‘ಕಲ್ಕಿ 2898 ಎಡಿ’ ಬಿಡುಗಡೆಗೆ ಮುನ್ನವೇ ನಾನ್ನೂರು ಕೋಟಿ ಕ್ಲಬ್

ಪ್ರಭಾಸ್ ನಟನೆಯ ‘‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆಗೆ ಇನ್ನೂ ನಾಲ್ಕು ದಿನ ಬಾಕಿ ಇದ್ದು, ಈಗಾಗಲೇ ಪ್ರೀ ರಿಲೀಸ್ ಬ್ಯುಸಿನೆಸ್​ನಿಂದಲೇ ನಿರ್ಮಾಪಕರು ಹಾಕಿರುವ ಬಂಡವಾಳ ವಾಪಸ್ಸಾಗಿದೆ!

‘ಕಲ್ಕಿ 2898 ಎಡಿ’ ಬಿಡುಗಡೆಗೆ ಮುನ್ನವೇ ನಾನ್ನೂರು ಕೋಟಿ ಕ್ಲಬ್
ಕಲ್ಕಿ 2898
Follow us
ಮಂಜುನಾಥ ಸಿ.
|

Updated on: Jun 23, 2024 | 7:17 AM

ಪ್ರಭಾಸ್ (Prabhas) ಸೇರಿದಂತೆ ಭಾರತದ ಕೆಲವು ಅಗ್ರಗಣ್ಯ ನಟರು ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆಗೆ ಮುನ್ನವೇ ಭಾರಿ ಮೊತ್ತದ ಗಳಿಕೆ ಮಾಡಿದೆ. ಭಾರಿ ಬಜೆಟ್​ನ ಈ ಸಿನಿಮಾದ ಸುಮಾರು ಅರ್ಧಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಬಿಡುಗಡೆಗೆ ಮುನ್ನವೇ ಗಳಿಸಿಬಿಟ್ಟಿದೆ ‘ಕಲ್ಕಿ’. ಸಿನಿಮಾ ಬಿಡುಗಡೆಗೆ ಇನ್ನೂ ನಾಲ್ಕು ದಿನ ಇರುವಂತೆಯೇ ಈಗಾಗಲೇ ಸುಮಾರು 400 ಕೋಟಿಗೂ ಹೆಚ್ಚು ಮೊತ್ತವನ್ನು ಪ್ರಭಾಸ್ ಸಿನಿಮಾ ಗಳಿಸಿದ್ದು, ಬಿಡುಗಡೆ ಬಳಿಕ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟುವ ಮುನ್ಸೂಚನೆ ನೀಡಿದೆ.

ಈಗ ಮಾಡಲಾಗಿರುವ 400 ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಚಿತ್ರಮಂದಿರಗಳಿಂದಲೇ ಬಂದಿರುವುದು ಎನ್ನಲಾಗುತ್ತಿದೆ. ಸಿನಿಮಾದ ಬಿಡುಗಡೆ ಹಕ್ಕು ಮಾರಾಟದಿಂದ 405 ಕೋಟಿ ರೂಪಾಯಿ ಹಣವನ್ನು ಚಿತ್ರತಂಡ ಈಗಾಗಲೇ ಗಳಿಸಿದೆ. ಅದರಲ್ಲೂ ಕೇವಲ ಆಂಧ್ರ ಮತ್ತು ತೆಲಂಗಾಣದಿಂದಲೇ 185 ಕೋಟಿ ರೂಪಾಯಿ ಹಣವನ್ನು ಈ ಸಿನಿಮಾ ಪಡೆದುಕೊಂಡಿದೆ. ಇನ್ನು ಕರ್ನಾಟಕ, ಮಲಯಾಳಂ ನಿಂದಲೂ ಉತ್ತಮ ಮೊತ್ತವನ್ನು ಪಡೆದುಕೊಂಡಿದ್ದು ಹಿಂದಿ ಬೆಲ್ಟ್​ಗೆ ಭಾರಿ ದೊಡ್ಡ ಮೊತ್ತಕ್ಕೆ ಸಿನಿಮಾವನ್ನು ಮಾರಾಟ ಮಾಡಲಾಗಿದೆ.

