‘ಒಳ್ಳೆಯವರ ಹೊಟ್ಟೆಯಲ್ಲಿ ಹುಟ್ಟಿದ್ದರೆ ಇಂಥ ಕೆಲಸ ಮಾಡಬೇಡಿ’: ‘ರಾಬರ್ಟ್​’ ನಿರ್ಮಾಪಕರ ಖಡಕ್​ ವಾರ್ನಿಂಗ್​!

| Updated By: ರಾಜೇಶ್ ದುಗ್ಗುಮನೆ

Updated on: Mar 10, 2021 | 6:11 PM

ಶಿವರಾತ್ರಿ ಹಬ್ಬದ ಪ್ರಯುಕ್ತ ‘ರಾಬರ್ಟ್’​ ಸಿನಿಮಾ ಗ್ರ್ಯಾಂಡ್​ ಆಗಿ ತೆರೆಕಾಣುತ್ತಿದೆ. ಅದಕ್ಕೂ ಮುನ್ನ ಕಿಡಿಗೇಡಿಗಳಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

‘ಒಳ್ಳೆಯವರ ಹೊಟ್ಟೆಯಲ್ಲಿ ಹುಟ್ಟಿದ್ದರೆ ಇಂಥ ಕೆಲಸ ಮಾಡಬೇಡಿ’: ‘ರಾಬರ್ಟ್​’ ನಿರ್ಮಾಪಕರ ಖಡಕ್​ ವಾರ್ನಿಂಗ್​!
ದರ್ಶನ್​ - ಉಮಾಪತಿ ಶ್ರೀನಿವಾಸ್​ ಗೌಡ
Follow us on

‘ಡಿ ಬಾಸ್​’ ನಟನೆಯ ‘ರಾಬರ್ಟ್​’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭ ಆಗಿದೆ. ಕರ್ನಾಟಕ ಮಾತ್ರವಲ್ಲದೆ, ಆಂಧ್ರ ಮತ್ತು ತೆಲಂಗಾಣದಲ್ಲೂ ಈ ಸಿನಿಮಾದ ತೆಲುಗು ವರ್ಷನ್​ ಬಿಡುಗಡೆ ಆಗಲಿದೆ. ಅಭಿಮಾನಿಗಳ ಪಾಲಿಗೆ ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಈ ನಡುವೆ ಪೈರಸಿ ಮಾಡುವವರಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ವಾರ್ನಿಂಗ್ ನೀಡಿದ್ದಾರೆ.

ಎಷ್ಟೇ ಕಟ್ಟೆಚ್ಚರಿಕೆ ವಹಿಸಿದರೂ ಪೈರಸಿ ಹಾವಳಿಯನ್ನು ತಪ್ಪಿಸಲು ಆಗುತ್ತಿಲ್ಲ. ಹಾಲಿವುಡ್, ಬಾಲಿವುಡ್​ನಿಂದ ಹಿಡಿದ ಸ್ಯಾಂಡಲ್​ವುಡ್​ವರೆಗೆ ಯಾವ ಚಿತ್ರಕ್ಕೂ ಈ ಕಾಟ ತಪ್ಪಿದ್ದಲ್ಲ. ‘ಪೈರಸಿ ಮಾಡುತ್ತಾರೆ ಎಂಬುದನ್ನು ತಲೆಯಲ್ಲಿ ಇಟ್ಟುಕೊಂಡೇ ನಾವು ಸಿನಿಮಾ ಮಾಡಿರುತ್ತೇವೆ. ಇಲ್ಲಿ ಭಯದ ಪ್ರಶ್ನೆ ಇಲ್ಲ. ಅದರಲ್ಲಿ ಅವರ ಯೋಗ್ಯತೆ ನಿರ್ಧಾರ ಆಗುತ್ತದೆ. ನೀವು ಹೇಸಿಗೆಯನ್ನೇ ತಿನ್ನುತ್ತೀರಿ ಅಂದರೆ ಏನೂ ಮಾಡೋಕಾಗಲ್ಲ ತಿನ್ನಿ ಅನ್ನುತ್ತೇವೆ. ಅನ್ನ ತಿನ್ನಲ್ಲ ಎಂದರೆ ನಾವೇನು ಮಾಡೋಕಾಗತ್ತೆ?’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್​ ಗೌಡ.

