AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನದೂ ತಪ್ಪಿದೆ, ಯುವ ಮಾತು ಕೇಳಿ ಹಾಗೆ ಮಾಡಿದೆ: ಸಪ್ತಮಿ ಗೌಡ ಆಡಿಯೋ ವೈರಲ್

ಯುವ ರಾಜ್​ಕುಮಾರ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಅವರ ಪತಿ ಶ್ರೀದೇವಿ, ಯುವಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಸಪ್ತಮಿ ಗೌಡ ಹೆಸರು ಕೇಳಿ ಬಂದಿದೆ. ಇದೀಗ ಆಡಿಯೋ ಒಂದು ವೈರಲ್ ಆಗಿದ್ದು, ಅದು ಸಪ್ತಮಿ ಗೌಡ ಅವರದ್ದೇ ಎನ್ನಲಾಗುತ್ತಿದೆ.

ನನ್ನದೂ ತಪ್ಪಿದೆ, ಯುವ ಮಾತು ಕೇಳಿ ಹಾಗೆ ಮಾಡಿದೆ: ಸಪ್ತಮಿ ಗೌಡ ಆಡಿಯೋ ವೈರಲ್
ಮಂಜುನಾಥ ಸಿ.
|

Updated on: Jun 23, 2024 | 9:18 AM

Share

ನಟ ಯುವ ರಾಜ್​ಕುಮಾರ್ (Yuva Rajkumar) ದಾಂಪತ್ಯದಲ್ಲಿ ಬಿರುಕು ಮೂಡಿದೆ. ಯುವ ರಾಜ್​ಕುಮಾರ್ ತಮ್ಮ ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಬಯಸಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಮಾಧ್ಯಮಗಳ ಮುಂದೆ ಯುವ ಪರ ವಕೀಲರು, ಶ್ರೀದೇವಿ ವಿರುದ್ಧ ಹಲವು ಆರೋಪಗಳನ್ನು ಸಹ ಮಾಡಿದ್ದರು. ವಿಚ್ಛೇದನ ಅರ್ಜಿಯಲ್ಲಿ ಸಹ ಅನೈತಿಕ ಸಂಬಂಧದ ಆರೋಪ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಶ್ರೀದೇವಿ ಸಹ ಯುವ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದರು. ನಟಿ ಸಪ್ತಮಿ ಗೌಡ ಹೆಸರು ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿತ್ತು. ಇದೀಗ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ.

ಈಗ ವೈರಲ್ ಆಗಿರುವ ಆಡಿಯೋ ಮಹಿಳೆಯೊಬ್ಬರು ಅಳುತ್ತಾ ರೆಕಾರ್ಡ್ ಮಾಡಿದ ಆಡಿಯೋ ಆಗಿದೆ. ಧ್ವನಿ ಸಪ್ತಮಿ ಗೌಡ ಅವರ ಧ್ವನಿಯನ್ನು ಹೋಲುತ್ತಿದೆ. ‘ಹೌದು ನನ್ನಿಂದ ಹಲವರಿಗೆ ನೋವಾಗಿದೆ. ನನ್ನದು ತಪ್ಪಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ನಾನು ಗುರು (ಯುವ ಮೂಲ ಹೆಸರು) ನಂಬಿ ಮಾಡಿದೆ. ನಿಮ್ಮ ಸೆಟ್ ಅಲ್ಲಿ ಆಗಿದೆ, ಸಾರಿ ಸರ್’ ಎಂಬ ಮಾತುಗಳು ಆಡಿಯೋನಲ್ಲಿವೆ. ಈ ಆಡಿಯೋವನ್ನು ಸಪ್ತಮಿ, ವಿಜಯ್ ಕಿರಗಂದೂರು ಅವರಿಗೆ ಕಳಿಸಿದ್ದಾರೆ ಎನ್ನಲಾಗುತ್ತಿದೆ.

‘ಗುರು ಬಂದು ಎಲ್ಲವನ್ನೂ ಹೇಳಿಕೊಂಡ ಮೇಲೆ ನಾನು ಮುಂದುವರೆದೆ. ಅದು ನಿಮ್ಮ ಸೆಟ್​ನಲ್ಲಿ ಆಯ್ತು, ಆಗಬಾರದಿತ್ತು, ಬೇಸರವಿದ್ದರೆ ದಯವಿಟ್ಟು ಕ್ಷಮಿಸಿ, ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳ ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ’ ಎಂಬ ಮಾತುಗಳು ಆಡಿಯೋನಲ್ಲಿದೆ.

ಇದನ್ನೂ ಓದಿ:ಯುವ ರಾಜ್​ಕುಮಾರ್​ ಡಿವೋರ್ಸ್​ ವಿಚಾರದಲ್ಲಿ ಕೇಳಿಬಂತು ಸಪ್ತಮಿ ಗೌಡ ಹೆಸರು

‘ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೆ, ಇದೆಲ್ಲ ವರ್ಕೌಟ್ ಆಗಲ್ಲ ಎಂದು. ಅಲ್ಲದೆ ನಾನು ಎಂದಿಗೂ ಸಹ ಫ್ಯಾಮಿಲಿ ಬಿಟ್ಟು ಬಾ, ಪತ್ನಿ ಜೊತೆ ಬ್ರೇಕ್ ಅಪ್ ಮಾಡಿಕೊ ಎಂದು ಹೇಳಿಲ್ಲ ಸರ್ ನನ್ನನ್ನು ನಂಬಿ. ಬೇಕಾದರೆ ನನ್ನನ್ನು ಬೈಯ್ಯಿರಿ, ಗುರು (ಯುವ)ಗೆ ಅದು ಮೊದಲ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ನನಗೆ ಗೊತ್ತಿದೆ. ಯಾರಿಗೂ ತೊಂದರೆ ಆಗಬಾರದು ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ’ ಎಂದು ಸಪ್ತಮಿ ಅವರದ್ದು ಎನ್ನಲಾದ ಆಡಿಯೋನಲ್ಲಿ ಹೇಳಲಾಗಿದೆ.

ಶ್ರೀದೇವಿ ಹಾಗೂ ಯುವ ದಾಂಪತ್ಯದಲ್ಲಿ ಬಿರುಕು ಮೂಡಿದ ಬಳಿಕ ಯುವ ಬಾಳಿಗೆ ಸಪ್ತಮಿ ಗೌಡ ಎಂಟ್ರಿ ಆಗಿದೆ ಎನ್ನಲಾಗುತ್ತಿದೆ. ‘ಯುವ’ ಸಿನಿಮಾದ ಸೆಟ್​ನಲ್ಲಿಯೇ ಶ್ರೀದೇವಿ ಬಂದು ಜಗಳ ಸಹ ಮಾಡಿದ್ದರು ಎಂಬ ಮಾತುಗಳು ಸಹ ಈ ಹಿಂದೆ ಕೇಳಿ ಬಂದಿದ್ದವು. ಇದೇ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಪ್ತಮಿ ಹಾಗೂ ಯುವ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿತ್ತು. ಆ ಸಮಯದಲ್ಲಿ ಸಪ್ತಮಿ ಅವರು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಈ ಕಳಿಸಿದ್ದ ಆಡಿಯೋ ಇದು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