AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಪ್ರಕರಣ: ಪಟ್ಟು ಬಿಡದ ಪೊಲೀಸರಿಗೆ ಸಿಕ್ಕ ಜಯ

Darshan Thoogudeepa: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಹಾಗೂ ಅದರ ನಂತರವೂ ಸಹ ಬೆಂಗಳೂರು ಪೊಲೀಸರು ಅದ್ಭುತವಾದ ಕಾರ್ಯದಕ್ಷತೆ ಮೆರೆದಿದ್ದಾರೆ. ಸತತ ಪ್ರಯತ್ನದ ಬಳಿಕವೂ ಹೈಕೋರ್ಟ್​​ನಲ್ಲಿ ಆರೋಪಿಗಳಿಗೆ ಜಾಮೀನು ದೊರೆತು ಹಿನ್ನಡೆ ಅನುಭವಿಸಿದ್ದರೂ ಸಹ ಮತ್ತೆ ಹೋರಾಡಿ ಆರೋಪಿಗಳನ್ನು ಜೈಲಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ದರ್ಶನ್ ಪ್ರಕರಣ: ಪಟ್ಟು ಬಿಡದ ಪೊಲೀಸರಿಗೆ ಸಿಕ್ಕ ಜಯ
Darshan Thoogudeepa2
ಮಂಜುನಾಥ ಸಿ.
|

Updated on:Aug 14, 2025 | 7:12 PM

Share

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರಿಗೆ ಮತ್ತೊಂದು ಜಯ ದೊರೆತಿದೆ. ಈ ಪ್ರಕರಣದ ಆರಂಭದಿಂದಲೂ ಪೊಲೀಸರು ಪಟ್ಟುಬಿಡದೆ ತನಿಖೆ ನಡೆಸುತ್ತಿದ್ದು, ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಸತತ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಹೈಪ್ರೊಫೈಲ್ ಕೇಸಾದರೂ ಸಹ ಯಾವುದೇ ಆಂತರಿಕ, ಬಾಹ್ಯ ಒತ್ತಡಗಳಿಗೆ ಮಣಿಯದೆ ದರ್ಶನ್ ಅನ್ನು ಬಂಧಿಸುವುದರಿಂದ ಹಿಡಿದು ಈ ವರೆಗೂ ಪ್ರಕರಣದಲ್ಲಿ ಎಲ್ಲೂ ಪಟ್ಟು ಸಡಿಸಿಲಿಲ್ಲ.

ತನಿಖಾಧಿಕಾರಿ ಎಸಿಪಿ ಚಂದನ್​, ಆಗಿನ ಕಮೀಷನರ್ ಬಿ ದಯಾನಂದ ಸೇರಿದಂತೆ ಇನ್ನೂ ಹಲವು ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳ ಸಂಘಟಿತ ಪ್ರಯತ್ನದಿಂದ ಸಾಮಾನ್ಯನಲ್ಲಿ ಸಾಮಾನ್ಯನೊಬ್ಬನ ಕೊಲೆ ಪ್ರಕರಣ ಬೆಳಕಿಗೆ ಬಂತು ಮತ್ತು ಶವ ಸಿಕ್ಕ 48 ಗಂಟೆಗಳ ಒಳಗಾಗಿ ಬಹುತೇಕ ಎಲ್ಲ ಆರೋಪಿಗಳ ಬಂಧನವೂ ಆಯ್ತು. ನೆನಪಿರಲಿ ಆರಂಭದಲ್ಲಿ ಪ್ರಕರಣದ ದಿಕ್ಕು ತಪ್ಪಿಸಲು ಮೂವರು ಅಮಾಯಕರನ್ನು ಹಣ ಕೊಟ್ಟು ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಆರೋಪಿಗಳು ಕಳಿಸಿದ್ದರು.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣದಲ್ಲಿ ಮತ್ತೆ ಜೈಲಿಗೆ ದರ್ಶನ್, ಮುಂದಿರುವ ಆಯ್ಕೆಗಳೇನು?

ಆ ನಂತರವೂ ಸಹ ಸತತ ತನಿಖೆ, ವಿಚಾರಣೆ ಮೂಲಕ ಹಲವು ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದರು. ಆರಂಭದಲ್ಲಿ 231 ಮಂದಿ ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದರು. ಹಲವಾರು ತಾಂತ್ರಿಕ ಸಾಕ್ಷಿಗಳನ್ನು ಕಲೆ ಹಾಕಿದರು. ಎಲ್ಲ ಮಾಡಿದ ಬಳಿಕವೂ ಸಹ ಹೈಕೋರ್ಟ್​ನಲ್ಲಿ ಪೊಲೀಸರಿಗೆ ಹಿನ್ನಡೆಯಾಗಿ ಹೈಕೋರ್ಟ್ ಎಲ್ಲ ಆರೋಪಿಗಳಿಗೂ ಜಾಮೀನು ನೀಡಿ ಬಿಟ್ಟಿತ್ತು.

ಆದರೆ ಪ್ರಕರಣದ ಗಟ್ಟಿತನದ ಅರಿವಿದ್ದ ಹಾಗೂ ಆರೋಪಿಗಳ ಪ್ರಭಾವದ ಅರಿವಿದ್ದ ಪೊಲೀಸರು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್​ಗೆ ಮೊರೆ ಹೋದರು. ಅಲ್ಲಿ ಸಾಕಷ್ಟು ವಿಳಂಬದ ಬಳಿಕ, ಜಾಮೀನು ರದ್ದು ಮಾಡಲು ಬೇಕಾದ ಸಾಕ್ಷ್ಯಗಳನ್ನು ಒದಗಿಸಿದರು. ಸರ್ಕಾರಿ ವಕೀಲರು ಸಹ ಪೊಲೀಸರಿಗೆ ಸರಿಯಾದ ಸಂವಹನ ಸಾಧಿಸಿ ಪ್ರಮುಖ ಆರೋಪಿಗಳ ಜಾಮೀನು ರದ್ದಾಗುವಂತೆ ಮಾಡಿದರು.

ಇದೀಗ ಸುಪ್ರೀಂಕೋರ್ಟ್​ ದರ್ಶನ್, ಪವಿತ್ರಾ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ಜಾಮೀನನ್ನು ರದ್ದು ಮಾಡಿದೆ. ಇನ್ನೇನಿದ್ದರು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಸೂಕ್ತ ಸಾಕ್ಷ್ಯಗಳನ್ನು ಸಲ್ಲಿಕೆ ಮಾಡಿ, ಪ್ರಕರಣದ ತೀರ್ಪು ಬೇಗನೆ ಹೊರಬೀಳುವಂತೆ ಮಾಡಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಕಾರ್ಯ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Thu, 14 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