AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗರಾಜ್ ಭಟ್ ನಿರ್ಮಾಣದ ಮುಂದಿನ ಚಿತ್ರಕ್ಕೆ ‘ಉಡಾಳ’ ಶೀರ್ಷಿಕೆ; ಇದು ಪಕ್ಕಾ ಜವಾರಿ ಕಥೆ

‘ಉಡಾಳ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವ ಅಮೋಲ್ ಪಾಟೀಲ್ ಅವರು ಮೂಲತಃ ಬಿಜಾಪುರದವರು. ಶಿಕ್ಷಣ ಪಡೆದ ಬಳಿಕ ಅವರು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದಾರೆ. ಅವರಿಗೆ ಉತ್ತರ ಕರ್ನಾಟಕ ಸ್ಟೈಲ್​ನ ಸಿನಿಮಾ ಮಾಡಬೇಕು ಎನ್ನುವ ಆಸೆ ಇತ್ತು. ಈಗ ‘ಉಡಾಳ’ ಮೂಲಕ ಉತ್ತರ ಕರ್ನಾಟಕ ಸೊಗಡಿನ ಸಿನಿಮಾ ಮಾಡಲು ಅವರು ಮುಂದಾಗಿದ್ದಾರೆ.

ಯೋಗರಾಜ್ ಭಟ್ ನಿರ್ಮಾಣದ ಮುಂದಿನ ಚಿತ್ರಕ್ಕೆ ‘ಉಡಾಳ’ ಶೀರ್ಷಿಕೆ; ಇದು ಪಕ್ಕಾ ಜವಾರಿ ಕಥೆ
ಉಡಾಳ ತಂಡ
ರಾಜೇಶ್ ದುಗ್ಗುಮನೆ
|

Updated on:Feb 02, 2024 | 2:01 PM

Share

ಯೋಗರಾಜ್ ಭಟ್ (Yogaraj Bhat) ಅವರು ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಬ್ಯುಸಿ ಆಗಿದ್ದಾರೆ. ಅವರು ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಈಗ ಅವರ ನಿರ್ಮಾಣದ ಹೊಸ ಚಿತ್ರಕ್ಕೆ ‘ಉಡಾಳ’ ಎಂದು ಶೀರ್ಷಿಕೆ ಇಡಲಾಗಿದೆ. ರವಿ ಶಾಮನೂರು ನಿರ್ಮಾಣದಲ್ಲಿ ಯೋಗರಾಜ್ ಭಟ್​ ಅವರಿಗೆ ಸಾಥ್ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ‘ಪದವಿಪೂರ್ವ’ ಚಿತ್ರದ ಮೂಲಕ ಪೃಥ್ವಿ ಶಾಮನೂರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈಗ ಅವರು ‘ಉಡಾಳ’ (Udala Movive) ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ಯೋಗರಾಜ್ ಭಟ್ ಶಿಷ್ಯ ಅಮೋಲ್ ಪಾಟೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್​ನ ಡಾಲಿ ಧನಂಜಯ ಅನಾವರಣ ಮಾಡಿದ್ದಾರೆ.

ಟೈಟಲ್ ಅನಾವರಣ ಮಾಡಿದ ಬಳಿಕ ಧನಂಜಯ್ ಅವರು ಖುಷಿ ಹಂಚಿಕೊಂಡಿದ್ದಾರೆ. ಧನಂಜಯ್ ನಟನೆಯ ‘ಬಡವ ರಾಸ್ಕರ್’ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದು ಯೋಗರಾಜ್ ಭಟ್. ಹೀಗಾಗಿ, ಧನಂಜಯ್​ಗೆ ಖುಷಿ ಇದೆ. ಅವರು ಯೋಗರಾಜ್ ಭಟ್ ನಿರ್ಮಾಣದ ಸಿನಿಮಾದ ಟೈಟಲ್ ಅನಾವರಣ ಮಾಡುವ ಮೂಲಕ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲದೆ, ಪೃಥ್ವಿ ಅವರ ನಟನೆಯನ್ನು ಹೊಗಳಿದ್ದಾರೆ.

