ಮಿಲ್ಟ್ರಿ ಆಫೀಸರ್ ಪಾತ್ರದಲ್ಲಿ ಕಮಾಲ್ ಮಾಡಲಿದ್ದಾರಂತೆ ಧ್ರುವ ಸರ್ಜಾ!
ರಾಘವೇಂದ್ರ ಹೆಗಡೆ ಹೇಳಿರೋ ಕಥೆಗೆ ಇಂಪ್ರೆಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಈ ಸಮಾಚಾರವನ್ನು ಧ್ರುವ ಸರ್ಜಾ ಹಂಚಿಕೊಂಡಿದ್ದು, ಸದ್ಯ ಚಿತ್ರತಂಡ ಟೈಟಲ್ ರಿವೀಲ್ ಮಾಡಿಲ್ಲ. ಮಾಹಿತಿ ಪ್ರಕಾರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜಬರ್ದಸ್ತ್ ಮಿಲ್ಟ್ರಿ ಆಫೀಸರ್ ಪಾತ್ರದಲ್ಲಿ ಕಮಾಲ್ ಮಾಡಲಿದ್ದಾರೆ
ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಸಿನಿಮಾ ನಂತರ ದುಬಾರಿ ಸಿನಿಮಾದಲ್ಲಿ ನಟಿಸೋಕೆ ರೆಡಿಯಾಗಿದ್ದಾರೆ.
ಹೌದು ಹಲವು ವಿಶೇಷತೆಗಳಿಂದ ಸೌಂಡ್ ಮಾಡ್ತಿರೋ ಪೊಗರು ಸಿನಿಮಾಗಾಗಿ ಅಭಿಮಾನಿಗಳು ಕಾದು ಕುಳಿತಿರೋ ಬೆನ್ನಲ್ಲೇ ದುಬಾರಿ ಸಿನಿಮಾಗಾಗಿ ಧ್ರುವ ಸರ್ಜಾ ರೆಡಿಯಾಗುತ್ತಿದ್ದಾರೆ. ಸದ್ಯ ಧ್ರುವ ಸರ್ಜಾ ಕುರಿತ ಲೇಟೆಸ್ಟ್ ಸಮಾಚಾರ ಎಂದರೆ ಜಗ್ಗುದಾದ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ರಾಘವೇಂದ್ರ ಹೆಗಡೆ ನಿರ್ದೇಶಿಸಿ ನಿರ್ಮಾಣ ಮಾಡ್ತಿರೋ ಸಿನಿಮಾಗೆ ಧ್ರುವ ರೆಡಿಯಾಗಲಿದ್ದಾರೆ.
ರಾಘವೇಂದ್ರ ಹೆಗಡೆ ಹೇಳಿರೋ ಕಥೆಗೆ ಇಂಪ್ರೆಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಈ ಸಮಾಚಾರವನ್ನು ಧ್ರುವ ಸರ್ಜಾ ಹಂಚಿಕೊಂಡಿದ್ದು, ಸದ್ಯ ಚಿತ್ರತಂಡ ಟೈಟಲ್ ರಿವೀಲ್ ಮಾಡಿಲ್ಲ. ಮಾಹಿತಿ ಪ್ರಕಾರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜಬರ್ದಸ್ತ್ ಮಿಲ್ಟ್ರಿ ಆಫೀಸರ್ ಪಾತ್ರದಲ್ಲಿ ಕಮಾಲ್ ಮಾಡಲಿದ್ದು, ಅಂದುಕೊಂಡಂತೆ ಆದ್ರೆ ಧ್ರುವ ಜುಲೈ ವೇಳೆಗೆ ಮಿಲಿಟರಿ ಆಫೀಸರ್ ಪಾತ್ರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಿದ್ದಾರೆ.
Raghavendra hedge sir narrated a story. what a wonderful first half. Felt refreshed ? Jai Hanuman ? pic.twitter.com/63mt4z2Won
— Dhruva Sarja (@DhruvaSarja) December 23, 2020
ಪೊಗರು ನಂತರ ‘ದುಬಾರಿ’ಯಾದ ಧ್ರುವ ಸರ್ಜಾ ಹೊಸ ಸಿನಿಮಾಗೆ ಮುಹೂರ್ತ ನೆರವೇರಿಸಿದ್ರು