‘ಆಪರೇಶನ್ ಡಿ’ ಸಿನಿಮಾ ಟೀಸರ್​ ಬಿಡುಗಡೆ ಮಾಡಿದ ಧ್ರುವ ಸರ್ಜಾ; ಚಿತ್ರತಂಡಕ್ಕೆ ಖುಷಿ

‘ಆಪರೇಶನ್ ಡಿ’ ಸಿನಿಮಾ ತಂಡಕ್ಕೆ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅವರು ಬೆಂಬಲ ನೀಡಿದ್ದಾರೆ. ಟೀಸರ್​ ಬಿಡುಗಡೆ ಮಾಡಿಕೊಡುವ ಮೂಲಕ ವಿಶ್​ ಮಾಡಿದ್ದಾರೆ. ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್, ಸ್ನೇಹಾ ಭಟ್, ಇಂಚರಾ ಭರತ್ ರಾಜ್ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಇತ್ತೀಚೆಗೆ ‘ಆಪರೇಶನ್ ಡಿ’ ಚಿತ್ರದ ಸುದ್ದಿಗೋಷ್ಠಿ ನಡೆಯಿತು.

‘ಆಪರೇಶನ್ ಡಿ’ ಸಿನಿಮಾ ಟೀಸರ್​ ಬಿಡುಗಡೆ ಮಾಡಿದ ಧ್ರುವ ಸರ್ಜಾ; ಚಿತ್ರತಂಡಕ್ಕೆ ಖುಷಿ
‘ಆಪರೇಷನ್​ ಡಿ’ ಚಿತ್ರತಂಡ

Updated on: Oct 07, 2024 | 10:25 PM

ನಟ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಅವರು ‘ಆಪರೇಶನ್ ಡಿ’ ಸಿನಿಮಾದ ಟೀಸರ್ ರಿಲೀಸ್​ ಮಾಡಿದರು. ‘ಅದ್ವಿತಾ ಫಿಲ್ಮ್ ಫ್ಯಾಕ್ಟರಿ’ ಮತ್ತು ‘ಮಸ್ಕ್ಯುಲರ್ ಗ್ರೂಪ್’ ಮೂಲಕ ಭಾರ್ಗವಿ ಮುರಳಿ, ರಂಗನಾಥ್ ಬಿ. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ತಿರುಮಲೇಶ್ ವಿ. ನಿರ್ದೇಶನ ಮಾಡಿದ್ದು, ಧ್ರುವ ಸರ್ಜಾ ಅವರು ಈ ಸಿನಿಮಾ ತಂಡಕ್ಕೆ ವಿಶ್ ಮಾಡಿದ್ದಾರೆ. ಟೀಸರ್ ಲಾಂಚ್ ಮಾಡಿದ ಧ್ರುವ ಸರ್ಜಾ ಅವರಿಗೆ ನಿರ್ದೇಶಕ ತಿರುಮಲೇಶ್​ ಅವರು ಧನ್ಯವಾದ ತಿಳಿಸಿದ್ದಾರೆ. ಟೀಸರ್​ ಬಿಡುಗಡೆ ನಂತರ ‘ಆಪರೇಶನ್ ಡಿ’ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದರು.

ಈ ಸಿನಿಮಾದಲ್ಲಿ ಸಸ್ಪೆನ್ಸ್-ಥ್ರಿಲ್ಲರ್, ಮರ್ಡರ್ ಮಿಸ್ಟರಿ ಕಹಾನಿ ಇರಲಿದೆ. ಈ ಬಗ್ಗೆ ನಿರ್ದೇಶಕರು ವಿವರಣೆ ನೀಡಿದ್ದಾರೆ. ‘ಮರ್ಡರ್ ಮಿಸ್ಟರಿ ಆಗಿದ್ದರೂ ಕೂಡ ಈ ಸಿನಿಮಾದ ಯಾವುದೇ ದೃಶ್ಯದಲ್ಲಿ ರಕ್ತ ಕಾಣಿಸಲ್ಲ. 2018 ಮತ್ತು 2019ರ ಸಮಯದಲ್ಲಿ ಬರೆದ ಕಾಲ್ಪನಿಕ ಕಥೆ ಇದು. 2022ರಲ್ಲಿ ಆ ಕಥೆ ಸಿನಿಮಾ ರೂಪ ಸಿಕ್ಕಿತು. ಈ ಸಿನಿಮಾ ಆಗಲು ಕುಟುಂಬದವರು ಮತ್ತು ಸ್ನೇಹಿತರು ಸಹಕಾರ ನೀಡಿದರು’ ಎಂದು ನಿರ್ದೇಶಕರು ಹೇಳಿದ್ದಾರೆ.

