ಆರ್ಥಿಕ ಸಂಕಷ್ಟದಲ್ಲಿದ್ದಾಗ ದರ್ಶನ್ ಮಾಡಿದ ಸಹಾಯ ಎಂಥದ್ದು? ವಿವರಿಸಿದ ಟೆನ್ನಿಸ್ ಕೃಷ್ಣ
ಟೆನ್ನಿಸ್ ಕೃಷ್ಣ ಅವರು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದರು. ಅವರು ಕಾಮಿಡಿಯನ್ ಆಗಿ ಎಲ್ಲರ ಗಮನ ಸೆಳೆದರು. ಆದರೆ, ಇತ್ತೀಚೆಗೆ ಅವರಿಗೆ ಬೇಡಿಕೆ ಕಡಿಮೆ ಆಗಿದೆ. ಅವರು ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಅವರು ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ನಟ ದರ್ಶನ್ (Darshan) ಅವರು ಚಿತ್ರರಂಗದಲ್ಲಿ ಬಹುಬೇಡಿಕೆ ಹೊಂದಿದ್ದಾರೆ. ನಟನೆಯ ಜೊತೆಗೆ ಅವರು ಕಷ್ಟದಲ್ಲಿದ್ದವರಿಗೆ ಆರ್ಥಿಕ ಸಹಾಯ ಕೂಡ ಮಾಡುತ್ತಾರೆ. ಆದರೆ, ಅವರು ಸಹಾಯ ಮಾಡಿದ್ದನ್ನು ಎಂದಿಗೂ ಯಾರ ಜೊತೆಯೂ ಹೇಳಿಕೊಳ್ಳುವುದಿಲ್ಲ. ಯಾರಾದರೂ ಈ ಬಗ್ಗೆ ಹೇಳಿಕೊಳ್ಳೋಕೆ ಹೋದರೆ ಅದಕ್ಕೆ ಅವಕಾಶ ನೀಡುವುದಿಲ್ಲ. ದರ್ಶನ್ ಅವರು ಮಾಡಿದ ಸಹಾಯದ ಬಗ್ಗೆ ಟೆನ್ನಿಸ್ ಕೃಷ್ಣ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ದರ್ಶನ್ ಅಭಿಮಾನಿಗಳ ಪೇಜ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.
ಟೆನ್ನಿಸ್ ಕೃಷ್ಣ ಅವರು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದರು. ಅವರು ಕಾಮಿಡಿಯನ್ ಆಗಿ ಎಲ್ಲರ ಗಮನ ಸೆಳೆದರು. ಆದರೆ, ಇತ್ತೀಚೆಗೆ ಅವರಿಗೆ ಬೇಡಿಕೆ ಕಡಿಮೆ ಆಗಿದೆ. ಅವರು ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ‘ಸೈಕಲ್ ಗ್ಯಾಪ್ ಪ್ಲಸ್’ ಅನ್ನೋ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಟೆನ್ನಿಸ್ ಕೃಷ್ಣ ಅವರು ಈ ಬಗ್ಗೆ ಮಾತನಾಡಿದ್ದರು.
‘ಹಲವು ಸೆಲೆಬ್ರಿಟಿಗಳ ಬಳಿ ಹೋದೆ. ಯಾರೂ ಸಹಾಯಕ್ಕೆ ಬಂದಿಲ್ಲ. ಆ ಬಳಿಕ ದರ್ಶನ್ ಅವರ ಬಳಿ ಹೋದೆ. ಸ್ವಲ್ಪ ಜಾಸ್ತಿನೇ ಕೇಳಿದ್ದೆ. ಸೋಮವಾರ ಬನ್ನಿ ಎಂದರು. ಎಲ್ಲಿಯೋ ಇಟ್ಟ ಹಣವನ್ನು ಕೊಟ್ಟರು. ನನ್ನ ಮಗನ ಅಡ್ಮಿಷನ್ಗೆ ಆ ಹಣ ಕೇಳಿದ್ದೆ’ ಎಂದು ದರ್ಶನ್ ಅವರ ಸಹಾಯ ನೆನಪಿಸಿಕೊಂಡಿದ್ದಾರೆ ಟೆನ್ನಿಸ್ ಕೃಷ್ಣ.
‘ಅನೇಕರ ಬಳಿ ಹೋಗಿ ಡೇಟ್ ತೆಗೆದುಕೊಂಡು ಹಣ ನಿಡಿ, ಇಲ್ಲ ಹಾಗೆ ಆದರೂ ಸಹಾಯ ಮಾಡಿ ಎಂದು ಕೋರಿದ್ದೆ. ಹೂ ಎಂದರು ಕಾಲ್ ಎತ್ತಲೇ ಇಲ್ಲ. ಆ ನೋವು ಸ್ವಲ್ಪ ದಿನ ಇತ್ತು. ದರ್ಶನ್ ಸಹಾಯ ಮಾಡಿದರು. ಆ ಬಳಿಕ ಕಲಾ ಸರಸ್ವತಿ ನನ್ನ ಕೈ ಬಿಡಲಿಲ್ಲ. ಕಾಲೇಜು ಕಾರ್ಯಕ್ರಮ, ಅನೇಕ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದೆ. ಅಲ್ಲಿ ಹಣ ಸಿಕ್ತು’ ಎಂದಿದ್ದಾರೆ ಅವರು.
ಇದನ್ನೂ ಓದಿ: ನಟ ದರ್ಶನ್ಗೆ ಅರ್ಜುನನ ಮೇಲೆ ವಿಶೇಷ ಪ್ರೀತಿಯೇಕೆ? ಇಲ್ಲಿದೆ ವಿವರ
ದರ್ಶನ್ ಅವರು ‘ಡೆವಿಲ್’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಕೈಗೆ ಪೆಟ್ಟಾಗಿದ್ದರಿಂದ ಈ ಸಿನಿಮಾ ಕೆಲಸಗಳು ಮುಂದಕ್ಕೆ ಹೋಗಿದ್ದವು. ಅಕ್ಟೋಬರ್ನಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಈಗ ಡಿಸೆಂಬರ್ನಲ್ಲಿ ಸಿನಿಮಾ ಬರಲಿದೆ ಎಂದು ತಂಡ ಘೋಷಿಸಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.