ದರ್ಶನ್​ಗೆ ಹಸು ಸಾಕುವ ಹವ್ಯಾಸ ಬಂದಿದ್ದು ಹೇಗೆ? ಎಲ್ಲವನ್ನೂ ಹೇಳಿಕೊಂಡಿದ್ದ ಚಾಲೆಂಜಿಂಗ್ ಸ್ಟಾರ್

ದರ್ಶನ್ ಅವರು ಹತ್ತನೇ ತರಗತಿ ಮುಗಿದ ಬಳಿಕ ಡಿಪ್ಲೋಮಾ ಸೇರಿಕೊಂಡರು. ಮನೆಯವರ ಒತ್ತಾಯದಿಂದ ಅವರು ಇದನ್ನು ಓದೋಕೆ ಹೋಗಿದ್ದರು. ಎರಡು ತಿಂಗಳು ಕಾಲೇಜಿಗೆ ಹೋದರು. ಬಳಿಕ ಅವರಿಗೆ ಓದೋಕೆ ಆಗಲೇ ಇಲ್ಲ. ಹೀಗಾಗಿ, ನಟನೆಯನ್ನು ಅವರು ಆಯ್ಕೆ ಮಾಡಿಕೊಂಡರು.

ದರ್ಶನ್​ಗೆ ಹಸು ಸಾಕುವ ಹವ್ಯಾಸ ಬಂದಿದ್ದು ಹೇಗೆ? ಎಲ್ಲವನ್ನೂ ಹೇಳಿಕೊಂಡಿದ್ದ ಚಾಲೆಂಜಿಂಗ್ ಸ್ಟಾರ್
ದರ್ಶನ್
Edited By:

Updated on: Feb 16, 2024 | 7:12 AM

ನಟ ದರ್ಶನ್ (Darshan) ಅವರಿಗೆ ಪ್ರಾಣಿಗಳ ಮೇಲೆ ಸಾಕಷ್ಟು ಪ್ರೀತಿ ಇದೆ. ಅವರು ಪ್ರಾಣಿಗಳ ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಾರೆ. ಮೈಸೂರಿನಲ್ಲಿ ಇರುವ ಫಾರ್ಮ್​​ಹೌಸ್​ನಲ್ಲಿ ದರ್ಶನ್ ಹಸುಗಳನ್ನು ಸಾಕಿದ್ದಾರೆ. ಅವುಗಳ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಾರೆ. ದರ್ಶನ್ ಅವರಿಗೆ ಪ್ರಾಣಿಗಳ ಬಗ್ಗೆ ಪ್ರಿತಿ ಇರೋದು ನಿನ್ನೆ ಮೊನ್ನೆಯಿಂದ ಅಲ್ಲ. ಚಿತ್ರರಂಗಕ್ಕೆ ಕಾಲಿಡುವುದಕ್ಕಿಂತ ಮೊದಲೇ ಅವರು ಹಸುಗಳನ್ನು ಸಾಕಿದ್ದರು. 11 ವರ್ಷಗಳ ಹಿಂದೆ ಜೀ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದರು.

ಹತ್ತನೇ ತರಗತಿ ಮುಗಿದ ಬಳಿಕ ದರ್ಶನ್ ಅವರು ಡಿಪ್ಲೋಮಾ ಸೇರಿದರು. ಅವರು ಇದನ್ನು ಓದೋಕೆ ಹೋಗಿದ್ದು ಮನೆಯವರ ಒತ್ತಾಸೆಯಿಂದ. ಅಲ್ಲಿ ಆರು ಸಬ್ಜೆಕ್ಟ್ ಇತ್ತು. ಎರಡು ತಿಂಗಳು ಕಾಲೇಜಿಗೆ ಹೋದರು. ಆ ಬಳಿಕ ದರ್ಶನ್​​ಗೆ ಓದೋಕೆ ಆಗಲೇ ಇಲ್ಲ. ಹೀಗಾಗಿ, ನಟನೆಯನ್ನು ಅವರು ಆಯ್ಕೆ ಮಾಡಿಕೊಂಡರು. ತಂದೆಗೆ ಇದು ಇಷ್ಟ ಇರಲಿಲ್ಲ. ಆದರೆ, ತಾಯಿ ದರ್ಶನ್​ನ ಬೆಂಬಲಿಸಿದರು. ನಂತರ ನೀನಾಸಂಗೆ ಸೇರಿದರು. ಅಲ್ಲಿ ನಟನೆ ಕಲಿತರು. ಎಲ್ಲೇ ಹೋದರೂ ಬದುಕುತ್ತೇನೆ ಎನ್ನುವ ಕಾನ್ಫಿಡೆನ್ಸ್ ಕಲಿಸಿದ್ದು ನೀನಾಸಂ ಎಂದು ದರ್ಶನ್ ಹೇಳಿಕೊಂಡಿದ್ದರು.

