ಬಿಡುಗಡೆ ಆಗುತ್ತಿದೆ ಮರ್ಡರ್ ಮಿಸ್ಟರಿ ಜಾನರ್ನ ‘ಸಪ್ಲೇಯರ್ ಶಂಕರ’ ಚಿತ್ರ
Supplier Shankara: ಟ್ರೈಲರ್, ಪೋಸ್ಟರ್ಗಳಿಂದ ಈಗಾಗಲೇ ಬಹುವಾಗಿ ಗಮನ ಸೆಳೆದಿರುವ ‘ಸಪ್ಲೈಯರ್ ಶಂಕರ’ ಸಿನಿಮಾ ಬಿಡುಗಡೆ ಆಗುತ್ತಿದೆ.
“ಗಂಟು ಮೂಟೆ” ಮತ್ತು “ಟಾಮ್ & ಜೆರ್ರಿ” ಸಿನಿಮಾಗಳ ಮೂಲಕ ಜನಪ್ರಿರಾಗಿರುವ ನಿಶ್ಚಿತ್ ಕರೋಡಿ ಈಗ ಹೊಸ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ‘ಸಪ್ಲೈಯರ್ ಶಂಕರ’ (supplier shankara) ಸಿನಿಮಾದಲ್ಲಿ ಸಪ್ಲೈಯರ್ ಆಗಿ ನಿಶ್ಚಿತ್ ನಟಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ಗೆ ಜಾನರ್ಗೆ ಸೇರಿದ ಈ ಸಿನಿಮಾ ಫೆಬ್ರವರಿ 2ರಂದು ಬಿಡುಗಡೆ ಆಗುತ್ತಿದೆ.
ಎಂ ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಯುವ ನಿರ್ದೇಶಕ ರಂಜಿತ್ ನಿರ್ದೇಶನ ಮಾಡಿದ್ದಾರೆ. ‘ಸಪ್ಲೈಯರ್ ಶಂಕರ’ ಸಿನಿಮಾದ ಟ್ರೈಲರ್, ಹಾಡು, ಪೋಸ್ಟರ್ಗಳು ಈಗಾಗಲೇ ಬಿಡುಗಡೆ ಆಗಿದ್ದು ಬಹುವಾಗಿ ಗಮನ ಸೆಳೆದಿವೆ. ಸಿನಿಮಾದಲ್ಲಿನ ಕಚ್ಚಾತನವನ್ನು ಟ್ರೈಲರ್ನಲ್ಲಿ ತೋರಿಸಲಾಗಿದ್ದು, ಟ್ರೈಲರ್ ನೋಡಿದ ಹಲವರು ತಮಿಳಿನ ‘ವಿಸಾರನೈ’, ‘ವಡಾ ಚೆನ್ನೈ’ ಮಾದರಿಯ ಸಿನಿಮಾಗಳಿಗೆ ಹೋಲಿಸಿದ್ದರು.
ಇದನ್ನೂ ಓದಿ: ಗಂಟು ಮೂಟೆ ನಾಯಕನ ಹೊಸ ಸಿನಿಮಾ ಸಪ್ಲೇಯರ್ ಶಂಕರ ಹಾಡು ಬಿಡುಗಡೆ
ಬಾರ್ ಸಪ್ಲೇಯರ್ ಒಬ್ಬನ ಜೀವನ ವಿವಿಧ ಮಜಲುಗಳನ್ನು ತೆರೆದಿಡುವ ಪ್ರಯತ್ನವನ್ನು ನಿರ್ದೇಶಕರು ಈ ಚಿತ್ರದಲ್ಲಿ ಮಾಡಿದ್ದಾರೆ. ಬಾರ್ ಸಪ್ಲೈಯರ್ ಆಗಿ ಬಿಡಿಗಾಸು ದುಡಿಯುತ್ತಿರುವ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ಆಗುವ ಘಟನೆಗಳು, ಆ ಸುಳಿಯಿಂದ ಸಪ್ಲೈಯರ್ ಶಂಕರ ಹೇಗೆ ಹೊರಬರುತ್ತಾನೆ, ಈ ಹಾದಿಯಲ್ಲಿ ಆತ ಎದುರಿಸುವ ಅವಮಾನ, ಹಿಂಸೆಯನ್ನು ಕತೆ ಒಳಗೊಂಡಿದೆ. ಭಾವನಾತ್ಮಕ ಅಂಶಗಳ ಜೊತೆಗೆ ಇದೊಂದು ಮರ್ಡರ್ ಮಿಸ್ಟರಿ ಜಾನರ್ ನ ಚಿತ್ರವಾಗಿದರೂ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಸಿನಿಮಾದ ಬಹುತೇಕ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲೇ ಆಗಿದೆ.
‘ಸಪ್ಲೇಯರ್ ಶಂಕರ’ನ ಪಾತ್ರದಲ್ಲಿ ‘ಗಂಟು ಮೂಟೆ’ ಮತ್ತು ‘ಟಾಮ್ & ಜೆರ್ರಿ’ಸಿನಿಮಾಗಳ ಮೂಲಕ ಜನಪ್ರಿರಾಗಿರುವ ನಿಶ್ಚಿತ್ ಕರೋಡಿ ನಟಿಸಿದ್ದಾರೆ. ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ರಂಜಿತ್ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸತೀಶ್ ಕುಮಾರ್ ಛಾಯಾಗ್ರಹಣ , ಸತೀಶ್ ಚಂದ್ರಯ್ಯ ಅವರ ಸಂಕಲನ ಹಾಗೂ ಬಾಲಾಜಿ ಅವರ ಕಲಾ ನಿರ್ದೇಶನ “ಸಪ್ಲೇಯರ್ ಶಂಕರ” ಚಿತ್ರಕ್ಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