
ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ವಿವಾದಗಳು ಶುರುವಾಗಿವೆ. ಪ್ರಥಮ್ (Pratham) ಮೇಲೆ ದರ್ಶನ್ ಅಭಿಮಾನಿಗಳು ಹಲ್ಲೆಗೆ ಯತ್ನಿಸಿದರು ಎಂಬ ಆರೋಪ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಥಮ್ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ದರ್ಶನ್ (Darshan) ಬಗ್ಗೆ ಕೆಲವು ಖಾರವಾದ ಮಾತುಗಳನ್ನು ಆಡಿದರು. ‘ದರ್ಶನ್ ಅವರಲ್ಲಿ ಕಿತ್ತುಕೊಳ್ಳೋಕೆ ಏನೂ ಇಲ್ಲ. ಅವರು ಧರಿಸೋದು ವಿಗ್. ಇನ್ನು, ಗಡ್ಡ ಮೀಸೆ ಅವರು ಬಿಡೋದಿಲ್ಲ. ಇನ್ನೇನು ಕಿತ್ತುಕೊಳ್ಳಲಿ’ ಎಂದು ಪ್ರಥಮ್ ಹೇಳಿದ್ದರು. ಆ ಮಾತನ್ನು ಧ್ರುವ ಸರ್ಜಾ (Dhruva Sarja) ಅವರು ಖಂಡಿಸಿದ್ದಾರೆ. ಇದೆಲ್ಲ ಬೇಕಿರಲಿಲ್ಲ ಎಂದು ಧ್ರುವ ಹೇಳಿದ್ದಾರೆ.
‘ಪ್ರಥಮ್ ಅವರ ವರ್ತನೆಯಿಂದ ನನಗೆ ಬಹಳ ಬೇಸರ ಆಗಿದೆ. ಈ ವಿಚಾರದಲ್ಲಿ ದರ್ಶನ್ ಪರ ನಿಲ್ಲುವುದು ನಮ್ಮ ಕರ್ತವ್ಯ. ಲಾಯರ್ ಜಗದೀಶ್ ಮಾತನ್ನು ಪ್ರಥಮ್ ಕೇಳಬೇಕಿತ್ತು. ಗೌರವ ಇಲ್ಲದ ರೀತಿಯಲ್ಲಿ, ನಿಂದಿಸುವ ಹಾಗೆ ಚಿಟಿಕೆಯೆಲ್ಲ ಹೊಡೆದು, ವಿಗ್ ಅದು ಇದು ಅಂತ ಮಾತನಾಡುವ ಅವಶ್ಯಕತೆ ಇರಲಿಲ್ಲ ಎನಿಸುತ್ತದೆ’ ಎಂದಿದ್ದಾರೆ ಧ್ರುವ ಸರ್ಜಾ.
‘ಎಲ್ಲರಿಗೂ ಅವರವರ ಆತ್ಮಗೌರವ ಇರುತ್ತದೆ. ಯಾರೋ ಕುಗ್ಗಿದ್ದಾರೆ ಎಂದಾಗ ಆಳಿಗೊಂದು ಕಲ್ಲು ಹಾಕಬಾರದು. ಈ ವಿಚಾರದಿಂದ ಸುದೀಪ್, ಶಿವಣ್ಣ, ದುನಿಯಾ ವಿಜಯ್, ಧನಂಜಯ ಅವರಿಗೆ ಬೇಜಾರು ಆಗಿರುತ್ತದೆ. ಪುನೀತ್ ಸರ್ ಇದ್ದಿದ್ರೆ ಬೇಜಾರು ಆಗಿರುತ್ತಿತ್ತು. ನಮ್ಮ ಅಣ್ಣನಿಗೂ ಬೇಜಾರು ಆಗಿರುತ್ತಿತ್ತು. ನಮ್ಮ ಹಿರಿಯ ನಟರು ಇಂಥ ಉದಾಹರಣೆ ಸೆಟ್ ಮಾಡಿಲ್ಲ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
‘ಇದೇ ಮಾತನ್ನು ಸುದೀಪ್ ಅಥವಾ ಪುನೀತ್ ಅವರಿಗೆ ಯಾರಾದ್ರೂ ಹೇಳಿದ್ರೆ ನಾವೆಲ್ಲರೂ ಮಾತನಾಡುತ್ತಿದ್ವಿ. ಈಗ ಮಾತನಾಡಲೇಬೇಕಾದ ಸಮಯ ಬಂದಿದೆ. ಮಾತನಾಡದೇ ಇದ್ದರೆ ಈಗ ಒಬ್ಬರು ಇದ್ದಾರೆ. ನಾಳೆ ಜಾಸ್ತಿ ಜನ ಆಗ್ತಾರೆ. ತಪ್ಪು ಉದಾಹರಣೆ ಸೆಟ್ ಆಗುತ್ತದೆ. ಯಾರು ನಿಮಗೆ ಬೆದರಿಕೆ ಹಾಕಿದ್ದಾರೋ ಅವರ ಮೇಲೆ ನೀವು ಕ್ರಮ ತೆಗೆದುಕೊಳ್ಳಬೇಕು. ಅದು ಬಿಟ್ಟು, ಉಪವಾಸ ಮಾಡ್ತೀನಿ ಎಂಬುದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದಿದ್ದಾರೆ ಧ್ರುವ.
ಇದನ್ನೂ ಓದಿ: ಟ್ರೋಲ್ ಮಾಡಿಸುತ್ತಿರುವುದೇ ದರ್ಶನ್: ಓಪನ್ ಆಗಿ ಹೇಳಿದ ನಟ ಪ್ರಥಮ್
‘ನೀವು ಏನು ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದೀರಿ ಅಂತ ನನಗೆ ಗೊತ್ತಾಗಿಲ್ಲ. ಇನ್ನೊಬ್ಬರಿಗೆ ಬೆದರಿಕೆ ಹಾಕಿ ಅಂತ ಯಾವ ಕಲಾವಿದರೂ ಹೇಳಲ್ಲ. ಪ್ರಥಮ್ಗೆ ಬೇಸರ ಆಗಿರಬಹುದು. ಅವರ ಕುಟುಂಬದಲ್ಲಿ ಏನೂ ಒತ್ತಡ ಇರಬಹುದು. ಆದರೆ ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತದೆ. ಯಾರನ್ನೂ ಮೆಚ್ಚಿಸಲು ನಾನು ಈ ಮಾತು ಹೇಳುತ್ತಿಲ್ಲ. ಪ್ರಥಮ್ ಅವರಿಗೆ ಒಂದು ಮನವಿ. ನೀವು ಒಂದು ಬ್ರೇಕ್ ತೆಗೆದುಕೊಳ್ಳಿ. ನೀವು ಚಿತ್ರರಂಗ ಬಿಡುವ ಅಗತ್ಯ ಇಲ್ಲ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.