ಪ್ರದೋಶ್ ಮಾಫಿ ಸಾಕ್ಷಿ ತಡೆಯಲು ಹರಸಾಹಸ, ಮತ್ತೆ ದರ್ಶನ್​​ಗೆ ಹಿನ್ನಡೆ

ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪ್ರದೋಶ್ ಅವರ ಮಾಫಿ ಸಾಕ್ಷಿಯನ್ನು ತಡೆಯುವ ನಾನಾ ಯತ್ನ ಮಾಡಿಕೊಂಡೇ ಬರಲಾಗುತ್ತಿದೆ. ಇತ್ತೀಚೆಗಷ್ಟೆ ವಿಚಾರಣಾ ನ್ಯಾಯಾಲಯವು ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಗೆ ಸೆಪ್ಟೆಂಬರ್ 28ರ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ಇದೀಗ ದರ್ಶನ್ ಪರ ವಕೀಲರು ಮತ್ತೊಮ್ಮೆ ಹೊಸ ಅರ್ಜಿ ದಾಖಲಿಸಿದ್ದಾರೆ.

ಪ್ರದೋಶ್ ಮಾಫಿ ಸಾಕ್ಷಿ ತಡೆಯಲು ಹರಸಾಹಸ, ಮತ್ತೆ ದರ್ಶನ್​​ಗೆ ಹಿನ್ನಡೆ
Renuka Swamy

Updated on: Sep 26, 2026 | 6:19 PM

ಮುಖ್ಯಾಂಶಗಳು

  • ರೇಣುಕಾ ಸ್ವಾಮಿ ಪ್ರಕರಣದ ವಿಚಾರಣೆ
  • ಪ್ರದೋಶ್ ಸಾಕ್ಷಿ ತಡೆಯಲು ಮತ್ತೆ ಪ್ರಯತ್ನ
  • ಅರ್ಜಿಯ ರದ್ದು ಮಾಡಿದ ನ್ಯಾಯಾಲಯ

ಪ್ರದೋಶ್, ಮಾಫಿ ಸಾಕ್ಷಿ ಆಗಿ ಬದಲಾಗಿರುವುದು ರೇಣುಕಾ ಸ್ವಾಮಿ ಪ್ರಕರಣಕ್ಕೆ ಬಹುದೊಡ್ಡ ತಿರುವು ನೀಡಿದೆ. ದರ್ಶನ್​​ಗಂತೂ ಪ್ರದೋಶ್​​ ಅವರ ಮಾಫಿ ಸಾಕ್ಷಿಯಿಂದ ದೊಡ್ಡ ಹಿನ್ನಡೆ ಆಗುವ ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಪ್ರದೋಶ್ ಅವರ ಮಾಫಿ ಸಾಕ್ಷಿ ತಡೆಯಲು ದರ್​ಶನ್ ಹಾಗೂ ಅವರ ವಕೀಲರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪ್ರದೋಶ್ ಅವರ ಮಾಫಿ ಸಾಕ್ಷಿಯನ್ನು ತಡೆಯುವ ನಾನಾ ಯತ್ನ ಮಾಡಿಕೊಂಡೇ ಬರಲಾಗುತ್ತಿದೆ. ಇತ್ತೀಚೆಗಷ್ಟೆ ವಿಚಾರಣಾ ನ್ಯಾಯಾಲಯವು ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಗೆ ಸೆಪ್ಟೆಂಬರ್ 28ರ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ಇದೀಗ ದರ್ಶನ್ ಪರ ವಕೀಲರು ಮತ್ತೊಮ್ಮೆ ಹೊಸ ಅರ್ಜಿ ದಾಖಲಿಸಿದ್ದಾರೆ.

