ಹೇಗಿದೆ ನೋಡಿ ದರ್ಶನ್ ನಟನೆಯ ‘ಡೆವಿಲ್’ ಮೇಕಿಂಗ್; ವಿಡಿಯೋ ರಿಲೀಸ್ ಮಾಡಿದ ಟೀಂ

|

Updated on: May 10, 2024 | 11:14 AM

Devil Making Video: ಡೆವಿಲ್’ ಚಿತ್ರವನ್ನು ಅಕ್ಟೋಬರ್​ನಲ್ಲಿ ರಿಲೀಸ್ ಮಾಡೋ ಆಲೋಚನೆ ಚಿತ್ರತಂಡಕ್ಕೆ ಇತ್ತು. ಆದರೆ ದರ್ಶನ್​ ಕೈಗೆ ಪೆಟ್ಟಾಗಿದೆ. ಹೀಗಾಗಿ ಶೂಟಿಂಗ್ ಮುಂದಕ್ಕೆ ಹೋಗಿದೆ. ಇದರಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಈಗ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ.

ಹೇಗಿದೆ ನೋಡಿ ದರ್ಶನ್ ನಟನೆಯ ‘ಡೆವಿಲ್’ ಮೇಕಿಂಗ್; ವಿಡಿಯೋ ರಿಲೀಸ್ ಮಾಡಿದ ಟೀಂ
ದರ್ಶನ್
Follow us on

ನಟ ದರ್ಶನ್ (Darshan Thoogudeepa) ನಟನೆಯ ‘ಡೆವಿಲ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಫಸ್ಟ್ ಲುಕ್ ಟೀಸರ್ ವೈರಲ್ ಆಗಿತ್ತು. ಈಗ ಅಕ್ಷಯ ತೃತೀಯ (ಮೇ 10) ಹಿನ್ನೆಲೆಯಲ್ಲಿ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲಾಗಿದೆ. ಇದನ್ನು ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ. ಈ ವಿಡಿಯೋ ಗಮನ ಸೆಳೆಯುತ್ತಿದೆ.

‘ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಇದೆ. ‘ವಂಶಿ’, ‘ಮಿಲನ’ ಮೊದಲಾದ ಸಿನಿಮಾಗಳಿಗೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದರು. ದರ್ಶನ್ ಅವರ ಜೊತೆ ಈ ಮೊದಲು ‘ತಾರಕ್’ ಸಿನಿಮಾ ಮಾಡಿದ್ದರು. ಈ ಚಿತ್ರ 2017ರಲ್ಲಿ ರಿಲೀಸ್ ಆಗಿತ್ತು. ಇವರು ಎರಡನೇ ಬಾರಿಗೆ ಒಂದಾಗಿದ್ದಾರೆ.

ಇದನ್ನೂ ಓದಿ: ದನ್​ಗೆ ಇದೆ ಬಾಲಿವುಡ್​ ಸ್ಟಾರ್ ಹೀರೋನ ಭೇಟಿ ಮಾಡೋ ಆಸೆ

ಫೆಬ್ರವರಿಯಲ್ಲಿ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿತ್ತು. ಇದರಲ್ಲಿ ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರ್ಸು ಪಾಪು ಹೆಸರು ಕೇಳಲ್ವ? ಡೆವಿಲ್’ ಎಂದು ಫಸ್ಟ್​ ಲುಕ್ ಟೀಸರ್​ನಲ್ಲಿ ಇತ್ತು. ಈ ಟೀಸರ್ ಮೇಕಿಂಗ್​ನ ವಿಡಿಯೋ ಮಾಡಿ ಪೋಸ್ಟ್ ಮಾಡಲಾಗಿತ್ತು.

ದರ್ಶನ್ ಅವರ ನಟನೆಯ ‘ಕಾಟೇರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ಡೆವಿಲ್’ ಚಿತ್ರವನ್ನು ಅಕ್ಟೋಬರ್​ನಲ್ಲಿ ರಿಲೀಸ್ ಮಾಡೋ ಆಲೋಚನೆ ಚಿತ್ರತಂಡಕ್ಕೆ ಇತ್ತು. ಆದರೆ ದರ್ಶನ್​ ಕೈಗೆ ಪೆಟ್ಟಾಗಿದೆ. ಹೀಗಾಗಿ ಶೂಟಿಂಗ್ ಮುಂದಕ್ಕೆ ಹೋಗಿದೆ. ಇದರಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.