ಪವಿತ್ರಾ ಗೌಡ ಮೊದಲ ಸಂಭಾವನೆ ಎಷ್ಟು? ಆಗ ಹೇಗಿತ್ತು ಅವರ ಲೈಫ್ ಸ್ಟೈಲ್?

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ. ದರ್ಶನ್​ಗೆ ಈ ಸ್ಥಿತಿ ಬರಲು ಸಹ ಪವಿತ್ರಾ ಕಾರಣ ಎನ್ನಲಾಗುತ್ತಿದೆ. ಪವಿತ್ರಾ ಗೌಡ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೆಶಕ ಉಮೇಶ್ ಗೌಡ, ಪವಿತ್ರಾ ಬಗ್ಗೆ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.

ಪವಿತ್ರಾ ಗೌಡ ಮೊದಲ ಸಂಭಾವನೆ ಎಷ್ಟು? ಆಗ ಹೇಗಿತ್ತು ಅವರ ಲೈಫ್ ಸ್ಟೈಲ್?
ಪವಿತ್ರಾ ಗೌಡ
Follow us
ಮಂಜುನಾಥ ಸಿ.
|

Updated on: Jun 20, 2024 | 4:50 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ (Pavitra Gowda) ಮೊದಲ ಆರೋಪಿಯಾಗಿದ್ದಾರೆ. ದರ್ಶನ್, ಈ ಕೊಲೆ ಪ್ರಕರಣ ನಡೆಯಲು ಮೂಲ ಕಾರಣ ಪವಿತ್ರಾ ಗೌಡ ಎನ್ನಲಾಗುತ್ತಿದೆ. ದರ್ಶನ್ ಗೆ ಈ ಸ್ಥಿತಿ ಬರಲು ಪವಿತ್ರಾ ಗೌಡ ಕಾರಣ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಪವಿತ್ರಾ ಗೌಡ, ನಟಿಯಾಗುವ ಆಸೆಯಿಂದ ಚಿತ್ರರಂಗಕ್ಕೆ ಬಂದವರು ಆದರೆ ನಟಿಯಾಗಿ ದೊಡ್ಡ ಯಶಸ್ಸು ಅವರಿಗೆ ಸಿಗಲಿಲ್ಲ. ಪವಿತ್ರಾ ಗೌಡಗೆ ಮೊದಲು ಅವಕಾಶ ಕೊಟ್ಟು ಸಿನಿಮಾ ರಂಗಕ್ಕೆ ಪರಿಚಯಿಸಿದ ನಿರ್ದೇಶಕ ಉಮೇಶ್ ಗೌಡ, ಪವಿತ್ರಾ ಗೌಡ ಬಗ್ಗೆ ಮಾತನಾಡಿದ್ದಾರೆ.

‘ಅಗಮ್ಯ’ ಸಿನಿಮಾಕ್ಕಾಗಿ ನಾವು ನಟಿಯರನ್ನು ಹುಡುಕುತ್ತಿದ್ದೆವು, ನಮ್ಮ ಬಳಿ ಬಜೆಟ್ ಕಡಿಮೆ ಇತ್ತು. ಹಾಗಾಗಿ ದೊಡ್ಡ ನಟಿಯರು ಬೇಕಿರಲಿಲ್ಲ. ಒಮ್ಮೆ ಕೋಆರ್ಡಿನೇಟರ್ ಒಬ್ಬರಿಂದ ಪವಿತ್ರಾ ಗೌಡ ಪರಿಚಯವಾಯ್ತು. ರಂಗಶಂಕರದಲ್ಲಿ ನಾವು ಭೇಟಿ ಆದೆವು. ಆದರೆ ಪವಿತ್ರಾ ಗೌಡ ಪಾತ್ರಕ್ಕೆ ಸೂಕ್ತ ಅಲ್ಲ ಅನಿಸಿತು. ಅಲ್ಲದೆ ಪವಿತ್ರಾರ ನಟನಾ ಪ್ರತಿಭೆ ಬಗ್ಗೆಯೂ ನನಗೆ ಅನುಮಾನವಾಯ್ತು. ಹಾಗಾಗಿ ಅವರನ್ನು ತೆಗೆದುಕೊಂಡಿರಲಿಲ್ಲ. ಆದರೆ ಆ ಕೋಆರ್ಡಿನೇಟರ್ ಪದೇ ಪದೇ ಕಾಲ್ ಮಾಡುತ್ತಿದ್ದರು, ಆ ಹುಡುಗಿಗೆ ಅವಕಾಶ ಕೊಡಿ, ಮಗು ಆಗಿದೆ, ಗಂಡ ಇಲ್ಲ ಕಷ್ಟದಲ್ಲಿದೆ ಎಂದೆಲ್ಲ ಹೇಳುತ್ತಿದ್ದರು, ಇನ್ನೇನು ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಬೇಕು ಎಂದುಕೊಂಡಾಗ ಒಬ್ಬ ನಟಿ ಕೈಕೊಟ್ಟರು, ಆಗ ಆ ಜಾಗಕ್ಕೆ ನಾವು ಪವಿತ್ರಾ ಗೌಡ ಅವರನ್ನು ಸೇರಿಸಿಕೊಂಡೆವು. ಸಿನಿಮಾಕ್ಕೆ ಹಾಕಿಕೊಳ್ಳುವಾಗಲೂ ಸಹ ಪವಿತ್ರಾಗೆ ಸಾಕಷ್ಟು ಸಲಹೆಗಳನ್ನು ನೀಡಿಯೇ ನಾವು ಸೇರಿಸಿಕೊಂಡೆವು’ ಎಂದಿದ್ದಾರೆ ಉಮೇಶ್ ಗೌಡ.

