ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಅವರನ್ನು ಇಡಲಾಗಿದೆ. ದರ್ಶನ್ ಅವರು ಎ2 ಆರೋಪಿ ಆದರೆ, ಪವಿತ್ರಾ ಗೌಡ ಅವರು ಎ1 ಆರೋಪಿ ಎನಿಸಿಕೊಂಡಿದ್ದಾರೆ. ದರ್ಶನ್ ಅವರು ಯಾವಾಗ ಹೊರ ಬರುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಬಹುವಾಗಿ ಕಾಡಿತ್ತು. ಇದಕ್ಕೆ ಕೌಡೇಪಿರ ಲಾಲಸಾಬ ದೇವರು ಭವಿಷ್ಯ ನುಡಿದಿದ್ದಾರೆ. ಮೂರೇ ತಿಂಗಳಲ್ಲಿ ದರ್ಶನ್ ಹೊರಗೆ ಬರಲಿದ್ದಾರೆ ಎಂದು ದೇವರಿಂದ ಭವಿಷ್ಯವಾಣಿ ಸಿಕ್ಕಿದೆ.
ದರ್ಶನ್ ಬಂಧನವಾಗಿ ಎರಡು ತಿಂಗಳು ಆಗುತ್ತಾ ಬಂದಿದೆ. ಅವರಿಗೆ ಜೈಲುವಾಸ ನರಕಯಾತನೆ ತಂದಿದೆ. ಜೈಲೂಟ ಹೊಂದುತ್ತಿಲ್ಲ. ಶತಾಯ ಗತಾಯ ಅವರು ಹೊರ ಬರಲು ಪ್ರಯತ್ನಿಸುತ್ತಿದ್ದಾರೆ. ಆದರೆ. ಅದು ಸಾಧ್ಯವಾಗುತ್ತಿಲ್ಲ. ಚಾರ್ಜ್ಶೀಟ್ ಸಲ್ಲಿಕೆ ಮಾಡದೆ ಜಾಮೀನಿಗೆ ಅರ್ಜಿ ಹಾಕೋಕೆ ಸಾಧ್ಯವಿಲ್ಲ. ಹೀಗಾಗಿ, ದರ್ಶನ್ ಅವರಿಗೆ ಯಾವಾಗ ಹೊರಗೆ ಬರುತ್ತೇನೆ ಎಂದು ಅತಿಯಾಗಿ ಅನಿಸುತ್ತಿದೆ. ಅಭಿಮಾನಿಗಳಿಗೂ ತಮ್ಮ ನೆಚ್ಚಿನ ನಟ ಯಾವಾಗ ಹೊರಕ್ಕೆ ಬರೋದು ಎನ್ನುವ ಪ್ರಶ್ನೆ ಕಾಡಿದೆ. ಇದಕ್ಕೆ ದೇವರಿಂದ ಉತ್ತರ ಸಿಕ್ಕಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ 10ನೇ ವಾರ್ಡಿನಲ್ಲಿ ಇರಿಸಲಾಗಿದ್ದ ಕೌಡೇಪಿರ ಲಾಲಸಾಬ ಅವರು ಈ ಭವಿಷ್ಯ ನುಡಿದಿದ್ದಾರೆ. ದರ್ಶನ್ ಅಭಿಮಾನಿಗಳು ದೇವರ ಎದುರು ಪ್ರಶ್ನೆ ಇಟ್ಟಿದ್ದರು. ‘ದರ್ಶನ್ ಬಿಡುಗಡೆ ಯಾವಾಗ’ ಎನ್ನುವ ಪ್ರಶ್ನೆ ಕೇಳಿದ್ದರು. ಇದಕ್ಕೆ ಈ ದೇವರಿಂದ ಉತ್ತರ ಸಿಕ್ಕಿದೆ. ‘ಮೂರೇ ತಿಂಗಳಲ್ಲಿ ದರ್ಶನ್ ಹೊರಕ್ಕೆ ಬರುತ್ತಾರೆ’ ಎಂದು ದೇವರು ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ 2019ರಲ್ಲಿ ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಡಿಕೆ ಶಿವಕುಮಾರ್ ಅರೆಸ್ಟ್ ಆಗಿದ್ದರು. ಆ ಸಂದರ್ಭದಲ್ಲೂ ಕೌಡೇಪಿರ ಲಾಲಸಾಬ ದೇವರು ಭವಿಷ್ಯ ನುಡಿದಿತ್ತು. ಅದು ನಿಜ ಆಗಿತ್ತು. ಹೀಗಾಗಿ, ದರ್ಶನ್ ಫ್ಯಾನ್ಸ್ ಈಗ ಖುಷಿಯಾಗಿದ್ದಾರೆ.
ಇದನ್ನೂ ಓದಿ: Darshan Thoogudeepa: ಪಶ್ಚಾತ್ತಾಪದ ಬಳಿಕವೂ ಬದಲಾಗಿಲ್ಲ ದರ್ಶನ್: ಜೈಲಧಿಕಾರಿ
ಮೊಹರಂ ಸಂದರ್ಭದಲ್ಲಿ ದೇವರನ್ನು ಕೂರಿಸೋ ಪದ್ಧತಿ ಮುಸ್ಲಿಂ ಧರ್ಮದಲ್ಲಿ ಇದೆ. ಅದೇ ರೀತಿ ಕೊಪ್ಪಳದಲ್ಲಿ ಕೌಡೇಪಿರ ಲಾಲಸಾಬ ದೇವರು ದರ್ಶನ್ ಬಗ್ಗೆ ಉತ್ತರಿಸಿದ್ದಾರೆ. ಆದರೆ, ಅಲಾಹಿ ದೇವರು ದರ್ಶನ್ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.