ಕೊರೊನಾ ಭೀತಿ ಮಧ್ಯೆಯೂ.. ಫ್ಯಾನ್ಸ್ ಜೊತೆ ‘ಟಗರು’ ವೀಕ್ಷಿಸಿದ ವಿಜಿ, ಡಾಲಿ, ಚಿಟ್ಟೆ!
ಬೆಂಗಳೂರು: ಬಹಳ ದಿನಗಳ ನಂತರ ಸಿನಿರಸಿಕರ ಆಸೆಯಂತೆ ಚಿತ್ರಮಂದಿರಗಳು ಮತ್ತೊಮ್ಮೆ ಬಾಗಿಲು ತೆರೆದಿವೆ. ಕೊರೊನಾ ಕಾಟದಿಂದ ಕಂಗಾಲಾಗಿ ಮನೆಯಲ್ಲೇ ಲಾಕ್ ಆಗಿದ್ದ ಜನರು ಇದೀಗ ಟಾಕೀಸ್ ಮತ್ತು ಮಲ್ಟಿಪ್ಲೆಕ್ಸ್ಗಳತ್ತ ಮುಖಮಾಡುತ್ತಿದ್ದಾರೆ. ಅಂತೆಯೇ, ಆಯುಧ ಪೂಜೆಯ ಪ್ರಯುಕ್ತ ಕೊಂಚ ರಿಲಾಕ್ಸ್ ಆಗಲು ನಗರದ ಗೋಪಾಲನ್ ಮಾಲ್ಗೆ ಬಂದಿದ್ದ ಸಿನಿಪ್ರಿಯರಿಗೆ ಒಂದು ಅಚ್ಚರಿ ಕಾದಿತ್ತು. ಹೌದು, ಕೊರೊನಾ ಭಯದ ನಡುವೆಯೂ ಇಂದು ನಟರಾದ ಡಾಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ಥಿಯೇಟರ್ಗೆ ಬಂದು ತಮ್ಮ ಅಭಿಮಾನಿಗಳೊಂದಿಗೆ ಟಗರು ಸಿನಿಮಾ ವೀಕ್ಷಿಸಿದರು. […]
ಬೆಂಗಳೂರು: ಬಹಳ ದಿನಗಳ ನಂತರ ಸಿನಿರಸಿಕರ ಆಸೆಯಂತೆ ಚಿತ್ರಮಂದಿರಗಳು ಮತ್ತೊಮ್ಮೆ ಬಾಗಿಲು ತೆರೆದಿವೆ. ಕೊರೊನಾ ಕಾಟದಿಂದ ಕಂಗಾಲಾಗಿ ಮನೆಯಲ್ಲೇ ಲಾಕ್ ಆಗಿದ್ದ ಜನರು ಇದೀಗ ಟಾಕೀಸ್ ಮತ್ತು ಮಲ್ಟಿಪ್ಲೆಕ್ಸ್ಗಳತ್ತ ಮುಖಮಾಡುತ್ತಿದ್ದಾರೆ. ಅಂತೆಯೇ, ಆಯುಧ ಪೂಜೆಯ ಪ್ರಯುಕ್ತ ಕೊಂಚ ರಿಲಾಕ್ಸ್ ಆಗಲು ನಗರದ ಗೋಪಾಲನ್ ಮಾಲ್ಗೆ ಬಂದಿದ್ದ ಸಿನಿಪ್ರಿಯರಿಗೆ ಒಂದು ಅಚ್ಚರಿ ಕಾದಿತ್ತು.
ಹೌದು, ಕೊರೊನಾ ಭಯದ ನಡುವೆಯೂ ಇಂದು ನಟರಾದ ಡಾಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ಥಿಯೇಟರ್ಗೆ ಬಂದು ತಮ್ಮ ಅಭಿಮಾನಿಗಳೊಂದಿಗೆ ಟಗರು ಸಿನಿಮಾ ವೀಕ್ಷಿಸಿದರು. ಥಿಯೇಟರ್ನಲ್ಲಿದ್ದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಿದ ಡಾಲಿ ಮತ್ತು ಚಿಟ್ಟೆ ತಮ್ಮ ಫ್ಯಾನ್ಸ್ನೊಂದಿಗೆ ಸೇರಿ ಟಗರು ಚಿತ್ರವನ್ನು ಎಂಜಾಯ್ ಮಾಡಿದರು.
ಚಿತ್ರ ವೀಕ್ಷಿಸಿದ ನಂತರ ತಮ್ಮ ಅಭಿಮಾನಿಗಳೊಂದಿಗೆ ಸೆಲ್ಫಿ ಸಹ ಕ್ಲಿಕ್ಕಿಸಿಕೊಂಡರು. ಬಳಿಕ ಥಿಯೇಟರ್ಗೆ ಬಂದ ನಟ ದುನಿಯಾ ವಿಜಿ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ನಡುವೆ ಮಾತನಾಡಿದ ನಟ ದುನಿಯಾ ವಿಜಿ ಮಲ್ಟಿಪ್ಲೆಕ್ಸ್ನಲ್ಲಿ ಪಾಲಿಸಲಾಗುತ್ತಿದ್ದ ಸುರಕ್ಷತಾ ಕ್ರಮಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.
Published On - 6:54 pm, Sun, 25 October 20