ಇದನ್ನೂ ಓದಿ:Pavithra Gowda: ಪವಿತ್ರಾ ಗೌಡ ಅತಿ ಆಸೆ ಎಷ್ಟಿತ್ತು ಗೊತ್ತಾ? ಇದುವೇ ಸಾಕ್ಷಿ

‘ಪವಿತ್ರಾಗೆ ನಟನೆ ಅಷ್ಟಾಗಿ ಬರುತ್ತಿರಲಿಲ್ಲ. ಆದರೆ ಎಲ್ಲರೊಟ್ಟಿಗೆ ಬಹಳ ಚೆನ್ನಾಗಿ ಬೆರೆಯುತ್ತಿದ್ದಳು. ತಮಾಷೆ ಮಾಡಿಕೊಂಡು ಇರುತ್ತಿದ್ದಳು, ಆದರೆ ತುಂಬಾ ರೀಟೇಕ್ ತೆಗೆದುಕೊಳ್ಳುತ್ತಿದ್ದಳು. ನಾನಂತೂ ನಟನೆ ವಿಷಯಕ್ಕೆ ಸಾಕಷ್ಟು ಬಾರಿ ಬೈದಿದ್ದೇನೆ. ಆಗ ಬೇಜಾರು ಮಾಡುತ್ತಿದ್ದಳು ಬಳಿಕ ನಮ್ಮನ್ನೇ ನಗಿಸುತ್ತಿದ್ದಳು. ಬಹಳ ಆಕ್ಟಿವ್ ಆಗಿರುತ್ತಿದ್ದಳು. ಆಗ ಡಿಮ್ಯಾಂಡಿಗ್ ಆಗಿ ಇರಲಿಲ್ಲ. ಸರಳವಾಗಿಯೇ ಇರುತ್ತಿದ್ದಳು, ಮೊದಲ ಸಿನಿಮಾಕ್ಕೆ ಸಂಭಾವನೆ ಸಹ ಫಿಕ್ಸ್ ಮಾಡಿರಲಿಲ್ಲ. ಹಣ ಕೇಳಿದಾಗ ಕೊಡುತ್ತಿದ್ದೆ, ಆಗಾಗ್ಗೆ ಐದು ಸಾವಿರ, ಎರಡು ಸಾವಿರ ಪಡೆದುಕೊಳ್ಳುತ್ತಿದ್ದಳು. ಮೊದಲ ಸಿನಿಮಾಕ್ಕೆ ಸುಮಾರು 20-25 ಸಾವಿರ ರೂಪಾಯಿ ಕೊಟ್ಟಿರಬಹುದು ಅಷ್ಟೆ’ ಎಂದಿದ್ದಾರೆ ಉಮೇಶ್.

ಇದನ್ನೂ ಓದಿ:Pavithra Gowda: ಹೇಗಿದ್ದ ಪವಿತ್ರಾ ಗೌಡ, ಹೇಗಾದ್ರು ನೋಡಿ; ಯಾರೂ ನಂಬೋಕೆ ಸಾಧ್ಯವಿಲ್ಲ