ಪ್ರದೋಶ್ ಮಾಫಿ ಸಾಕ್ಷಿ ತಡೆಯಲು ದರ್ಶನ್ ಪರ ವಕೀಲರು ಹೈಕೋರ್ಟ್​​ಗೆ ಅರ್ಜಿ ಹಾಕಿದ್ದರು. ಅಲ್ಲಿಯೂ ಸಹ ಹಿನ್ನಡೆ ಆಗಿದೆ. ಆದರೆ ಇತ್ತೀಚೆಗೆ ವಿಚಾರಣಾ ನ್ಯಾಯಾಲಯದಲ್ಲಿ ಈ ಬಗ್ಗೆ ವಾದ ಮಂಡಿಸುವಾಗ ಹೈಕೋರ್ಟ್​​ ಆದೇಶದ ಪ್ರತಿಯನ್ನು ಶನಿವಾರದ ಒಳಗೆ ಸಲ್ಲಿಸುವಂತೆ ದರ್ಶನ್ ಪರ ವಕೀಲರಿಗೆ ಹೇಳಲಾಗಿತ್ತು. ಅಲ್ಲದೆ, ಅದೇ ದಿನ ವಾದ ಮಂಡಿಸಿದ್ದ ಹಷ್ಮತ್ ಪಾಷಾ ಅವರು ತಾವು ಪ್ರದೋಶ್ ಮಾಫಿ ಸಾಕ್ಷಿ ಕುರಿತಾಗಿ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲಿರುವುದಾಗಿಯೂ ಹೇಳಿದ್ದರು. ಇದೀಗ ಈ ಎರಡೂ ಕಾರಣಗಳನ್ನು ಪ್ರಧಾನವಾಗಿರಿಸಿಕೊಂಡು ಹೊಸ ಅರ್ಜಿಯನ್ನು ವಕೀಲರು ಸಲ್ಲಿಸಿದ್ದಾರೆ.

ಇದನ್ನೂ ಓದಿ:ಜೈಲಲ್ಲಿ ಕೂತು ಹೊರಗೆ ಆಟ ಆಡಿಸುತ್ತಿರುವ ಪ್ರದೋಶ್: ದರ್ಶನ್ ಪರ ವಕೀಲರಿಂದ ಗಂಭೀರ ಆರೋಪ

ತಮಗೆ ಇನ್ನೂ ಹೈಕೋರ್ಟ್ ಆದೇಶದ ಪ್ರತಿ ಸಿಕ್ಕಿಲ್ಲ ಹಾಗೂ ಪ್ರದೋಶ್ ಮಾಫಿ ಸಾಕ್ಷಿ ವಿರುದ್ಧವಾಗಿ ತಾವು ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಲಿರುವ ಕಾರಣ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಗೆ ಒಂದು ವಾರ ಗಡುವು ನೀಡಬೇಕು ಎಂದು ಕೋರಿದ್ದಾರೆ. ಆ ವರೆಗೆ ಬೇರ ಸಾಕ್ಷಿಗಳ ವಿಚಾರಣೆಗಳನ್ನು ಬೇಕಾದರೆ ವಿಚಾರಣೆ ನಡೆಸಿರಿ, ಆದರೆ ಪ್ರದೋಶ್ ಸಾಕ್ಷಿ ಹೇಳಿಕೆಯನ್ನು ಒಂದು ವಾರದ ವರೆಗೆ ಮುಂದೂಡಿ ಎಂದು ಮನವಿ ಸಲ್ಲಿಸಿದ್ದಾರೆ.

ಆದರೆ 59ನೇ ಸಿಸಿಹೆಚ್ ಕೋರ್ಟ್ ಮತ್ತೊಮ್ಮೆ ಅರ್ಜಿಯನ್ನು ರದ್ದು ಮಾಡಿದೆ. ಆ ಮೂಲಕ ಸೋಮವಾರ (ಸೆಪ್ಟೆಂಬರ್ 28) ಪ್ರದೋಶ್ ಮಾಫಿ ಸಾಕ್ಷಿ ದಾಖಲಿಸುವುದು ಬಹುತೇಕ ಖಾತ್ರಿ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us