- Kannada News Photo gallery Milana Nagaraj shares Her Daughter Pari Photos On Instagram cinema News in Kannada
ಎಷ್ಟು ಕ್ಯೂಟ್ ಆಗಿದ್ದಾಳೆ ನೋಡಿ ಮಿಲನಾ ಮಗಳು; ಇಲ್ಲಿವೆ ಸುಂದರ ಚಿತ್ರಗಳು
ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಅವರು ತಮ್ಮ ಮಗಳಿಗೆ ಪರಿ ಎಂದು ಹೆಸರು ಇಟ್ಟಿದ್ದಾರೆ. ಈ ಹೆಸರಿನಲ್ಲಿ ಮಗಳ ಫೋಟೋಗಳನ್ನು ಮಿಲನಾ ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಮಗಳ ಫೋಟೋ ಹಂಚಿಕೊಂಡಿದ್ದಾರೆ.
Updated on: Nov 29, 2024 | 10:42 AM

ನಟಿ ಮಿಲನಾ ನಾಗರಾಜ್ ಅವರು ಈ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಅವರು ಈ ಮೊದಲು ಹಂಚಿಕೊಂಡಿದ್ದರು. ಈಗ ಮಿಲನಾ ನಾಗರಾಜ್ ಅವರು ಮಗಳ ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಅವರು ತಮ್ಮ ಮಗಳಿಗೆ ಪರಿ ಎಂದು ಹೆಸರು ಇಟ್ಟಿದ್ದಾರೆ. ಈ ಹೆಸರಿನಲ್ಲಿ ಮಗಳ ಫೋಟೋಗಳನ್ನು ಮಿಲನಾ ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಮಗಳ ಫೋಟೋ ಹಂಚಿಕೊಂಡಿದ್ದಾರೆ.

ಮಿಲನಾ ಅವರು ಹಂಚಿಕೊಂಡಿರೋ ಫೋಟೋದಲ್ಲಿ ಪರಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.

‘ಅಮ್ಮ ಮಗಳು ಇಬ್ಬರೂ ಕ್ಯೂಟ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಹೆಸರು ಹಾಗೂ ಇಬ್ಬರೂ ಚೆನ್ನಾಗಿ ಕಾಣಿಸುತ್ತಿದ್ದೀರಿ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.

ಸದ್ಯ ಮಿಲನಾ ಅವರು ಮಗಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಅದರ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ.




