‘ಗಂಟು ಮೂಟೆ’ ನಾಯಕನ ಹೊಸ ಸಿನಿಮಾ ‘ಸಪ್ಲೇಯರ್ ಶಂಕರ’: ಹಾಡು ಬಿಡುಗಡೆ

supplier Shankara: ಬಾರ್ ಸಪ್ಲೈಯರ್ ಜೀವನದ ಸುತ್ತ ಹೆಣೆಯಲಾದ ಕತೆಯುಳ್ಳ 'ಸಪ್ಲೈಯರ್ ಶಂಕರ' ಸಿನಿಮಾದ ಎರಡನೇ ಹಾಡು ಇದೀಗ ಆನಂದ್ ಆಡಿಯೋ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದೆ.

'ಗಂಟು ಮೂಟೆ' ನಾಯಕನ ಹೊಸ ಸಿನಿಮಾ 'ಸಪ್ಲೇಯರ್ ಶಂಕರ': ಹಾಡು ಬಿಡುಗಡೆ
ಗಂಟು ಮೂಟೆ
Follow us
| Edited By: ಮದನ್​ ಕುಮಾರ್​

Updated on:Sep 16, 2023 | 7:33 AM

“ಗಂಟು ಮೂಟೆ” ಮತ್ತು “ಟಾಮ್ & ಜೆರ್ರಿ” ಸಿನಿಮಾಗಳ ಮೂಲಕ ಜನಪ್ರಿರಾಗಿರುವ ನಿಶ್ಚಿತ್ ಕರೋಡಿ ಈಗ ಹೊಸ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ‘ಸಪ್ಲೈಯರ್ ಶಂಕರ’ ಸಿನಿಮಾದಲ್ಲಿ ಸಪ್ಲೈಯರ್ ಆಗಿ ನಿಶ್ಚಿತ್ ನಟಿಸಿದ್ದಾರೆ. ಈ ಸಿನಿಮಾದ ಹೊಸ ಹಾಡೊಂದು ಇದೀಗ ಬಿಡುಗಡೆ ಆಗಿದೆ.

ಎಂ ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ಅವರುಗಳು ತ್ರಿನೇತ್ರ ಫಿಲಂಸ್ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿರುವ ‘ಸಪ್ಲೈಯರ್ ಶಂಕರ’ ಸಿನಿಮಾವನ್ನು ರಂಜಿತ್ ನಿರ್ದೇಶನ ಮಾಡಲಿದ್ದಾರೆ. ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ “ಸಪ್ಲೇಯರ್ ಶಂಕರ” ಸಿನಿಮಾದ ಎರಡನೇ ಹಾಡು ಇದೀಗ ಆನಂದ್ ಆಡಿಯೋ ಯೂಟ್ಯೂಬ್ ಮೂಲಕ ಬಿಡುಗಡೆ ಆಗಿದೆ.

ಇದೀಗ ಬಿಡುಗಡೆ ಆಗಿರುವ ಹೊಸ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. “ಮಾಡೊ ಕೆಲಸವ ನೀನು ಮರೆಸಿದೆ” ಎಂಬ ಈ ಪ್ರೇಮಗೀತೆಯನ್ನು ಐಶ್ವರ್ಯ ರಂಗರಾಜನ್ ಹಾಗೂ ನಕುಲ್ ಅಭಯಂಕರ್ ಸುಮಧುರವಾಗಿ ಹಾಡಿದ್ದಾರೆ. ಹಾಡಿಗೆ ಸಂಗೀತ ನೀಡಿರುವುದು ಆರ್ ಬಿ ಭರತ್. ಈ ಸಿನಿಮಾದ ಮೊದಲ ಹಾಡು ಜನಮನ್ನಣೆ ಗಳಿಸಿತ್ತು. ಅಂತೆಯೇ ಇದೀಗ ಎರಡನೇ ಹಾಡು ಸಹ ಸುಂದರವಾಗಿದ್ದು, ವೈರಲ್ ಆಗಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು.

ಇದನ್ನೂ ಓದಿ:ಸರ್ಕಾರಕ್ಕೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಮಾಡಿದ ಮನವಿ ಏನು?

ಬಾರ್ ಸಪ್ಲೇಯರ್ ಒಬ್ಬನ ಜಿವನದಲ್ಲಿ ನಡೆಯುವ ಕಥೆಯನ್ನು ಇರಿಸಿಕೊಂಡು “ಸಪ್ಲೇಯರ್ ಶಂಕರ” ಸಿನಿಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಆರಾಧ್ಯ ನಾಯಕಿಯಾಗಿ ನಟಿಸಿದ್ದಾರೆ. ಪ್ರತಿಭಾವಂತ ನಟ ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ಮುಂತಾದವರು ಈ ಸಿನಿಮಾದ ಇನ್ನಿತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ..

ನಿರ್ದೇಶಕ ರಂಜಿತ್ ಅವರೆ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಪ್ರೇಮ, ಹಾಸ್ಯ, ತಾಯಿ-ಮಗನ ಸಂಬಂಧದ ಭಾವುಕತೆ, ಬಾರ್ ಸಪ್ಲೇಯರ್ ಜೀವನದ ಅನಾವರಣದ ಜೊತೆಗೆ ಸಸ್ಪೆನ್ ಥ್ರಿಲ್ಲರ್ ಅಂಶವನ್ನೂ ಸಹ ಈ ಸಿನಿಮಾ ಒಳಗೊಂಡಿದೆ ಎಂದು ಚಿತ್ರತಂಡ ಹೇಳಿದೆ. ಸತೀಶ್ ಕುಮಾರ್ ಈ ಸಿನಿಮಾದ ಸಿನಿಮಾಟೊಗ್ರಫರ್ ಆಗಿದ್ದಾರೆ. ಸತೀಶ್ ಚಂದ್ರಯ್ಯ ಎಡಿಟಿಂಗ್ ಮಾಡುತ್ತಿದ್ದಾರೆ. ಬಾಲಾಜಿ ಕಲಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದೆ. “ಸಪ್ಲೇಯರ್ ಶಂಕರ” ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೆಲಸ ಪ್ರಸ್ತುತ ಚಾಲ್ತಿಯಲ್ಲಿದೆ. ಈ ವರ್ಷದ ಕೊನೆಗೆ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:42 pm, Fri, 15 September 23

ತಾಜಾ ಸುದ್ದಿ
ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿಯನ್ನ ಕೊಡ್ತೀವಿ: ಸಚಿವ KH ಮುನಿಯಪ್ಪ
ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿಯನ್ನ ಕೊಡ್ತೀವಿ: ಸಚಿವ KH ಮುನಿಯಪ್ಪ
ದತ್ತಣ್ಣನ ನಟನೆ ಬಗ್ಗೆ ಜಗ್ಗೇಶ್ ಹೆಮ್ಮೆಯ ಮಾತುಗಳು
ದತ್ತಣ್ಣನ ನಟನೆ ಬಗ್ಗೆ ಜಗ್ಗೇಶ್ ಹೆಮ್ಮೆಯ ಮಾತುಗಳು
ಯಾದಗಿರಿ: ಕೋಳಿ ಪಂದ್ಯದ ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ
ಯಾದಗಿರಿ: ಕೋಳಿ ಪಂದ್ಯದ ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