‘ಟಾಕ್ಸಿಕ್’ಗೆ ತಿರುಗೇಟು ಕೊಡಲು ಸರ್​​​ಪ್ರೈಸ್ ಶಾಕ್ ರೆಡಿ ಮಾಡಿದ ‘ಧುರಂಧರ್ 2’

`ಧುರಂಧರ್ 2` ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆಯಾಗಲಿದ್ದರೂ, ಪ್ರಚಾರದ ಕೊರತೆಯಿಂದ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. `ಬಾಹುಬಲಿ 2`, `ಕೆಜಿಎಫ್ 2` ಯಶಸ್ಸಿನ ಸೀಕ್ವೆಲ್‌ಗಳ ಸಾಲಿನಲ್ಲಿ ಈ ಚಿತ್ರವೂ ಸೇರಬೇಕಿದೆ. `ಟಾಕ್ಸಿಕ್` ಚಿತ್ರದ ಭಾರಿ ಪ್ರಚಾರದ ಎದುರು, `ಧುರಂಧರ್ 2` ತಂಡ ಖಡಕ್ ಆಗಿ ನಿಲ್ಲಬೇಕಿದೆ.

‘ಟಾಕ್ಸಿಕ್’ಗೆ ತಿರುಗೇಟು ಕೊಡಲು ಸರ್​​​ಪ್ರೈಸ್ ಶಾಕ್ ರೆಡಿ ಮಾಡಿದ ‘ಧುರಂಧರ್ 2’
Toxic Vs Dhurandhar

Updated on: Mar 02, 2026 | 2:46 PM

ಒಂದು ಸಿನಿಮಾ ಹಿಟ್ ಆಗಿ ಅದಕ್ಕೆ ಸೀಕ್ವೆಲ್ ಬರ್ತಿದೆ ಎಂದರೆ ಆ ಚಿತ್ರ ಹಿಟ್ ಆಗೋದು ಬಹುತೇಕ ಖಚಿತ ಎಂಬ ವಾತಾವರಣ ನಿರ್ಮಾಣ ಆಗಿದೆ. ‘ಬಾಹುಬಲಿ 2’, ‘ಕೆಜಿಎಫ್ 2’, ‘ಪುಷ್ಪ 2’ ಚಿತ್ರಗಳ ಮೂಲಕ ಇದು ಸಾಬೀತಾಗಿದೆ. ಈಗ ಮಾರ್ಚ್ 19ಕ್ಕೆ ‘ಧುರಂಧರ್ 2’ (Dhurandhar 2) ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ಪ್ರಚಾರ ಆರಂಭ ಆಗಿಲ್ಲ. ಇದು ರಣವೀರ್ ಸಿಂಗ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಯಶ್ ಎದುರು ಬರಲು ಸಾಕಷ್ಟು ಸಿದ್ಧತೆ ಬೇಕು. ಆದರೆ, ಆ ಸಿದ್ಧತೆ ತಂಡದ ಕಡೆಯಿಂದ ಆಗುತ್ತಿಲ್ಲ ಎಂಬ ಕೊರಗು ಅಭಿಮಾನಿಗಳಿಗೆ ಇದೆ. ಹೀಗಿರುವಾಗಲೇ ಸಡನ್ ಶಾಕ್ ನೀಡಲು ‘ಧುರಂಧರ್ 2’ ತಂಡ ಪ್ಲ್ಯಾನ್ ಮಾಡಿದೆಯಂತೆ.

