ಆ ಒಂದು ಘಟನೆಯಿಂದ ಡಾರ್ಲಿಂಗ್ ಕೃಷ್ಣ ಪ್ರೀತಿಗೆ ಓಕೆ ಎಂದಿದ್ದ ಮಿಲನಾ ನಾಗರಾಜ್

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಪ್ರೇಮಕಥೆ ಚರ್ಚಿಸೋಣ. 2012ರಲ್ಲಿ ಪರಿಚಯವಾದ ಇವರ ಮಧ್ಯೆ ಪರಿಚಯ ಆಯಿತು. 2015ರಲ್ಲಿ ಕೃಷ್ಣ ಅವರು ಪ್ರೇಮ ನಿವೇದನೆ ಮಾಡಿದರು. ಮತ್ತು 2021ರಲ್ಲಿ ವಿವಾಹವಾದರು. ಕೆಲಸದಲ್ಲಿನ ಹತ್ತಿರದ ಸಂಬಂಧ ಮತ್ತು ಪರಸ್ಪರ ಗೌರವ ಅವರ ಪ್ರೇಮದ ಬೆಳವಣಿಗೆಗೆ ಕಾರಣವಾಯಿತು.

ಆ ಒಂದು ಘಟನೆಯಿಂದ ಡಾರ್ಲಿಂಗ್ ಕೃಷ್ಣ ಪ್ರೀತಿಗೆ ಓಕೆ ಎಂದಿದ್ದ ಮಿಲನಾ ನಾಗರಾಜ್
ಕೃಷ್ಣ-ಮಿಲನಾ
Edited By:

Updated on: Feb 14, 2025 | 8:05 AM

ಇಂದು (ಫೆಬ್ರವರಿ 14) ವ್ಯಾಲೆಂಟೈನ್ಸ್ ಡೇ. 2021ರಲ್ಲಿ ಈ ವಿಶೇಷ ದಿನದಂದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ವಿವಾಹ ಆದರು. ಹೀಗಾಗಿ, ಈ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವವೂ ಹೌದು. ಈಗ ಮಿಲನಾ ತಾಯಿ ಆಗಿದ್ದಾರೆ. ಅವರ ಕುಟುಂಬ ಹಿರಿದಾಗಿದೆ. ವಿವಾಹ ವಾರ್ಷಿಕೋತ್ಸವದ ದಿನ ಅವರ ಲವ್​ಸ್ಟೋರಿ ಬಗ್ಗೆ ನೋಡೋಣ.

2012ರಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಪರಿಚಯ ಆಯಿತು. ಇಬ್ಬರ ಮಧ್ಯೆ ಅಂಥ ಒಳ್ಳೆಯ ಗೆಳೆತನ ಏನೂ ಬೆಳೆದಿರಲಿಲ್ಲ. ಹಾಯ್-ಬಾಯ್ ಫ್ರೆಂಡ್ಸ್ ಇದ್ದರು. 2015ರಲ್ಲಿ ಮಿಲನಾಗೆ ಪ್ರಪೋಸ್ ಮಾಡಿದರು. ‘ನನ್ನ ಮದುವೆ ಆಗ್ತೀರಾ’ ಎಂದು ನೇರವಾಗಿ ವಿವಾಹ ಕೋರಿಕೆ ಇಟ್ಟರು.

‘ಮದರಂಗಿಗೆ ಹೀರೋಯಿನ್ ಹುಡುಕ್ತಾ ಇದ್ದೆ. ಮಿಲನಾ ಅವರಿಗೆ ಕರೆ ಮಾಡಿದೆ. ಸಿನಿಮಾ ಮಾಡುತ್ತಿದ್ದೇನೆ. ಹೀರೋಯಿನ್ ಹುಡುಕ್ತಾ ಇದ್ದೆ ಎಂದೆ. ಕಥೆ ಕೇಳಿದರು. ಇಷ್ಟ ಆಗಿಲ್ಲ. ಹೊಸ ಹುಡುಗನ ಜೊತೆ ಯಾಕೆ ಆ್ಯಕ್ಟ್ ಮಾಡೋದು ಎಂದು ಅವರು ಸಿನಿಮಾ ರಿಜೆಕ್ಟ್ ಮಾಡಿದ್ದರು. ಆ ಬಳಿಕ ಕಚೇರಿ ಒಂದರಲ್ಲಿ ಒಟ್ಟಾಗಿ ಸಿಕ್ಕರು. ಅಲ್ಲಿ ಇಬ್ಬರ ಮಧ್ಯೆ ಪರಿಚಯ ಆಯಿತು’ ಎಂದಿದ್ದರು ಅವರು. ‘ಡಾರ್ಲಿಂಗ್ ಡಾರ್ಲಿಂಗ್..’ ಹಾಡನ್ನು ಮಿಲನಾ ಮಾಡಬೇಕಿತ್ತು. ಅದು ಮಿಸ್ ಆಯ್ತು.