ಇದನ್ನೂ ಓದಿ:ಪ್ರಭಾಸ್, ದೀಪಿಕಾ ಸೇರಿ ‘ಕಲ್ಕಿ 2898 ಎಡಿ’ ಚಿತ್ರದ ಕಲಾವಿದರ ಸಂಭಾವನೆ ವಿವರ ಇಲ್ಲಿದೆ

ತಮಿಳುನಾಡು ಹಾಗೂ ಕೇರಳದ ಬಿಡುಗಡೆ ಹಕ್ಕು 22 ಕೋಟಿ ರೂಪಾಯಿಗೆ ಮಾರಾಟವಾಗಿದ್ದರೆ, ಕರ್ನಾಟಕದಲ್ಲಿ ಬಿಡುಗಡೆ ಹಕ್ಕು 30 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಉತ್ತರ ಭಾರತದ ಸಿನಿಮಾ ಬಿಡುಗಡೆ ಹಕ್ಕು 85 ಕೋಟಿ ರೂಪಾಯಿಗೆ ಮಾರಾಟವಾಗಿದೆ. ವಿದೇಶಗಳಲ್ಲಿ ಸಿನಿಮಾದ ಬಿಡುಗಡೆ ಹಕ್ಕು 100 ಕೋಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಸಿನಿಮಾ ಚೆನ್ನಾಗಿ ಪ್ರದರ್ಶನ ಕಂಡಲ್ಲಿ ನಿರ್ಮಾಪಕರಿಗೆ ಇನ್ನಷ್ಟು ಮೊತ್ತ ವಿತರಕರಿಂದ ಸಿಗಲಿದೆ. ಇಷ್ಟು ದೊಡ್ಡ ಮೊತ್ತದ ಪ್ರೀ ರಿಲೀಸ್ ಬ್ಯುಸಿನೆಸ್ ಕಂಡ ಮೊದಲ ಸಿನಿಮಾ ‘ಕಲ್ಕಿ’. ಭಾರತದ ಇನ್ಯಾವುದೇ ಸಿನಿಮಾ ಇಷ್ಟು ದೊಡ್ಡ ಮೊತ್ತದ ಪ್ರೀ ರಿಲೀಸ್ ಬ್ಯುಸಿನೆಸ್ ಕಂಡಿದಿಲ್ಲ.

ಈಗ ನೀಡಲಾಗಿರುವ ಲೆಕ್ಕ ಕೇವಲ ಪ್ರೀ ರಿಲೀಸ್ ಬ್ಯುಸಿನೆಸ್​ನದ್ದಾಗಿದ್ದು, ಡಿಜಿಟಲ್ ಹಕ್ಕು, ಆಡಿಯೋ ಹಕ್ಕು, ಸ್ಯಾಟಲೈಟ್ ಹಕ್ಕು ಇನ್ನಿತರೆಗಳಿಂದ ಸುಮಾರು 300 ಕೋಟಿ ಗಳಿಕೆ ಆಗಿದೆ ಎನ್ನಲಾಗುತ್ತಿದೆ. ಸಿನಿಮಾದ ಒಟ್ಟು ಬಜೆಟ್ 700 ಕೋಟಿ ರೂಪಾಯಿಗಳಾಗಿದ್ದು, ಸಿನಿಮಾದ ಬಿಡುಗಡೆಗೆ ಮುನ್ನವೇ ಇಷ್ಟು ಮೊತ್ತವನ್ನು ಸಿನಿಮಾ ಕಲೆ ಹಾಕಿದ್ದಾಗಿದೆ. ಬಿಡುಗಡೆ ಬಳಿಕ ಕೇವಲ ಲಾಭದ ಲೆಕ್ಕಾಚಾರವನ್ನಷ್ಟೆ ನೋಡಬೇಕಿದೆ.

‘ಕಲ್ಕಿ 2898 ಎಡಿ’ ಸಿನಿಮಾವು ಜುಲೈ 27 ರಂದು ದೇಶದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಬ್ ಬಚ್ಚನ್, ದಿಶಾ ಪಟಾನಿ ಇನ್ನೂ ಕೆಲವು ಅತ್ಯುತ್ತಮ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರಿ ಬಜೆಟ್​ನ ಈ ಸಿನಿಮಾವನ್ನು ಹಾಲಿವುಡ್ ಸಿನಿಮಾಗಳ ಮಾದರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