ಯಾವುದೇ ವಿಷಯವನ್ನು ಘೋಷಣೆ ಮಾಡಿ ರಿಲೀಸ್ ಮಾಡಿದರೆ ಅದಕ್ಕೆ ಹೈಪ್ ಸಿಗೋ ಸಾಧ್ಯತೆ ಕಡಿಮೆ. ಆದರೆ, ಯಾವುದೇ ಘೋಷಣೆ ಇಲ್ಲದೆ ಬಂದರೆ ಅದಕ್ಕೆ ಸಿಗೋ ಹೈಪ್ ಹೆಚ್ಚು. ಹೀಗಾಗಿ, ಹೋಳಿ ಹಬ್ಬದ ಪ್ರಯುಕ್ತ ಫೆಬ್ರವರಿ 3ರಂದು ‘ಧುರಂಧರ್ 2’ ಟ್ರೇಲರ್ ಲಾಂಚ್ ಮಾಡಲು ಪ್ಲ್ಯಾನ್ ರೂಪಿಸಲಾಗಿದೆಯಂತೆ. ಈ ಮೂಲಕ ಹಲ್ಚಲ್ ಎಬ್ಬಿಸಲು ಯೋಜನೆ ರೆಡಿ ಆಗಿದೆ.

‘ಟಾಕ್ಸಿಕ್’ ತಂಡ ನಿರಂತರವಾಗಿ ಸಿನಿಮಾ ಪ್ರಚಾರ ಮಾಡುತ್ತಿದೆ. ದಿನಕ್ಕೊಂದು ಅಪ್​​ಡೇಟ್ ಕೊಡುವ ಮೂಲಕ ಕುತೂಹಲ ಮೂಡಿಸುತ್ತಿದೆ. ಆದರೆ, ‘ಧುರಂಧರ್ 2’ ಟೀಂ ಆ ರೀತಿ ಅಲ್ಲ. ಈ ಮೊದಲು ‘ಧುರಂದರ್ 2’ ತಂಡದವರು ಟೀಸರ್ ರಿಲೀಸ್ ಮಾಡಿದ್ದರು. ಅದು ಮೊದಲ ಪಾರ್ಟ್​​ನ ಕೊನೆಯಲ್ಲಿ ಬರುವ ದೃಶ್ಯಗಳೇ ಇದ್ದವು. ಹೀಗಾಗಿ ಈ ಟೀಸರ್ ಗಮನ ಸೆಳೆಯುವಲ್ಲಿ ವಿಫಲವಾಗಿತ್ತು. ಈ ಕಾರಣದಿಂದ ಈಗ ಟ್ರೇಲರ್ ರಿಲೀಸ್ ಮಾಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ‘ಧುರಂದರ್ 2’ ತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಇದನ್ನೂ ಓದಿ: ಅಬ್ಬಬ್ಬಾ.. ‘ಟಾಕ್ಸಿಕ್’ ಚಿತ್ರಕ್ಕಾಗಿ ಕಿಯಾರಾ ಪಡೆದ ಸಂಭಾವನೆ ಇಷ್ಟೊಂದಾ?

‘ಟಾಕ್ಸಿಕ್’ ವಿರುದ್ಧ ಗೆಲ್ಲಬೇಕು ಎಂದರೆ ಅದು ಸುಲಭದಲ್ಲಿ ಇಲ್ಲ. ಯಶ್ ಅವರು ಏನೇ ಪ್ಲ್ಯಾನ್ ಮಾಡಿದರೂ ದೊಡ್ಡ ಮಟ್ಟದಲ್ಲಿ ಆಲೋಚಿಸಿರುತ್ತಾರೆ. ಎದುರಾಳಿಯ ಪ್ಲ್ಯಾನ್ ಏನು ಎಂಬುದನ್ನು ತಿಳಿದೇ ‘ಟಾಕ್ಸಿಕ್’ ರಿಲೀಸ್ ಮಾಡಲು ಅವರು ಮುಂದೆ ಬಂದಿದ್ದಾರೆ. ದಕ್ಷಿಣ ಭಾರತದ ಜೊತೆಗೆ ಬಾಲಿವುಡ್​​​ನಲ್ಲೂ ಸಿನಿಮಾ ಅಬ್ಬರಿಸೋದು ಫಿಕ್ಸ್ ಆಗಿದೆ. ಹೀಗಾಗಿ,ಈ ಚಿತ್ರದ ಎದುರು ಅಬ್ಬರಿಸಲು ‘ಧುರಂಧರ್ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ಲ್ಯಾನ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:24 pm, Mon, 2 March 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us