
ನಿರ್ದೇಶಕ ಎಸ್. ನಾರಾಯಣ್ (S Narayan) ಅವರು ಇತ್ತೀಚೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ‘ನನ್ನ ಹೆಸರಲ್ಲಿ ಫೇಕ್ ಟ್ವಿಟರ್ ಖಾತೆ ಮಾಡಲಾಗಿದೆ. ಇದರ ಮೂಲಕ ತಪ್ಪು ಸಂದೇಶ ರವಾನೆ ಮಾಡಲಾಗುತ್ತಿದೆ’ ಎಂದು ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಈಗ ಅವರು ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಏರಬೇಕಾದ ಪರಿಸ್ಥಿತಿ ಬಂದಿದೆ. ಅದೂ ಆರೋಪಿಯಾಗಿ. ಸೊಸೆ ಪವಿತ್ರಾ ಅವರು ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ದೂರು ದಾಖಲು ಮಾಡಿದ್ದು, ಎಫ್ಐಆರ್ ದಾಖಲಾಗಿದೆ.
2021ರಲ್ಲಿ ಎಸ್.ನಾರಾಯಣ್ ಪುತ್ರ ಪವನ್ ಹಾಗೂ ಪವಿತ್ರಾ ಮದುವೆ ನಡೆದಿತ್ತು. ಅದ್ದೂರಿಯಾಗಿ ಮದುವೆ ಮಾಡಿದ್ದರು. ಆದರೆ, ನಾಲ್ಕು ವರ್ಷ ಕಳೆಯುವುದರೊಳಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಾರಾಯಣ್ ಅವರ ಪತ್ನಿ ಭಾಗ್ಯವತಿ ಹಾಗೂ ಮಗ ಪವನ್ ವಿರುದ್ಧ ಪವಿತ್ರಾ ದೂರು ನೀಡಿದ್ದಾರೆ. ಮದುವೆಯಲ್ಲಿ ವರದಕ್ಷಿಣೆ ಕೊಟ್ಟರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದರೆ ಎಂದು ಪವಿತ್ರಾ ದೂರು ನೀಡಿದ್ದಾರೆ.
ಮನೆಯನ್ನು ತಾವೇ ನಡೆಸುತ್ತಿದ್ದದಾಗಿ ಪವಿತ್ರಾ ಹೇಳಿದ್ದಾರೆ. ‘ಪವನ್ಗೆ ಕೆಲಸ ಇಲ್ಲ. ಹೀಗಾಗಿ, ನಾನೇ ಕೆಲಸ ಮಾಡಿ ಮನೆ ನಡೆಸುತ್ತಿದ್ದೆ. ಈ ವೇಳೆ ‘ಕಲಾಸಾಮ್ರಾಟ್ ಟೀಂ ಅಕಾಡೆಮಿ’ ಆರಂಭಿಸಲು ಹಣಕ್ಕೆ ಬೇಡಿಕೆ ಇಡಲಾಯಿತು. ಆಗ ನಾನು ತಾಯಿಯ ಒಡವೆಯನ್ನು ಅಡವಿಟ್ಟು ಹಣ ಕೊಟ್ಟಿದ್ದೆ. ಆದರೆ ಕಲಾಸಾಮ್ರಾಟ್ ಟೀಂ ಅಕಾಡೆಮಿ ಲಾಸ್ ಆಗಿ ಕ್ಲೋಸ್ ಆಯಿತು’ ಎಂದು ಪವಿತ್ರಾ ಹೇಳಿದ್ದಾರೆ.
ಇಷ್ಟೆಲ್ಲ ಆದ ಬಳಿಕ ಪವಿತ್ರಾ ಅವರು ತಮ್ಮ ಹೆಸರಲ್ಲೇ 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್ಗೆ ನೀಡಿದ್ದರಂತೆ. ಆದರೆ, ಆದರೆ ಈಗ ಪವಿತ್ರಾ ಅವರನ್ನೇ ಮನೆಯಿಂದ ಹೊರಹಾಕಿದ್ದಾರಂತೆ.
ಇದನ್ನೂ ಓದಿ: ‘ಈ ನನ್ ಮಕ್ಳಿಗೆ..’; ಫೇಕ್ ಅಕೌಂಟ್ ಮಾಡಿದವರಿಗೆ ‘ಸೂರ್ಯವಂಶ’ ಸ್ಟೈಲ್ನಲ್ಲಿ ಎಸ್. ನಾರಾಯಣ್ ಕೌಂಟರ್
‘ಪವಿತ್ರಾ ಮನೆ ಬಿಟ್ಟು ಹೋಗಿ 10 ತಿಂಗಳಾಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ ಎಂದು ಹೇಳಿದರೆ ನಾನು ಅವರ ಹೆಸರಿಗೆ ಮಸಿ ಬಳಿದಂತೆ ಆಗುತ್ತದೆ. ಮದುವೆ ಆಗಿ ಒಂದು ತಿಂಗಳ ಬಳಿಕ ಮಾತುಕತೆಯೇ ನಿಂತು ಹೋಯಿತು. ವಯಸ್ಸು, ವ್ಯಕ್ತಿತ್ವಕ್ಕೂ ಎರಡಕ್ಕೂ ಪವಿತ್ರಾ ಬೆಲೆ ಕೊಡುತ್ತಿರಲಿಲ್ಲ’ ಎಂದಿದ್ದಾರೆ ಎಸ್ ನಾರಾಯಣ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.