ನೇಹಾ ಹಿರೇಮಠ್ ಸಾವಿಗೆ ನ್ಯಾಯ ಕೇಳಿದ ಸೆಲೆಬ್ರಿಟಿಗಳು; ಏನಂದ್ರು ದರ್ಶನ್​?

|

Updated on: Apr 21, 2024 | 12:03 PM

ಪ್ರಣಿತಾ ಸುಭಾಷ್​, ಶಿವರಾಜ್​ಕುಮಾರ್​, ದರ್ಶನ್​, ಧ್ರುವ ಸರ್ಜಾ, ಕಾರುಣ್ಯಾ ರಾಮ್​, ರಚಿತಾ ರಾಮ್​, ರಿಷಬ್​ ಶೆಟ್ಟಿ ಮುಂತಾದ ಸೆಲೆಬ್ರಿಟಿಗಳು ನೇಹಾ ಹಿರೇಮಠ್ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇಹಾ ಸಾವಿಗೆ ಕಾರಣವಾದ ಫಯಾಜ್​ಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಒತ್ತಾಯಿಸಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ನೇಹಾ ಹಿರೇಮಠ್ ಸಾವಿಗೆ ನ್ಯಾಯ ಕೇಳಿದ ಸೆಲೆಬ್ರಿಟಿಗಳು; ಏನಂದ್ರು ದರ್ಶನ್​?
ದರ್ಶನ್​, ಶಿವರಾಜ್​ಕುಮಾರ್​, ನೇಹಾ ಹಿರೇಮಠ್​
Follow us on

ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್​ ಪ್ರೇಮಿಯಿಂದ ಕೊಲೆಯಾದ ಹುಬ್ಬಳ್ಳಿಯ ನೇಹಾ ಹಿರೇಮಠ್​ (Neha Hiremath) ಸಾವಿಗೆ ನ್ಯಾಯ ಸಿಗಬೇಕು ಎಂದು ಎಲ್ಲರೂ ಆಗ್ರಹಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಈ ಕುರಿತು ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಧ್ವನಿ ಎತ್ತಿದ್ದಾರೆ. ನಟ ದರ್ಶನ್​ ಕೂಡ ನೇಹಾ ಹಿರೇಮಠ್ ಹತ್ಯೆ (Neha Hiremath Death) ಬಗ್ಗೆ ಪೋಸ್ಟ್​ ಮಾಡಿದ್ದಾರೆ. ‘ಪ್ರೀತಿಯ ಹೆಸರಲ್ಲಿ ಇಂತಹ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನೂ ಬಾಳಿ ಬದುಕಬೇಕಿದ್ದ 23 ವಯಸ್ಸಿನ ನೇಹಾ ಹಿರೇಮಠ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ’ ಎಂದು ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್ (Darshan)​ ಬರೆದುಕೊಂಡಿದ್ದಾರೆ. ಇದರ ಜೊತೆಗೆ #JusticeForNehaHiremath ಎಂಬ ಹ್ಯಾಶ್​ಟ್ಯಾಗ್​ ಬಳಸಿದ್ದಾರೆ.

ನಟಿ ಪ್ರಣಿತಾ ಸುಭಾಶ್ ಕೂಡ ಈ ಬಗ್ಗೆ ‘ಎಕ್ಸ್​’ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ‘ನೇಹಾ ಹಿರೇಮಠ್​ ಅವರ ಕಥೆ ಹೇಳಿ ಬಹಳ ನೋವಾಯಿತು. ಅವರ ಕುಟುಂಬಕ್ಕೆ ದೇವರ ಶಕ್ತಿ ನೀಡಲಿ. ಜಾತಿ, ಧರ್ಮ, ಕೋಮುವಾದದ ವಿಚಾರಗಳು ಕೇವಲ ಓಟ್​ ಬ್ಯಾಂಕ್​ ರಾಜಕೀಯ ಆಗಿರುವ ಈ ದೇಶದಲ್ಲಿ ನ್ಯಾಯ ಗೆಲ್ಲುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದೇನೆ’ ಎಂದು ಪ್ರಣಿತಾ ಸುಭಾಷ್​ ಬರೆದುಕೊಂಡಿದ್ದಾರೆ.

‘ಮನಸ್ಸಿನಲ್ಲಿ ಹೆಚ್ಚು ಆತಂಕ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಇದೆಯಾ? ನೇಹಾ ಹಿರೇಮಠ್ ಅವರ ಹತ್ಯೆ ಪ್ರತಿಯೊಬ್ಬ ಹೆಣ್ಣುಮಗಳಿಗೂ ಹಾಗು ಪೋಷಕರಿಗೆ ಆತಂಕ ಉಂಟು ಮಾಡಿದೆ. ಈ ಹೀನ ಕೃತ್ಯವನ್ನು ಮಾಡಿರುವ ಪಾಪಿ ಫಯಾಜ್​ಗೆ ಅತ್ಯಂತ ಕ್ರೂರವಾದ ಶಿಕ್ಷೆಯಾಗಬೇಕು. ನೇಹಾ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ’ ಎಂದು ನಟಿ ಕಾರುಣ್​ ರಾಮ್​ ಅವರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

‘ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ್ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎನ್ನುವುದು ನನ್ನ ಕಳಕಳಿಯ ವಿನಂತಿ’ ಎಂದು ನಟ ಶಿವರಾಜ್​ಕುಮಾರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ನೇಹಾ ಹಿರೇಮಠ್ ಹತ್ಯೆ ಅತ್ಯಂತ ಹೀನ ಕೃತ್ಯ’: ಧ್ರುವ ಸರ್ಜಾ ಆಕ್ರೋಶ

ಕೆಲವು ಸೆಲೆಬ್ರಿಟಿಗಳು ಈ ಘಟನೆ ಬಗ್ಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ. ಆ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:08 am, Sun, 21 April 24