ನಿರ್ದೇಶಕ ಅಮೋಲ್ ಪಾಟೀಲ್ ಅವರು ಮೂಲತಃ ಬಿಜಾಪುರದವರು. ಶಿಕ್ಷಣ ಪಡೆದು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದಾರೆ. ಅವರಿಗೆ ಉತ್ತರ ಕರ್ನಾಟಕ ಸ್ಟೈಲ್​ನ ಸಿನಿಮಾ ಮಾಡಬೇಕು ಎನ್ನುವ ಆಸೆ ಇತ್ತು. ಈಗ ಅವರು ಉತ್ತರ ಕರ್ನಾಟಕ ಸೊಗಡಿನ ಸಿನಿಮಾ ಮಾಡಲು ಅವರು ಮುಂದಾಗಿದ್ದಾರೆ. ಹೀಗಾಗಿ ಉತ್ತರ ಕರ್ನಾಕಟದಲ್ಲಿ ಹೆಚ್ಚು ಬಳಕೆಯಲ್ಲಿ ಇರುವ ‘ಉಡಾಳ’ ಶಬ್ದವನ್ನೇ ಟೈಟಲ್ ಆಗಿ ಇಟ್ಟಿದ್ದಾರೆ.

ಅಮೋಲ್ ಪಾಟಿಲ್ ಈ ಅವಕಾಶಕ್ಕಾಗಿ ಖುಷಿಯಾಗಿದ್ದಾರೆ. ‘ನನಗೆ ಅವಕಾಶ ಕೊಟ್ಟಿದ್ದಕ್ಕೆ ಗುರುಗಳಾದ ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ಅವರಿಗೆ ಧನ್ಯವಾದ ಹೇಳುತ್ತೇನೆ. ಇದು ಉತ್ತರ ಕರ್ನಾಟಕದ ಶೈಲಿಯ ಸಿನಿಮಾ. ಫೆಬ್ರವರಿ ಅಂತ್ಯಕ್ಕೆ ಬಿಜಾಪುರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹೆಚ್ಚಿನ ಚಿತ್ರೀಕರಣ ಆ ಭಗದಲ್ಲೇ ನಡೆಯಲಿದೆ’ ಎಂದು ಮಾಹಿತಿ ನೀಡಿದರು ನಿರ್ದೇಶಕರು.

ಇದನ್ನೂ ಓದಿ: ‘ಕುಲದಲ್ಲಿ ಕೀಳ್ಯಾವುದೋ’: ಸೆಟ್ಟೇರಿತು ಯೋಗರಾಜ್ ಭಟ್ಟರ ಶಿಷ್ಯನ ಸಿನಿಮಾ

ಬಿಜಾಪುರದಲ್ಲಿ ಟೂರಿಸ್ಟ್ ಗೈಡ್ ಆಗಿ ಪಕ್ಯ ಹೆಸರಿನ ಪಾತ್ರದಲ್ಲಿ ಪೃಥ್ವಿ ಕಾಣಿಸಿಕೊಳ್ಳಲಿದ್ದಾರೆ. ಹೃತಿಕಾ ಶ್ರೀನಿವಾಸ್ ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಚೇತನ್ ಸಂಗೀತ ಸಂಯೋಜನೆ ಹಾಗೂ ಶಿವಶಂಕರ್ ನೂರಂಬಡ ಛಾಯಾಗ್ರಹಣ ‘ಉಡಾಳ’ ಸಿನಿಮಾಗೆ ಇದೆ. ಈ ಮೊದಲು ಪೃಥ್ವಿ ನಟಿಸಿದ್ದ ‘ಪದವಿಪೂರ್ವ’ ಚಿತ್ರವನ್ನು ಯೋಗರಾಜ್​ ಭಟ್ ಅವರೇ ನಿರ್ಮಾಣ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:54 pm, Fri, 2 February 24