Divya Suresh: ದಿವ್ಯಾ ಸುರೇಶ್ ಈಗ ರೌಡಿ ಬೇಬಿ; ಮಾದಕ ಲುಕ್​ನಲ್ಲಿ ಬಿಗ್​ ಬಾಸ್​ ಸ್ಪರ್ಧಿ

|

Updated on: May 19, 2021 | 5:16 PM

‘ರೌಡಿ ಬೇಬಿ‘ ಚಿತ್ರವನ್ನು ರೆಡ್ಡಿ ಕೃಷ್ಣ ನಿರ್ದೇಶಿಸಿದ್ದಾರೆ. ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಕಾರ್ಯ ನಿರ್ವಹಿಸಿ ಅನುಭವವಿರುವ ರೆಡ್ಡಿ ಕೃಷ್ಣ ಅವರಿಗೆ ಇದು ಚೊಚ್ಚಲ ನಿರ್ದೇಶನ.

Divya Suresh: ದಿವ್ಯಾ ಸುರೇಶ್ ಈಗ ರೌಡಿ ಬೇಬಿ; ಮಾದಕ ಲುಕ್​ನಲ್ಲಿ ಬಿಗ್​ ಬಾಸ್​ ಸ್ಪರ್ಧಿ
ದಿವ್ಯಾ ಸುರೇಶ್​ ಸಿನಿಮಾ ರೌಡಿ ಬೇಬಿ ಚಿತ್ರದ ಫೋಟೋ
Follow us on

ಬಿಗ್​ ಬಾಸ್​ ಮೂಲಕ ನಟಿ ದಿವ್ಯಾ ಸುರೇಶ್​ ಖ್ಯಾತಿ ದುಪ್ಪಟ್ಟಾಗಿದೆ. ಮನೆಯಲ್ಲಿ ಅವರು ಸ್ಟ್ರಾಂಗ್​ ಮಹಿಳಾ ಸ್ಪರ್ಧಿಯಾಗಿ, ಮಂಜು ಪಾವಗಡ ಜತೆಗಿನ ಗೆಳೆತನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈಗ ಅವರ ನಟನೆಯ ‘ರೌಡಿ ಬೇಬಿ’ ಚಿತ್ರದ ಲಿರಿಕಲ್​ ಸಾಂಗ್​ ರಿಲೀಸ್​ ಆಗಿದೆ. ಈ ಹಾಡನ್ನು ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ರೌಡಿ ಬೇಬಿ‘ ಚಿತ್ರವನ್ನು ರೆಡ್ಡಿ ಕೃಷ್ಣ ನಿರ್ದೇಶಿಸಿದ್ದಾರೆ. ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಕಾರ್ಯ ನಿರ್ವಹಿಸಿ ಅನುಭವವಿರುವ ರೆಡ್ಡಿ ಕೃಷ್ಣ ಅವರಿಗೆ ಇದು ಚೊಚ್ಚಲ ನಿರ್ದೇಶನ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿಕೊಂಡಿದ್ದು, ಲಾಕ್ ಡೌನ್ ಮುಕ್ತಾಯದ ಬಳಿಕ ರಿಲೀಸ್​ ಆಗಲಿದೆ.

ಎಸ್ ಎಸ್ ರವಿಗೌಡ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ದಿವ್ಯಾ ಸುರೇಶ್ ಹಾಗೂ ಹೀರ್ ಕೌರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ನಾ ನೀನಾದರೆ..’ ಎಂಬ ಹಾಡಿನ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಹಾಡಿನಲ್ಲಿ ಅವರು ಗ್ಲಾಮರ್​ ಅವತಾರ ತಾಳಿದ್ದಾರೆ. ಈ ಹಾಡಿನಲ್ಲಿ ಅವರು ಲಿಪ್​ ಲಾಕ್​ ಕೂಡ ಮಾಡಿದ್ದು ಸ್ಟಿಲ್​ಗಳು ವೈರಲ್​ ಆಗಿವೆ.  ಈ ಹಾಡಿನಿಂದ ಚಿತ್ರಕ್ಕೆ ಮೈಲೇಜ್​ ಹೆಚ್ಚಾಗುವ ಎಲ್ಲಾ ಲಕ್ಷಣ ಇದೆ.

ರೌಡಿ ಬೇಬಿಯಲ್ಲಿ ದಿವ್ಯಾ ಸುರೇಶ್

ಅರಮಾನ್ ಹಾಗೂ ಅಭಿಷೇಕ್ ರಫಸ್ ಸಂಗೀತ ನಿರ್ದೇಶನ, ಸಾಮ್ರಾಟ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ ಹಾಗೂ ಚಂದ್ರು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿರುವ ನಾಲ್ಕು ಹಾಡುಗಳಿಗೆ ವಿ.ನಾಗೇಂದ್ರ ಪ್ರಸಾದ್, ಸಿಂಪಲ್ ಸುನಿ ಹಾಗೂ ಕಿನಾಲ್ ರಾಜ್ ಸಾಹಿತ್ಯ ಬರೆದಿದ್ದಾರೆ.

ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಸ್ಪರ್ಧಿಗಳಿಗೆ ಸಿನಿಮಾ ಆಫರ್​ ಹೆಚ್ಚುತ್ತಿದೆ. ರಘು ಗೌಡ ಅವರು ಬಿಗ್​ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅವರ ನಟನೆಯ ದ್ವಿಪಾತ್ರ ಚಿತ್ರದ ಪೋಸ್ಟರ್​ ರಿಲೀಸ್​ ಆಗಿತ್ತು. ಈಗ ದಿವ್ಯಾ ಸುರೇಶ್​ ನಟಿಸುತ್ತಿರುವ ಸಿನಿಮಾದ ಸಾಂಗ್​ ರಿಲೀಸ್​ ಆಗಿದೆ.

ಇದನ್ನೂ ಓದಿ: Bigg Boss Kannada: ನೀನೆಂಥ ಮೋಸಗಾರ ಅಂತ 10 ವಾರದ ನಂತರ ಗೊತ್ತಾಯ್ತು; ಮಂಜುಗೆ ತಿವಿದ ದಿವ್ಯಾ​

Divya Suresh: ‘ನನ್ನನ್ನು ಮದುವೆಗೆ ಆಮಂತ್ರಿಸು’ ಎನ್ನುವ ಮೂಲಕ ಮಂಜುಗೆ ಎಲ್ಲವನ್ನೂ ಸ್ಪಷ್ಟಪಡಿಸಿದ ದಿವ್ಯಾ ಸುರೇಶ್​

Published On - 5:11 pm, Wed, 19 May 21