ಜುಲೈ 4ಕ್ಕೆ ದರ್ಶನ್, ಯುವ ಕೇಸ್ ವಿಚಾರಣೆ; ಏನಾಗಲಿದೆ ಈ ಹೀರೋಗಳ ಭವಿಷ್ಯ?

|

Updated on: Jul 03, 2024 | 10:03 PM

ಜಾಮೀನಿಗಾಗಿ ದರ್ಶನ್​ ಅವರು ಕಷ್ಟಪಡುತ್ತಿದ್ದಾರೆ. ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ಆಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಜು.4ರಂದು ಮತ್ತೆ ಕೋರ್ಟ್​ಗೆ ಹಾಜರುಪಡಿಸುವ ಸಾಧ್ಯತೆಯಿದೆ. ಅದೇ ರೀತಿ, ನಟ ಯುವ ರಾಜ್​ಕುಮಾರ್ ಅವರ ಡಿವೋರ್ಸ್​ ಕೇಸ್​ ವಿಚಾರಣೆ ಕೂಡ ಜುಲೈ 4ರಂದು ನಡೆಯಲಿದೆ. ಈ ಕಾರಣದಿಂದ ಈ ಇಬ್ಬರು ಹೀರೋಗಳಿಗೆ ಇದು ಮಹತ್ವದ ದಿನ ಆಗಲಿದೆ.

ಜುಲೈ 4ಕ್ಕೆ ದರ್ಶನ್, ಯುವ ಕೇಸ್ ವಿಚಾರಣೆ; ಏನಾಗಲಿದೆ ಈ ಹೀರೋಗಳ ಭವಿಷ್ಯ?
ಯುವ ರಾಜ್​ಕುಮಾರ್​, ದರ್ಶನ್​
Follow us on

ಕನ್ನಡ ಚಿತ್ರರಂಗ ಈಗ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಒಂದೆಡೆ ನಟ ದರ್ಶನ್​ (Darshan) ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಇನ್ನೊಂದೆಡೆ ಯುವ ರಾಜ್​ಕುಮಾರ್​ (Yuva Rajkumar) ಅವರು ಫ್ಯಾಮಿಲಿ ಕಿರಿಕ್​ನಿಂದ ಸುದ್ದಿ ಆಗಿದ್ದಾರೆ. ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ಯುವ ರಾಜ್​ಕುಮಾರ್​ ವಿಚ್ಛೇದನ (Divorce) ಬಯಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಜುಲೈ 4ರಂದು ಕೌಟುಂಬಿಕ ನ್ಯಾಯಾಲಯಕ್ಕೆ ಬರಲಿದ್ದಾರೆ. ಅದೇ ರೀತಿ ದರ್ಶನ್​ ಅವರ ನ್ಯಾಯಾಂಗ ಬಂಧನ ಮುಕ್ತಾಯ ಆಗುತ್ತಿದ್ದು, ಅವರನ್ನು ಕೂಡ ಜು.4ರಂದು ಜಡ್ಜ್​ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಎ2 ಆಗಿರುವ ದರ್ಶನ್​ ಅವರನ್ನು ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜೂನ್​ 22ರಿಂದ ದರ್ಶನ್​ ಅವರ ಜೈಲು ವಾಸ ಆರಂಭ ಆಗಿತ್ತು. ಜುಲೈ 4ಕ್ಕೆ ನ್ಯಾಯಾಂಗ ಬಂಧನ ಅಂತ್ಯವಾಗುವ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್​ ಮುಂದೆ ಹಾಜರುಪಡಿಸಬಹುದು. ಇದು ಗಂಭೀರ ಪ್ರಕರಣ ಆಗಿರುವುದರಿಂದ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಮುಂದುವರಿಸುವ ನಿರೀಕ್ಷೆ ಇದೆ.

ದರ್ಶನ್​ ಅವರು ಪ್ರಭಾವಿ ವ್ಯಕ್ತಿ. ಅವರು ಗಂಭೀರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಕೇಸ್​ಗೆ ಕುರಿತಂತೆ ಬೆಂಗಳೂರು ಪೊಲೀಸರು ಅನೇಕ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಹಂತದಲ್ಲಿ ಆರೋಪಿಗಳಿಂದ ಸಾಕ್ಷಿ ನಾಶಕ್ಕೆ ಪ್ರಯತ್ನ ನಡೆಯಬಹುದು. ಅಲ್ಲದೇ, ಕೊಲೆ ನಡೆದ ರೀತಿ ಬಹಳ ಹೀನಾಯವಾಗಿದೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಈ ಎಲ್ಲ ಕಾರಣಗಳಿಂದ ದರ್ಶನ್​ಗೆ ಜಾಮೀನು ಸಿಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ: ನನ್ನದೂ ತಪ್ಪಿದೆ, ಯುವ ಮಾತು ಕೇಳಿ ಹಾಗೆ ಮಾಡಿದೆ: ಸಪ್ತಮಿ ಗೌಡ ಆಡಿಯೋ ವೈರಲ್

ಇನ್ನು, ಯುವ ರಾಜ್​ಕುಮಾರ್​ ಅವರ ಕುಟುಂಬದ ವಿಚಾರ ಬೀದಿಗೆ ಬಂದಿದೆ. ಪತ್ನಿ ಶ್ರೀದೇವಿ ಭೈರಪ್ಪ ಮೇಲೆ ಯುವ ಅವರು ಅನೇಕ ಆರೋಪಗಳನ್ನು ಮಾಡಿದ್ದಾರೆ. ಯುವ ಕಳಿಸಿದ ಲೀಗಲ್​ ನೋಟಿಸ್​ಗೆ ಪ್ರತಿಕ್ರಿಯೆ ನೀಡಿರುವ ಶ್ರೀದೇವಿ ಅವರು ಕೆಲವು ಶಾಕಿಂಗ್​ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ನಟಿ ಸಪ್ತಮಿ ಗೌಡ ಜೊತೆ ಯುವ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ಕಾರಣದಿಂದಲೇ ಯುವ-ಶ್ರೀದೇವಿ ಸಂಸಾರದಲ್ಲಿ ಮನಸ್ತಾಪ ಉಂಟಾಗಿದೆ. ಈ ದಂಪತಿಯ ವಿಚ್ಛೇದನದ ವಿಚಾರಣೆ ಕೂಡ ಜುಲೈ 4ರಂದು ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.