‘ಮಿಲನಾ ಮದುವೆ ಆಗಬೇಕು ಎಂದುಕೊಂಡೆ. ಮೇ 14ಕ್ಕೆ ಅವಳಿಗೆ ಪ್ರಪೋಸ್ ಮಾಡಿದೆ. ಮದುವೆ ಆಗ್ತೀರಾ ಎಂದು ಕೇಳಿದ್ದೆ. ಆದರೆ, ಮಿಲನಾ ಅವರು ಸಮಯ ತೆಗೆದುಕೊಂಡರು. ಪಕ್ಕಾ ಲೆಕ್ಕಾಚಾರ ಹಾಕಿ ಮಿಲನಾನ ಪ್ರೀತಿಸಿದ್ದರು’ ಎಂದು ಡಾರ್ಲಿಂಗ್ ಕೃಷ್ಣ ಅವರು ಹೇಳಿದ್ದರು. ಒಂದೇ ವೃತ್ತಿ ಆಗಿದ್ದರಿಂದ ಇವರಿಗೆ ಮದುವೆ ಆಗಬೇಕಾಯಿತು.

‘ನಾನು ಪ್ರಪೋಸ್ ಮಾಡಿದೆ. ಟೈಮ್ ಬೇಕು ಎಂದರು. ಆ ಬಳಿಕ ಅವರು ಬ್ಯುಸಿ ಆದರು. ಸಾಕಷ್ಟು ಜಾಹೀರಾತು ಮಾಡುತ್ತಿದ್ದರು. ವಾರದಲ್ಲಿ ಮೂರು ದಿನ ಬೇರೆ ರಾಜ್ಯಕ್ಕೆ ಹೋಗಬೇಕಿತ್ತು. ಹೀಗಾಗಿ, ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಬಂದು ಬಿಡೋ ಕೆಲಸ ಮಾಡುತ್ತಿದ್ದೆ’ ಎಂದಿದ್ದರು ಡಾರ್ಲಿಂಗ್ ಕೃಷ್ಣ.

ಇದನ್ನೂ ಓದಿ: ಎಷ್ಟು ಕ್ಯೂಟ್ ಆಗಿದ್ದಾಳೆ ನೋಡಿ ಮಿಲನಾ ಮಗಳು; ಇಲ್ಲಿವೆ ಸುಂದರ ಚಿತ್ರಗಳು

‘ಒಂದು ದಿನ ಕೃಷ್ಣಗೆ ಶೂಟಿಂಗ್ ಇತ್ತು. ಬೆಳಿಗ್ಗೆ ಎರಡೂವರೆಗೆ ಶೂಟ್ ಮುಗಿಸಿ, ಮೂರುವರೆಗೆ ನನ್ನ ಪಿಕ್ ಮಾಡಲು ಬಂದರು. ಅವರು ವಿಮಾನ ನಿಲ್ದಾಣಕ್ಕೆ ನನ್ನ ಬಿಟ್ಟು ಹೋದರು. ಇದು ನನ್ನ ಸಾಕಷ್ಟು ಇಂಪ್ರೆಸ್ ಮಾಡಿತ್ತು. ಇವರ ಬಗ್ಗೆ ಯೋಚಿಸಬಹುದಲ್ಲ ಎಂದು ನಾನು ಅಂದೇ ಅಂದುಕೊಂಡೆ’ ಎಂದು ಮಿಲನಾ ನಾಗರಾಜ್ ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:03 am, Fri, 14 February 25

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us