿನಿಮಾ ಎಕ್ಸ್​​ಚೇಂಜ್ ಮಾಡಿದ್ರೆ ನನ್ನ ಯಾವ ಸಿನಿಮಾನ ನೀವು ಮಾಡಲು ಬಯಸುತ್ತೀರಿ ಮತ್ತು ನಿಮ್ಮ ಯಾವ ಸಿನಿಮಾನ ನಾನು ಮಾಡಬೇಕು ಎಂದು ನಿಮಗೆ ಅನಿಸುತ್ತದೆ’ ಎಂದು ಕೇಳಿದ್ದಾರೆ ಸುದೀಪ್. ಇದಕ್ಕೆ ಗಣೇಶ್ ಅವರು ನೇರವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಆತರ ಐಡಿಯಾನೇ ಇಲ್ಲ. ನೀವು ಎಲ್ಲಾ ಸಿನಿಮಾಗಳಲ್ಲೂ ಬೆಸ್ಟ್ ಕೊಟ್ಟಿದೀರಾ. ಅದನ್ನು ರಿಪ್ಲೇಸ್ ಮಾಡೋಕೆ ಯಾರಿಂದಲೂ ಸಾಧ್ಯ ಇಲ್ಲ’ ಎಂದರು ಗಣೇಶ್. ತಮ್ಮ ಮೇಲೆ ಗಣೇಶ್ ಇಟ್ಟಿರುವ ಗೌರವ ಹಾಗೂ ಪ್ರೀತಿಗೆ ಸುದೀಪ್ ಅವರಿಗೆ ಖುಷಿ ಆಯಿತು. ಅವರು ಧನ್ಯವಾದ ಹೇಳಿದರು. ಜೊತೆಗೆ ಸಿನಿಮಾ ಹೆಸರನ್ನು ಹೇಳಲೇಬೇಕು ಎಂದು ಒತ್ತಾಯ ಮಾಡಿದರು. ಆಗ ಗಣೇಶ್ ಅವರು ‘ನಲ್ಲ ಹಾಗೂ ಸ್ವಾತಿ ಮುತ್ತು’ ಸಿನಿಮಾ ಹೆಸರನ್ನು ಹೇಳಿದರು.

ಇದನ್ನೂ ಓದಿ: ‘ಮ್ಯಾಕ್ಸ್​ ಸಿನಿಮಾ ಅಪ್​ಡೇಟ್​ ಬಗ್ಗೆ ವ್ಯಂಗ್ಯ ಬೇಡ’: ಸುದೀಪ್​ ಖಡಕ್​ ಎಚ್ಚರಿಕೆ

ನಂತರ ಗಣೇಶ್ ಅವರು ಮಾತನಾಡಿದರು. ‘ನನ್ನ ನಟನೆಯ ಮುಂಗಾರು ಮಳೆ ಚಿತ್ರವನ್ನು ನೀವು ಮಾಡಬೇಕಿತ್ತು’ ಎಂದು ಹೇಳಿದರು ಅವರು. ‘ಬಹುಶಃ ನಾನು ನಟಿಸಿದ್ದರೆ ಆ ಸಿನಿಮಾ ಅಟ್ಟರ ಫ್ಲಾಪ್ ಆಗಿರೋದು. ನಾನು ಇರೋದು ಹೇಳ್ತೀನಿ. ಕೆಲವು ಸಿನಿಮಾ ಕ್ಯಾರೆಕ್ಟರ್​​ನಿಂದ ಓಡಿರುತ್ತದೆ. ಬರೆಯುವವರು ಅದನ್ನೇ ತಲೆಯಲ್ಲಿಟ್ಟುಕೊಂಡು ಬರೆದಿರುತ್ತಾರೆ. ಮುಂಗಾರುಮಳೆ ಪಾತ್ರಕ್ಕೆ ನೀವು ಹೇಳಿ ಮಾಡಿಸಿದಂಥ ಕಲಾವಿದರು. ಅದನ್ನು ಬಿಟ್ಟು ಬೇರೆ ಯಾವುದೇ ಸಿನಿಮಾ ಹೇಳಿದ್ದರೂ ಒಪ್ಪಿಕೊಳ್ಳುತ್ತಿದೆ’ ಎಂದಿದ್ದರು ಸುದೀಪ್.

ಮ್ಯಾಕ್ಸ್ ಸಿನಿಮಾ

ಕಿಚ್ಚ ಸುದೀಪ್ ಅವರು ಸದ್ಯ ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ಸುದೀಪ್ ಬಿಗ್ ಬಾಸ್ ಹಾಗೂ ಸಿಸಿಎಲ್ ಲೀಗ್​ನಲ್ಲಿ ಬ್ಯುಸಿ ಆಗಿದ್ದಾರೆ, ಸಿನಿಮಾ ಬಗ್ಗೆ ಅಪ್​ಡೇಟ್ ನೀಡುವುದಿಲ್ಲ ಎಂದು ಕೆಲವರು ಟೀಕೆ ಮಾಡಿದ್ದರು. ಇದಕ್ಕೆ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ತಿರುಗೇಟು ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