‘ಆಗ ಕೋಣನಕುಂಟೆ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿದ್ದಳು. ಪತಿ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ‘ ನಾವೂ ಸಹ ಅದರ ಬಗ್ಗೆ ಕೇಳಿರುತ್ತಿಲ್ಲ. ನಮ್ಮ ಜೊತೆ ಇದ್ದಾಗಲೂ ಸಿನಿಮಾಗಳಲ್ಲಿ ನಟಿಸಲು ಯತ್ನಿಸುತ್ತಿದ್ದಳು, ರಮ್ಯಾ ಅಂತ ಒಬ್ಬ ಗೆಳತಿ ಅವರಿಗೆ ಇದ್ದರು, ಅವರೊಟ್ಟಿಗೆ ಓಡಾಡುತ್ತಿದ್ದಳು, ಆಗಾಗ್ಗೆ ವಿಲ್ಸನ್ ಗಾರ್ಡನ್​ನ ನಮ್ಮ ಜ್ಯೂಸ್ ಸೆಂಟರ್​ಗೆ ಸಹ ಬರುತ್ತಿದ್ದಳು, ಬಹಳ ಬೇಗ ಸ್ನೇಹ ಬೆಳೆಸಿಕೊಳ್ಳುತ್ತಿದ್ದಳು. ನಮ್ಮ ಜೊತೆ ಕೆಲಸ ಮಾಡಲು ಆರಂಭಿಸಿದ ಎರಡು ವರ್ಷದಲ್ಲೇ ಆಕೆ ಚಿತ್ರರಂಗದಲ್ಲಿ ಚೆನ್ನಾಗಿ ಸಂಪರ್ಕ ಬೆಳೆಸಿಕೊಂಡಿದ್ದಳು, ದೊಡ್ಡ ನಿರ್ದೇಶಕರು, ವಿತರಕರು ಪರಿಚಯವಿತ್ತು, ದೊಡ್ಡ ನಿರ್ದೇಶಕರು ಆಕೆಗೆ ಕರೆ ಮಾಡುತ್ತಿದ್ದರು. ಇದೆಲ್ಲ ಆಶ್ಚರ್ಯ ತರಿಸುತ್ತಿತ್ತು’ ಎಂದು ನೆನಪು ಮಾಡಿಕೊಂಡಿದ್ದಾರೆ ಉಮೇಶ್.

ಸಿನಿಮಾ ಬಿಡುಗಡೆ ಆಗಿ ಆರು ತಿಂಗಳಾದ ಮೇಲೆ ಒಮ್ಮೆ ದುಬಾರಿ ಮಿನಿ ಕೂಪರ್ ಕಾರಿನಲ್ಲಿ ಬಂದಳು, ಆಗ ಆಕೆ ಬದಲಾಗಿದ್ದ ರೀತಿ ನೋಡಿ ಆಶ್ಚರ್ಯಾಯ್ತು. ಅದಾದ ಮೇಲೆ ಸಂಪರ್ಕದಲ್ಲಿರಲಿಲ್ಲ. ಜೆಪಿ ನಗರದಲ್ಲಿ ದೊಡ್ಡ ಮನೆಯಲ್ಲಿದ್ದಾಳೆ ಎಂದು ಕೇಳಿ ಪಟ್ಟೆವು. ಸಿನಿಮಾದಲ್ಲಿ ಕ್ಲಿಕ್ ಆಗಲಿಲ್ಲ, ಆದರೂ ದೊಡ್ಡ ಮನೆ, ಕಾರು ಎಲ್ಲ ಹೇಗೆ ಬಂತು ಎಂದು ಆಶ್ಚರ್ಯಪಟ್ಟೆವು. ಆದರೆ ಅಷ್ಟರಲ್ಲೇ ದರ್ಶನ್ ಹಾಗೂ ಪವಿತ್ರಾರ ಸ್ನೇಹದ ಕುರಿತು ಮಾಹಿತಿ ಹೊರಗೆ ಬಂದಿತ್ತು. 2017 ರಲ್ಲಿ ಪವಿತ್ರಾ ಹಾಗೂ ದರ್ಶನ್ ಸ್ನೇಹ ಮೀಡಿಯಾಗಳಿಂದ ಆಚೆ ಬಂತು’ ಎಂದಿದ್ದಾರೆ.

ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಆಸೆ, ಗುರಿ ಮುಂತಾದ ಏನೂ ಪವಿತ್ರಾಗೆ ಇರಲಿಲ್ಲ. ಜೀವನವನ್ನು ಆರಾಮವಾಗಿ ಕಳೆಯಬೇಕು, ಎಂಜಾಯ್ ಮಾಡಬೇಕು, ಗೆಳೆಯರೊಟ್ಟಿಗೆ ಕಾಲ ಕಳೆಯಬೇಕು, ಸುಖವಾಗಿ ಕಾಲ ಕಳೆಯಬೇಕು ಎಂಬುದು ಆಕೆಯ ಆಸೆಯಾಗಿತ್ತು. ಆ ವಯಸ್ಸಿನಲ್ಲಿ ಎಲ್ಲರ ಆಸೆಯೂ ಬಹುತೇಕ ಅದೇ ಆಗಿರುತ್ತದೆ. ಈಗ ಫ್ಯಾಷನ್ ಡಿಸೈನ್ ಬೊಟೀಕ್ ಆರಂಭಿಸಿದ್ದಾರೆ. ಆದರೆ ಆಗೆಲ್ಲ ಅದರ ಬಗ್ಗೆ ಯಾವ ಆಸಕ್ತಿಯೂ ಪವಿತ್ರಾಗೆ ಇರಲಿಲ್ಲ’ ಎಂದಿದ್ದಾರೆ ಉಮೇಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್