ದರ್ಶನ್​ಗೆ ಮತ್ತೆ ಸಂಕಷ್ಟ; ಬ್ಯಾಂಕ್​ನಿಂದ ಪ್ರಮುಖ ಮಾಹಿತಿ ಕಲೆ ಹಾಕಿದ ಪೊಲೀಸರು

ದರ್ಶನ್ ಪ್ರಕರಣದಲ್ಲಿ ಹಣದ ವ್ಯವಹಾರ ನಡೆದಿದೆ. ಕ್ಯಾಶ್ ಮೂಲಕ ಒಂದಷ್ಟು ವ್ಯವಹಾರಗಳು ಕುದುರಿವೆ. ಆದರೆ, ಇದರ ಜೊತೆಗೆ ಆನ್​ಲೈನ್ ಮೂಲಕವೂ ಹಣದ ವ್ಯವಹಾರ ನಡೆದಿರುವ ಬಗ್ಗೆ ಗುಮಾನಿ ಇದೆ. ಈ ಕಾರಣದಿಂದ ಪೊಲೀಸರು ಈ ವಿಚಾರವಾಗಿ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.

ದರ್ಶನ್​ಗೆ ಮತ್ತೆ ಸಂಕಷ್ಟ; ಬ್ಯಾಂಕ್​ನಿಂದ ಪ್ರಮುಖ ಮಾಹಿತಿ ಕಲೆ ಹಾಕಿದ ಪೊಲೀಸರು
ದರ್ಶನ್
Edited By:

Updated on: Nov 25, 2024 | 9:12 AM

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಆದರೆ, ಪೊಲೀಸರು ಈಗ ಸುಮ್ಮನೆ ಕುಳಿತಿಲ್ಲ. ಚಾರ್ಜ್​ಶೀಟ್ ಸಲ್ಲಿಕೆ ಬಳಿಕವೂ ಅವರು ತನಿಖೆ ಮುಂದುವರಿಸಿದ್ದಾರೆ. ನಾನಾ ಹಂತದಲ್ಲಿ ತನಿಖೆ ನಡೆಸುವ ಕೆಲಸ ಆಗುತ್ತಿದೆ. ಹದಿನೇಳು ಆರೋಪಿಗಳ ಹಣಕಾಸಿನ ಮೂಲಕ್ಕೆ ತನಿಖಾಧಿಕಾರಿಗಳು ಕೈ ಹಾಕಿದ್ದಾರೆ. ಇದರಿಂದ ಮತ್ತಷ್ಟು ವಿಚಾರಗಳು ಹೊರಕ್ಕೆ ಬರುತ್ತವೆಯೇ ಎನ್ನುವ ಪ್ರಶ್ನೆ ಮೂಡಿದೆ.

ದರ್ಶನ್ ಪ್ರಕರಣದಲ್ಲಿ ಹಣದ ವ್ಯವಹಾರ ನಡೆದಿದೆ. ಕ್ಯಾಶ್ ಮೂಲಕ ಒಂದಷ್ಟು ವ್ಯವಹಾರಗಳು ಕುದುರಿವೆ. ಆದರೆ, ಇದರ ಜೊತೆಗೆ ಆನ್​ಲೈನ್ ಮೂಲಕವೂ ಹಣದ ವ್ಯವಹಾರ ನಡೆದಿರುವ ಬಗ್ಗೆ ಗುಮಾನಿ ಇದೆ. ಈ ಕಾರಣದಿಂದ ಪೊಲೀಸರು ಈ ವಿಚಾರವಾಗಿ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಬೆಂಗಳೂರಿನ ವಿವಿಧ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದು, ಅವುಗಳ ಮಾಹಿತಿ ಪಡೆಯಲಾಗಿದೆ.

ಐಡಿಎಫ್​ಸಿ ಫಸ್ಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್​​ಡಿಎಫ್​ಸಿ ಬ್ಯಾಂಕ್, ಕೋಟಕ್ ಮಹೇಂದ್ರ ಬ್ಯಾಂಕ್, ಕೆನರಾ ಬ್ಯಾಂಕ್, ಎಸ್​ಬಿಐ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ಗಳ ಮ್ಯಾನೇಜರ್​ನ ಸಂಪರ್ಕಿಸಿ ಪೊಲೀಸರು ಮಾಹಿತಿ ಸಂಗ್ರಹ ಮಾಡಿದ್ದಾರೆ.

ಮಾಗಡಿರೋಡ್​ನ ಒಂದು ಬ್ಯಾಂಕ್​ನಿಂದ 14 ಜನ ಆರೋಪಿಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕೆವೈಸಿ ಮಾಹಿತಿ ಪಡೆದಿದ್ದಾರೆ. ಇ-ಮೇಲ್ ಮೂಲಕ ಮಾಹಿತಿ ಸಂಗ್ರಹ ಆಗಿದೆ. ಕೊಲೆಯ ಹಿಂದೆ ಅಥವಾ ನಂತರದ ದಿನಗಳಲ್ಲಿ ದೊಡ್ಡ ಮೊತ್ತದ ಹಣದ ವ್ಯವಹಾರ ನಡೆದಿದೆಯೇ ಎನ್ನುವ ಬಗ್ಗೆ ತನಿಖೆ ನಡೆಯಲಿದೆ. ಒಂದೊಮ್ಮೆ ಇದು ನಡೆದಿದ್ದರೆ ದರ್ಶನ್​ಗೆ ಸಂಕಷ್ಟ ಉಂಟಾಗಲಿದೆ.

ಇದನ್ನೂ ಓದಿ: ಮೂರು ವಾರವಾದರೂ ದರ್ಶನ್​ಗೆ ಶಸ್ತ್ರಚಿಕಿತ್ಸೆ ಮಾಡಲಾಗಿಲ್ಲ ಏಕೆ? ಇಲ್ಲಿದೆ ಕಾರಣ

ದರ್ಶನ್ ಅವರು ಕೊಲೆ ಮುಚ್ಚಿ ಹಾಕಲು ದೊಡ್ಡ ಮೊತ್ತದ ಹಣ ನೀಡಿದ್ದಾರೆ ಎನ್ನುವ ಆರೋಪ ಇದೆ. ಒಂದಷ್ಟು ಹಣದ ವ್ಯವಹಾರ ಕ್ಯಾಶ್ ಮೂಲಕ ಆಗಿದೆ. ಒನ್ನೊಂದಷ್ಟು ಹಣದ ವ್ಯವಹಾರ ಆನ್​ಲೈನ್ ಮೂಲಕ ಆಗಿರೋ ಸಾಧ್ಯತೆ ಇರುತ್ತದೆ. ಈ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. ಆರೋಪಿಗಳ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರೋ ಬ್ಯಾಂಕ್ ಖಾತೆಯ ವಿವರ ನೀಡುವಂತೆ ಪೊಲೀಸರು ಈ ಮೊದಲು ಬ್ಯಾಂಕ್​ನವರಿಗೆ ಮನವಿ ಮಾಡಿದ್ದರು. ಅದರಂತೆ ಎಲ್ಲಾ ಮಾಹಿತಿಗಳನ್ನ ಖಾಕಿ ಸಂಗ್ರಹಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:28 am, Mon, 25 November 24