‘ಒಳ್ಳೆಯವರ ಹೊಟ್ಟೆಯಲ್ಲಿ ಹುಟ್ಟಿದ್ದರೆ ಪೈರಸಿಯಂತಹ ಕೆಲಸ ಮಾಡಬೇಡಿ. ಪೈರಸಿ ಮಾಡಿ ನೀವು ನಿಮ್ಮ ತಂದೆ ತಾಯಿಗೆ ಕೆಟ್ಟ ಹೆಸರು ತರುತ್ತೀರಿ. ಅದರಿಂದ ನೀವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪೈರಸಿ ಮಾಡುವವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಒಂದೊಂತೂ ನಿರ್ಧಾರ ಮಾಡಿಕೊಳ್ಳಿ, ನನ್ನನ್ನು ಒಬ್ಬ ರಾಕ್ಷಸನನ್ನಾಗಿ ನೋಡುತ್ತೀರಿ ಹೊರತು ಮನುಷ್ಯನಾಗಿ ನೋಡಲ್ಲ’ ಎಂದು ಅವರು ಗುಡುಗಿದ್ದಾರೆ.

‘ಇದರಲ್ಲಿ ನನ್ನ ನಾಲ್ಕು ವರ್ಷದ ಶ್ರಮ ಮತ್ತು ಕನಸು ಇದೆ. ಕೋಟ್ಯಂತರ ರೂಪಾಯಿ ದುಡ್ಡು ವ್ಯಯಿಸಲಾಗಿದೆ. ನನಗೆ ಏನಾದರೂ ತೊಂದರೆ ಆಗುತ್ತೆ ಎಂದರೆ ನಾನು ಬೇರೆ ಮಟ್ಟದಲ್ಲಿ ನಿಂತುಕೊಳ್ಳುತ್ತೇನೆ. ಒಳ್ಳೆಯವರು ಇದ್ದಮೇಲೆ ಕಚಡಾಗಳು ಇದ್ದೇ ಇರುತ್ತಾರೆ. ಆನೆ ಹೋಗುವಾಗ ನಾಯಿಗಳು ಬೊಗಳುತ್ತವೆ. ನಾಯಿ ಬೊಗಳಬಹುದು ಅಷ್ಟೇ. ಆನೆ ಮನಸ್ಸು ಮಾಡಿದರೆ ತುಳಿದುಹಾಕಿ ಹೋಗುತ್ತದೆ. ಇದು ಪೈರಸಿ ಮಾಡುವವರಿಗೆ ನಮ್ಮ ಟೀಮ್​ ಕಡೆಯಿಂದ ಸ್ಟ್ರಾಂಗ್​ ಮೆಸೇಜ್​’ ಎಂದಿದ್ದಾರೆ ಉಮಾಪತಿ.

ಇದನ್ನೂ ಓದಿ: ದರ್ಶನ್​ಗೆ ಸ್ವಿಮ್ಮಿಂಗ್​ ಬರಲ್ಲ; ಆದರೂ ರಾಬರ್ಟ್​ಗಾಗಿ ದೊಡ್ಡ ರಿಸ್ಕ್​ ತೆಗೆದುಕೊಂಡ ‘ಚಾಲೆಂಜಿಂಗ್​ ಸ್ಟಾರ್​’!

‘ರಾಬರ್ಟ್​’ನಲ್ಲಿ ದರ್ಶನ್​ ಖಡಕ್​ ಆಗಿ ಹೇಳಿದ ‘ಏ ತುಕಾಲಿ’ ಡೈಲಾಗ್​ನ ಹಿಂದಿದೆ ಇಂಟರೆಸ್ಟಿಂಗ್​ ವಿಷ್ಯ!