AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಂದು ಸರಳ ಪ್ರೇಮಕಥೆ’ ನೋಡಲು ಬಸ್​ನಲ್ಲಿ ಬಂದ ಜನ

Ondu Sarala Premakathe: ವಿನಯ್ ರಾಜ್​ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾವನ್ನು ನೋಡಲು ಜನ ಬಸ್ಸು ಮಾಡಿಕೊಂಡು ಮಾಲ್​ಗೆ ಬಂದಿದ್ದಾರೆ.

‘ಒಂದು ಸರಳ ಪ್ರೇಮಕಥೆ’ ನೋಡಲು ಬಸ್​ನಲ್ಲಿ ಬಂದ ಜನ
ಒಂದು ಸರಳ ಪ್ರೇಮಕಥೆ
ಮಂಜುನಾಥ ಸಿ.
|

Updated on: Feb 10, 2024 | 5:52 PM

Share

ಡಾ ರಾಜ್​ಕುಮಾರ್ (Dr Rajkumar) ನಟನೆಯ ಸಿನಿಮಾಗಳನ್ನು ನೋಡಲು ಜನ ಎತ್ತಿನ ಬಂಡಿಗಳನ್ನು ಕಟ್ಟಿಕೊಂಡು ಬರುತ್ತಿದ್ದರು. ರಾಘವೇಂದ್ರ ರಾಜ್​ಕುಮಾರ್ ಅವರ ನಂಜುಂಡಿ ಕಲ್ಯಾಣ, ಶಿವರಾಜ್ ಕುಮಾರ್ ಅವರ ‘ಜನುಮದ ಜೋಡಿ’ ಇನ್ನಿತರೆ ಸಿನಿಮಾಗಳನ್ನು ನೋಡಲು ಜನರು ಟ್ರ್ಯಾಕ್ಟರ್​ಗಳಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದರು. ಪುನೀತ್ ಸಿನಿಮಾಗಳನ್ನು ನೋಡಲು ಸಹ ಜನ ಹೀಗೆಯೇ ಮುಗಿಬಿದ್ದು ಬರುತ್ತಿದ್ದರು. ಇದೀಗ ದೊಡ್ಮನೆಯ ಕುಡಿ ವಿನಯ್​ ರಾಜ್​ಕುಮಾರ್ ಅವರ ಸಿನಿಮಾಗಳನ್ನು ನೋಡಲು ಜನ ಬಸ್ಸು ಮಾಡಿಕೊಂಡು ಬಂದಿದ್ದಾರೆ.

ವಿನಯ್ ರಾಜ್ ಕುಮಾರ್ ಹಾಗೂ ಸಿಂಪಲ್ ಸುನಿ ಜೋಡಿಯ ಒಂದು ಸರಳ ಪ್ರೇಮಕಥೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿನ್ನೆ (ಫೆಬ್ರವರಿ 09) ರಾಜ್ಯದಾದ್ಯಂತ ಬಿಡುಗಡೆಯಾದ ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮಿಂಗ್, ಎಮೋಷನ್, ನಾಯಕ ವಿನಯ್, ನಾಯಕಿಯಾರದ ಸ್ವಾತಿಷ್ಠ,‌ ಮಲ್ಲಿಕಾ ಅವರ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್ ಸಿನಿರಸಿಕರಿಗೆ ಕನೆಕ್ಟ್ ಆಗುತ್ತಿದೆ. ವಿಮರ್ಷಕರಿಂದ ಹಾಗೂ ಪ್ರೇಕ್ಷಕರಿಂದ ಒಳ್ಳೆ ಅಭಿಪ್ರಾಯ ಪಡೆದುಕೊಳ್ಳುತ್ತಿದೆ ‘ಒಂದು ಸರಳ ಪ್ರೇಮಕಥೆ’ ಸಿನಿಮಾ.

ಇದನ್ನೂ ಓದಿ:‘ಒಂದು ಸರಳ ಪ್ರೇಮಕಥೆ’ಯ ಕೊಂಡಾಡಿದ ರಮ್ಯಾ, ವಿನಯ್ ಗುಣಗಾನ

ಹಾಸ್ಯ, ಭಾವುಕತೆ, ಸಂದೇಶ, ಪ್ರೇಮಕಥೆ ಹೀಗೆ ಒಟ್ಟಾರೆ ಮನರಂಜನೆಯ ರಸದೌತಣ ನೀಡುತ್ತಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾವನ್ನು ಬೆಂಗಳೂರಿನ ಗೊರಗುಂಟೆಪಾಳ್ಯ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್ಮೆಂಟ್​ನ ಜನ ಬಸ್​ನಲ್ಲಿ ಒರಿಯನ್ ಮಾಲ್​ಗೆ ಆಗಮಿಸಿ ಸಿನಿಮಾ ನೋಡಿದ್ದಾರೆ. ಚಿತ್ರದ ಪೋಸ್ಟರ್ ಹಿಡಿದು ಗುನುಗುನುಗು ಎಂದು ಹಾಡು ಹೇಳಿ ‘ಸರಳ ಪ್ರೇಮಕಥೆ’ ಸಿನಿಮಾಕ್ಕೆ ಜೈಕಾರ ಹಾಕಿದ್ದಾರೆ. ಈ ರೀತಿ ಬಸ್ಸು ಮಾಡಿಕೊಂಡು ಬಂದು ಸಿನಿಮಾ ನೋಡಿರುವುದು ಅಪರೂಪದ ಘಟನೆ.

ಸಾಮಾನ್ಯ ಜನರು ಮಾತ್ರವಲ್ಲದೆ ಸಿನಿಮಾ ಮಂದಿ ಸಹ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ನಿನ್ನೆ ಬೆಂಗಳೂರಿನ ಮಂತ್ರಿಮಾಲ್​ನಲ್ಲಿ ನೋಡಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಖುಷಿಪಟ್ಟರು. ವಿನಯ್, ಸುನಿ ಹಾಗೂ ಇಡೀ ತಂಡದ ಶ್ರಮಕ್ಕೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ನಟಿ ರಮ್ಯಾ ಸಹ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ವೀಕ್ಷಿಸಿದ್ದು, ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಹಾಸ್ಯ, ಭಾವುಕತೆಯ ಸರಿಯಾದ ಮಿಶ್ರಣ ಎಂದಿದ್ದಾರೆ. ನಟ ವಿನಯ್​ ರಾಜ್​ಕುಮಾರ್ ಅವರ ನಟನೆಯನ್ನು, ಸಿನಿಮಾ ರಂಗದಲ್ಲಿ ಅವರ ಪಯಣವನ್ನು ಸಹ ಕೊಂಡಾಡಿದ್ದಾರೆ.

‘ಒಂದು ಸರಳ ಪ್ರೇಮಕಥೆ’ ವಿನಯ್ ರಾಜ್‌ಕುಮಾರ್‌ಗೆ ಬ್ರೇಕ್ ಕೊಟ್ಟಿದೆ. ಸಿಂಪಲ್ ಸುನಿ ಮತ್ತೊಂದು ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಿಳಿ ಹಾಸ್ಯ, ಒನ್‌ಲೈನರ್ ಡೈಲಾಗ್‌ಗಳು ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತಿವೆ. ಇಂತಹ ಸುಂದರ ಪ್ರೇಮಕಥೆಗೆ ಶಕ್ತಿಯಾಗಿ ನಿಂತ ನಿರ್ಮಾಪಕ ಮೈಸೂರು ರಮೇಶ್ ಅವರನ್ನು‌ ಜನ ಕೊಂಡಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