
ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರು ಇತ್ತೀಚೆಗೆ ಹೊಸ ಕಾರು ಖರೀದಿ ಮಾಡಿದ್ದಾರೆ. ಆ ಕಾರು ಬೇರೆ ಯಾವುದೂ ಅಲ್ಲ ಹಮ್ಮರ್ ಎಲೆಕ್ಟ್ರಿಕಲ್ ಇವಿ. ಇದು ಎಲೆಕ್ಟ್ರಿಕ್ ಕಾರಾದರೂ ಸಾಕಷ್ಟು ಐಷಾರಾಮಿ ಫೀಚರ್ಗಳನ್ನು ಹೊಂದಿದೆ ಎನ್ನಬಹುದು. ದರ್ಶನ್ ಬಳಿಯೂ ಈ ಮೊದಲು ಹಮ್ಮರ್ ಇತ್ತು ಎಂಬ ವಿಚಾರ ನಿಮಗೆ ಗೊತ್ತೇ? ಅವರು ತೆಗೆದುಕೊಂಡಿದ್ದು ಪೆಟ್ರೋಲ್ ವಾಹನ ಆಗಿತ್ತು. ಆದರೆ, ಅದನ್ನು ಅವರು ಮಾರುವ ನಿರ್ಧಾರ ತೆಗೆದುಕೊಂಡು ಮಾರಿಯೇ ಬಿಟ್ಟರು. ಇದಕ್ಕೆ ಕಾರಣವನ್ನು ಅವರು ಈ ಮೊದಲು ವಿವರಿಸಿದ್ದರು.
ದರ್ಶನ್ ಅವರು ಕಾರಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಈ ಕಾರಣಕ್ಕೆ ಅವರು ಆಗಾಗ ವಿವಿಧ ಕಾರುಗಳನ್ನು ಡ್ರೈವ್ ಮಾಡೋದನ್ನು ನೀವು ಕಾಣಬಹುದು. ಲ್ಯಾಂಬೋರ್ಗಿನಿ, ರೇಂಜ್ ರೋವರ್ ಕಾರುಗಳನ್ನು ಚಾಲನೆ ಮಾಡಿಕೊಂಡು ಹೋಗಿದ್ದರು. ಅವರ ಬಳಿ ಹಮ್ಮರ್ ಕೂಡ ಇತ್ತು.
‘ನನಗೆ ಬೆಂಟ್ಲಿ ತೆಗೆದುಕೊಳ್ಳಬೇಕು ಎಂಬ ಆಸೆ ಇದೆ. ಆದರೆ, ಇಲ್ಲಿ ಶೋ ರೂಂ ಇಲ್ಲ. ಮುಂಬೈನಲ್ಲಿ ಇದೆ. ನಾನು ಈ ಮೊದಲು ಹಮ್ಮರ್ ತೆಗೆದುಕೊಂಡಿದ್ದೆ. ನಾವು ಜೋಶ್ನಲ್ಲಿ ಇದ್ದೆವು. ಆದರೆ, ಒಳಗಡೆ 800 ಗಿಂತಾ ಖಚಡ ಆಗಿತ್ತು ಗಾಡಿ. ಎಸಿ ಬರಲ್ಲ, ಸೀಟ್ ಅಡ್ಜಸ್ಟ್ಮೆಂಟ್ ಬರೋದಿಲ್ಲ. ಪೆಟ್ರೋಲ್ ಮಾತ್ರ ಕುಡಿಯುತ್ತಿತ್ತು’ ಎಂದು ದರ್ಶನ್ ಅವರು ಈ ಮೊದಲು ಹೇಳಿದ್ದರು.
‘ಇಲ್ಲಿ ಶೋ ರೂಂ ಇರಲಿಲ್ಲ. ಮೆಕ್ಯಾನಿಕ್ ದುಬೈನಿಂದ ಬರಬೇಕಿತ್ತು. ನಾವು ಹಮ್ಮರ್ ಗ್ರೂಪ್ ಮಾಡಿಕೊಂಡಿದ್ದೆವು. ಆ ಗ್ರೂಪ್ನಲ್ಲಿ ಸಮಸ್ಯೆಗಳನ್ನು ಹಾಕುತ್ತಿದ್ದೆವು. ಇಂಥ ಸಮಸ್ಯೆ ಇದೆ ಎಂದು ಹೇಳುತ್ತಿದ್ದೆವು. ಅವನು ಬಂದು ವಿಲ್ಸನ್ ಮ್ಯಾನರ್ನಲ್ಲಿ ಉಳಿಯುತ್ತಿದ್ದ. ನಾನು ಈ ಕಷ್ಟ ನೋಡೇ ಗಾಡಿ ಕೊಟ್ಟೆ’ ಎಂದಿದ್ದರು ದರ್ಶನ್.
ಇದನ್ನೂ ಓದಿ: 20 ವರ್ಷ ಕಿರಿಯ ನಟಿಯ ಜೊತೆ ರಣವೀರ್ ಸಿಂಗ್ ರೊಮ್ಯಾನ್ಸ್; ಕೇಳಿಬಂತು ಟೀಕೆ
‘ಯಾವುದೇ ಕಾರು ಖರೀದಿಸಿದರೂ ಇಲ್ಲಿ ಶೋ ರೂಂ ಇರೋ ಖಾರನ್ನು ಖರೀದಿಸಬೇಕು ಎಂಬ ನಿರ್ಧಾರಕ್ಕೆ ಬಂದೆ. ಶೋ ರೂಂ ಇಲ್ಲಿಲ್ಲ. ಈ ಕಾರಣಕ್ಕೆ ಬೆಂಟ್ಲಿ ಖರೀದಿಸದೇ ಸುಮ್ಮನೆ ಇದ್ದೇನೆ’ ಎಂದು ದರ್ಶನ್ ಹಲವು ವರ್ಷಗಳ ಹಿಂದೆ ಹೇಳಿಕೊಂಡಿದ್ದರು. ದರ್ಶನ್ ಅವರು ಸದ್ಯ ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಶೂಟ್ಗೆ ಅವರು ವಿದೇಶಕ್ಕೆ ತೆರಳಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:16 am, Fri, 11 July 25