Fact Check: ಯಶ್ ಫ್ಯಾಮಿಲಿ ಸಮೇತ ಕುಂಭಮೇಳಕ್ಕೆ ಹೋಗಿದ್ದು ನಿಜವೇ? ಇಲ್ಲಿದೆ ವೈರಲ್ ವಿಡಿಯೋದ ಅಸಲಿಯತ್ತು

ರಾಕಿಂಗ್ ಸ್ಟಾರ್​ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯ ಒಂದು ವಿಡಿಯೋ ವೈರಲ್ ಆಗಿದೆ. ಅದರ ಅಸಲಿಯತ್ತು ಬೇರೆಯೇ ಇದೆ. ಮಹಾಕುಂಭಮೇಳದ ಸಂದರ್ಭದಲ್ಲಿಯೇ ಈ ವಿಡಿಯೋವನ್ನು ವೈರಲ್ ಮಾಡಲಾಗಿದೆ. ಹಾಗಾಗಿ ಜನರಿಗೆ ಕನ್​ಫ್ಯೂಸ್ ಆಗಿದೆ. ಹಾಗಾದ್ರೆ ಯಶ್ ಅವರು ಕುಂಭಮೇಳಕ್ಕೆ ಹೋಗಿದ್ದು ನಿಜವೇ?

Fact Check: ಯಶ್ ಫ್ಯಾಮಿಲಿ ಸಮೇತ ಕುಂಭಮೇಳಕ್ಕೆ ಹೋಗಿದ್ದು ನಿಜವೇ? ಇಲ್ಲಿದೆ ವೈರಲ್ ವಿಡಿಯೋದ ಅಸಲಿಯತ್ತು
Yash Family

Updated on: Feb 24, 2025 | 9:34 PM

ಪ್ಯಾನ್ ಇಂಡಿಯಾ ನಟ ಯಶ್ ಅವರು ಫ್ಯಾಮಿಲಿ ಮ್ಯಾನ್. ಪತ್ನಿ, ಮಕ್ಕಳ ಜೊತೆ ಅವರು ಕಾಲ ಕಳೆಯುತ್ತಾರೆ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಾರೆ. ಎಲ್ಲ ಹಬ್ಬ ಹರಿದಿನಗಳನ್ನು ಅವರು ಕುಟುಂಬದ ಜೊತೆ ಆಚರಿಸುತ್ತಾರೆ. ಎಲ್ಲ ಔತಣ ಕೂಟಗಳಲ್ಲಿ ಕುಟುಂಬ ಸಮೇತರಾಗಿ ಬರುತ್ತಾರೆ. ಈಗ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಒಂದು ವಿಡಿಯೋ ವೈರಲ್ ಆಗಿದೆ. ಇದು ಮಹಾಕುಂಭಮೇಳದ ವಿಡಿಯೋ ಎಂದು ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಆದರೆ ಈ ವಿಡಿಯೋದ ಅಸಲಿಯತ್ತು ಬೇರೆ ಇದೆ.

ಸದ್ಯಕ್ಕೆ ಯಶ್ ಅವರು ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಮಹಾಕುಂಭಮೇಳಕ್ಕೆ ತೆರಳಿಲ್ಲ. ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಹೊಸ ವಿಡಿಯೋ ಅಲ್ಲ. 2024ರ ವಿಡಿಯೋವನ್ನು ಈಗ ವೈರಲ್ ಮಾಡಲಾಗಿದೆ. ಮುಂಬೈನಲ್ಲಿ ರಾಧಿಕಾ ಪಂಡಿತ್, ಯಶ್, ಯಥರ್ವ್, ಆಯ್ರಾ ಸುತ್ತಾಡಿದ ವಿಡಿಯೋ ಅದು. ಆ ವಿಡಿಯೋವನ್ನು ಬಳಸಿಕೊಂಡು ‘ಕುಂಭಮೇಳದಲ್ಲಿ ಯಶ್ ಫ್ಯಾಮಿಲಿ’ ಎಂದು ತಪ್ಪಾದ ಮಾಹಿತಿಯೊಂದಿಗೆ ವೈರಲ್ ಮಾಡಲಾಗಿದೆ.

ಇದನ್ನೂ ಓದಿ: ರಾಮಾಯಣ ಸಿನಿಮಾಗೆ ಶೂಟಿಂಗ್ ಆರಂಭಿಸಿದ ರಾಕಿಂಗ್ ಸ್ಟಾರ್​ ಯಶ್

ಕೆಲವರು ಈ ವಿಡಿಯೋವನ್ನು ನಿಜ ಎಂದು ನಂಬಿದ್ದಾರೆ. ಮಹಾಕುಂಭಮೇಳಕ್ಕೆ ಹೋಗಿರುವ ಯಶ್ ಬಗ್ಗೆ ಹೆಮ್ಮೆ ಆಗುತ್ತಿದೆ ಎಂದೆಲ್ಲ ಕಮೆಂಟ್ ಮಾಡಿದ್ದಾರೆ. ಆದರೆ ಸ್ವಲ್ಪ ಗಮನವಿಟ್ಟು ನೋಡಿದವರಿಗೆ ಸತ್ಯ ಏನು ಎಂಬುದು ಗೊತ್ತಾಗಿದೆ. ‘ಇದು ಹಳೇ ವಿಡಿಯೋ. 2024ರಲ್ಲಿ ಯಶ್ ಅವರು ಮುಂಬೈನಲ್ಲಿ ಶೂಟಿಂಗ್​ ಮಾಡಿದ ಸಂದರ್ಭ ಇದು. ಸುಳ್ಳು ಮಾಹಿತಿ ಹಬ್ಬಿಸುವ ನಿಮಗೆ ನಾಚಿಕೆ ಆಗಬೇಕು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

2024ರ ವಿಡಿಯೋ:

ಮಹಾಕುಂಭಮೇಳಕ್ಕೆ ಅನೇಕ ಸೆಲೆಬ್ರಿಟಿಗಳು ಹೋಗಿಬರುತ್ತಿದ್ದಾರೆ ಎಂಬುದು ನಿಜ. ಕತ್ರಿನಾ ಕೈಫ್, ವಿಜಯ್ ದೇವರಕೊಂಡ, ಅಕ್ಷಯ್​ ಕುಮಾರ್, ವಿಕ್ಕಿ ಕೌಶಲ್, ಜಗ್ಗೇಶ್ ಮುಂತಾದವರು ಪುಣ್ಯ ಸ್ನಾನ ಮಾಡಿದ್ದಾರೆ. ಆದರೆ ಯಶ್ ಅವರು ಈವರೆಗೂ ಮಹಾಕುಂಭಮೇಳಕ್ಕೆ ಹೋಗಿಲ್ಲ. ಕೆಲವೇ ದಿನಗಳ ಹಿಂದೆ ಅವರು ಮುಂಬೈನಲ್ಲಿ ‘ರಾಮಾಯಣ’ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ. ಇನ್ನು, ‘ಟಾಕ್ಸಿಕ್’ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಏಕಕಾಲಕ್ಕೆ ಚಿತ್ರೀಕರಣ ಆಗುತ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.