‘ಬೆಳಿಗ್ಗೆ ಥಿಯರಿ ಕ್ಲಾಸ್ ಇರುತ್ತಿತ್ತು. ಮಧ್ಯಾಹ್ನ ಪ್ರ್ಯಾಕ್ಟಿಕಲ್ ಇರುತ್ತಿತ್ತು. ನೀನಾಸಂ ಮುಗಿದ ಬಳಿಕ ಚಾನ್ಸ್​​ಗಾಗಿ ಪ್ರಯತ್ನಿಸಿದೆ. ಆದರೆ ಎಲ್ಲಿಯೂ ವರ್ಕೌಟ್ ಆಗಲಿಲ್ಲ. ಮನೆಯಲ್ಲೇ ಇದ್ದೆ. ಆಗ ರ‍್ಯಾಂಪ್​ ಶೋ ಟ್ರೆಂಡ್ ಶುರುವಾಯಿತು. ಮೈಸೂರಿಗೆ ಹೋಗಿ ಅಲ್ಲಿ ರ‍್ಯಾಂಪ್ ವಾಕ್ ಮಾಡಿದೆ. ಅದರಿಂದ ಬಂದ ಹಣದಲ್ಲಿ ಹಸು ಸಾಕೋಣ ಎಂದು ಹಸು ತೆಗೆದುಕೊಂಡೆವು. ಒಂದು ಹಸು ಸಾಕಿದೆ. ನಂತರ ಅದು ಮೂರಾಯ್ತು. ಒಟ್ಟೂ ಎಂಟು ಹಸು ಸಾಕಿದ್ದೆ’ ಎಂದಿದ್ದರು ದರ್ಶನ್. ವಿಶೇಷ ಎಂದರೆ ಅವರೇ ಹಾಲು ಕರೆಯುತ್ತಿದ್ದರು.

ದರ್ಶನ್ ಸಂದರ್ಶನ

‘ಸೈಕಲ್​ಗೆ ಕ್ಯಾನ್ ಹಾಕಿ ಹಾಲು ಕೊಡಲು ಮನೆ ಮನೆಗೆ ಹೋಗುತ್ತಿದ್ದೆ. ಎರಡು ವರ್ಷ ಅದರಿಂದಲೇ ಜೀವನ ಸಾಗಿತ್ತು. ಬೆಳಿಗ್ಗೆ ಜಿಮ್ ಹೋಗುತ್ತಿದ್ದೆ. ಆ ಬಳಿಕ ಹಾಲು ಕರೆದು ಮನೆಗೆ ಹಾಕಿ ಬರುತ್ತಿದ್ದೆ. ನಂತರ ಹಾಯಾಗಿ ಟಿವಿ ನೋಡುತ್ತಿದ್ದೆ. ಮಧ್ಯಾಹ್ನ ಮತ್ತೆ ಹಸುವಿನ ಕೆಲಸ ಶುರುವಾಗುತ್ತಿತ್ತು. ಎಲ್ಲಾ ಮುಗಿಸಿ ಮನೋಜ್ ಎಂಬ ಫ್ರೆಂಡ್ ಮನೆಗೆ ಹೋಗುತ್ತಿದ್ದೆ’ ಎಂದಿದ್ದರು ದರ್ಶನ್.

ಇದನ್ನೂ ಓದಿ: ಇದು ಫೋಟೋ ತೆಗೆದರೆ ಕೈ ಮುರಿಯೋ ‘ಡೆವಿಲ್’; ಹೊಸ ಅವತಾರದಲ್ಲಿ ಬಂದ ದರ್ಶನ್

‘ಮೈಸೂರು ಜೀವನಕ್ಕೆ ಎಷ್ಟು ಬೇಕೋ ಅಷ್ಟು ಹಣ ಬರುತ್ತಿತ್ತು. ಮನೆಗೆ ಚಿನ್ನಪ್ಪಣ್ಣ ಬಂದಿದ್ದರು. ಅವರು ನಟನೆ ಶುರು ಮಾಡಿಸುವಂತೆ ಅಮ್ಮನಿಗೆ ಕಿವಿಮಾತು ಹೇಳಿದರು. ನಾನು ಬೆಂಗಳೂರಿಗೆ ಹೋಗಿ ಬರೋವರೆಗೆ ಹಸುಗಳನ್ನು ಮಾರಾಟ ಮಾಡಲಾಗಿತ್ತು. ಅಮ್ಮ ನಟನೆ ನೋಡು ಎಂದು ಹೇಳಿದರು. ಹಾಲು ಹಾಕಿದ್ದರಿಂದ ನಾಲ್ಕು ವರ್ಷ ಜೀವನ ನಡೆದಿದೆ. ಹೀಗಾಗಿ ಈಗಲೂ ಹಸು ಸಾಕಿದ್ದೇನೆ’ ಎಂದು ಹೇಳಿದ್ದರು ದರ್ಶನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Fri, 16 February 24

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us