‘ಆಪರೇಶನ್ ಡಿ’ ಸಿನಿಮಾಗೆ ಸದ್ಯದಲ್ಲೇ ಸೆನ್ಸಾರ್ ಪ್ರಕ್ರಿಯೆ ನಡೆಯಲಿದೆ. ಈ ವರ್ಷದ ಕೊನೆಯಲ್ಲಿ ಸಿನಿಮಾವನ್ನು ತೆರೆಕಾಣಿಸಲು ಪ್ಲ್ಯಾನ್​ ನಡೆದಿದೆ. ಟೀಸರ್​ನಲ್ಲಿರುವ ನಾರಾಯಣ, ಲಕ್ಷ್ಮೀ ಮತ್ತು ನಾರದ ಪಾತ್ರಗಳಿಗೆ ಶ್ರೀನಿ, ಸಂಗೀತಾ ಭಟ್, ಸುದರ್ಶನ್ ರಂಗಪ್ರಸಾದ್ ಧ್ವನಿ ನೀಡಿದ್ದಾರೆ. ‘ಸಿರಿ ಮ್ಯೂಸಿಕ್’ ಯೂಟ್ಯೂಬ್ ಚಾನಲ್ ಮೂಲಕ ಟೀಸರ್​ ಬಿಡುಗಡೆಯಾಗಿದೆ.

ಇದನ್ನೂ ಓದಿ: ಮಾರ್ಟಿನ್​ ಟ್ರೇಲರ್​ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ನೇರವಾಗಿ ಉತ್ತರ ನೀಡಿದ ಧ್ರುವ ಸರ್ಜಾ

ವೇದಿಕಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ 4 ಹಾಡುಗಳು ಇರಲಿವೆ. ಕೆಂಪಗಿರಿ, ತಿರುಮಲೇಶ್ ಅವರು ತಲಾ ಒಂದು ಸಾಂಗ್ ಬರೆದಿದ್ದಾರೆ. ಇನ್ನುಳಿದ 2 ಹಾಡುಗಳಿಗೆ ವೇದಿಕಾ ಅವರ ಸಾಹಿತ್ಯವಿದೆ. ವಿಕ್ರಮ್ ಶ್ರೀಧರ್ ಸಂಕಲನ ಮಾಡಿದ್ದಾರೆ. ಕಾರ್ತಿಕ್ ಪ್ರಸಾದ್ ಛಾಯಾಗ್ರಾಹಕ ಮಾಡಿದ್ದಾರೆ. ಜೈ ಹರಿಪ್ರಸಾದ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ.

ರುದ್ರೇಶ್ ಬೂದನೂರು, ವಿನೋದ್ ದೇವ್, ಸುಹಾಸ್ ಆತ್ರೇಯ, ಸ್ನೇಹಾ ಭಟ್, ಇಂಚರಾ ಭರತ್ ರಾಜ್, ಶ್ರೀಧರ್, ಮಹೇಶ್ ಎಸ್. ಕಲಿ, ಪೃಥ್ವಿ ಬನವಾಸಿ, ಸಂಚಯಾ ನಾಗರಾಜ್, ಶಿವಾನಂದ್, ವೆಂಕಟಾಚಲ, ಶಿವಮಂಜು, ಕ್ರೇಜಿ ನಾಗರಾಜ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us