‘ಸಲ್ಮಾನ್ ಖಾನ್​​, ಶಾರುಖ್ ಖಾನ್​​​ಗೆ ನನ್ನ ಹೋಲಿಸಬೇಡಿ’; ಯಶ್​ ನೇರ ಮಾತು

ಯಶ್ ಅವರನ್ನು ಸಲ್ಮಾನ್​ ಖಾನ್​ ಹಾಗೂ ಶಾರುಖ್​ ಖಾನ್​ಗೆ ಹೋಲಿಕೆ ಮಾಡಲಾಗುತ್ತಿದೆ. ಇದು ಯಶ್ ಗಮನಕ್ಕೂ ಬಂದಿದೆ. ಈ ಬಗ್ಗೆ ಪ್ರಶ್ನೆ ಎದುರಾದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ ಯಶ್​.

‘ಸಲ್ಮಾನ್ ಖಾನ್​​, ಶಾರುಖ್ ಖಾನ್​​​ಗೆ ನನ್ನ ಹೋಲಿಸಬೇಡಿ’; ಯಶ್​ ನೇರ ಮಾತು
ಶಾರುಖ್​-ಯಶ್​-ಸಲ್ಮಾನ್
Updated By: ರಾಜೇಶ್ ದುಗ್ಗುಮನೆ

Updated on: Apr 07, 2022 | 9:25 PM

‘ಕೆಜಿಎಫ್’ ಸಿನಿಮಾ (KGF Movie) ತೆರೆಕಂಡ ದಿನವೇ ಶಾರುಖ್ ಖಾನ್​ ನಟನೆಯ ‘ಝೀರೋ’ ಚಿತ್ರ ತೆರೆಗೆ ಬಂತು. ಶಾರುಖ್​ ಚಿತ್ರ ಸೋತರೆ, ಯಶ್​ ಸಿನಿಮಾ ಗೆದ್ದು ಬೀಗಿತ್ತು. ಶಾರುಖ್​ಗಿಂತ ಯಶ್​ ಗ್ರೇಟ್​ ಎನ್ನುವ ಮಾತು ಕೇಳಿ ಬಂತು. ಈಗ ಯಶ್ (Yash) ನಟನೆಯ ‘ಕೆಜಿಎಫ್​ ಚಾಪ್ಟರ್ 2​’ ಚಿತ್ರ ತೆರೆಗೆ ಬರುತ್ತಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಬಾಲಿವುಡ್​ನಲ್ಲೂ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಈ ಮೂಲಕ ಬಾಲಿವುಡ್​ ಚಿತ್ರಗಳಿಗೆ ಕಾಂಪಿಟೇಷನ್​ ಕೊಡೋಕೆ ಈ ಚಿತ್ರ ರೆಡಿ ಆಗಿದೆ. ಇನ್ನು, ಉತ್ತರ ಭಾರತದ ಕಡೆಗಳಲ್ಲಿ ‘ಕೆಜಿಎಫ್​ 2’ಗೆ ದೊಡ್ಡ ಮಟ್ಟದಲ್ಲೇ ಪ್ರಚಾರ ನೀಡಲಾಗುತ್ತಿದೆ. ಈ ವೇಳೆ ನಾನಾ ರೀತಿಯ ಪ್ರಶ್ನೆಗಳು ಯಶ್​ ಅವರನ್ನು ಎದುರುಗೊಳ್ಳುತ್ತಿವೆ. ಶಾರುಖ್​ ಖಾನ್ ಹಾಗೂ ಸಲ್ಮಾನ್​ ಖಾನ್ (Salman Khan)​ ಅವರಿಗೆ ಯಶ್​ ಅವರನ್ನು ಹೋಲಿಕೆ ಮಾಡಲಾಗುತ್ತಿದೆ. ಈ ಬಗ್ಗೆಯೂ ಪ್ರಶ್ನೆ ಇಡಲಾಯಿತು. ಈ ಬಗ್ಗೆ ಯಶ್ ನೇರವಾಗಿಯೇ ಉತ್ತರ ನೀಡಿದ್ದಾರೆ.

ಯಶ್ ಅವರನ್ನು ಸಲ್ಮಾನ್​ ಖಾನ್​ ಹಾಗೂ ಶಾರುಖ್​ ಖಾನ್​ಗೆ ಹೋಲಿಕೆ ಮಾಡಲಾಗುತ್ತಿದೆ. ಇದು ಯಶ್ ಗಮನಕ್ಕೂ ಬಂದಿದೆ. ಈ ಬಗ್ಗೆ ಪ್ರಶ್ನೆ ಎದುರಾದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ ಯಶ್​. ಅಷ್ಟೇ ಅಲ್ಲ, ಈ ರೀತಿಯ ಹೋಲಿಕೆ ಮಾಡಬೇಡಿ ಎಂದು ಕೂಡ ಯಶ್ ಕೋರಿದ್ದಾರೆ. ಅವರು ಈ ರೀತಿ ಹೇಳುವುದಕ್ಕೂ ಒಂದು ಮಹತ್ವದ ಕಾರಣವಿದೆ. ಯಶ್ ಸಿನಿಮಾ ರಂಗಕ್ಕೆ ಬರುವ ಸಂದರ್ಭದಲ್ಲಿ ಸಲ್ಮಾನ್​ ಹಾಗೂ ಶಾರುಖ್​ ಸಾಕಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದರು. ಈಗ ಇವರಿಗೆ ತಮ್ಮನ್ನು ಹೋಲಿಕೆ ಮಾಡಿದರೆ ಅದು ಸ್ಟಾರ್ ನಟರಿಗೆ ಅಗೌರವ ತೋರಿದಂತೆ ಅನ್ನೋದು ಯಶ್ ಅಭಿಪ್ರಾಯ.

‘ನಾನು ಸಿನಿಮಾ ಮಗು. ಅವರ ಸಿನಿಮಾ ನೋಡುತ್ತಾ ಬೆಳೆದವನು ನಾನು. ಇಲ್ಲಿ ಯಾವುದೂ ಶಾಶ್ವತವಲ್ಲ. ಅವರು ಸೂಪರ್‌ಸ್ಟಾರ್‌ಗಳು. ಅವರನ್ನು ಅಗೌರವಿಸುವುದು ಮತ್ತು ಅವರಿಗೆ ನನ್ನನ್ನು ಹೋಲಿಕೆ ಮಾಡುವುದು ತಪ್ಪು. ನಾನು ನಟನಾಗಲು ಇವರಿಬ್ಬರೇ ಸ್ಫೂರ್ತಿ. ಇವರಿಬ್ಬರೂ ಇಂಡಸ್ಟ್ರಿಯ ಆಧಾರ ಸ್ತಂಭ’ ಎಂದು ಬಾಯ್ತುಂಬ ಹೊಗಳಿದ್ದಾರೆ ಯಶ್. ಈ ಮೂಲಕ ಈ ಸ್ಟಾರ್​ ನಟರಿಗೆ ತಮ್ಮನ್ನು ಹೋಲಿಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಕೋರಿದ್ದಾರೆ.

‘ಕೆಜಿಎಫ್​ 2’ ಚಿತ್ರ ಏಪ್ರಿಲ್​ 14ರಂದು ದೊಡ್ಡ ಮಟ್ಟದಲ್ಲಿ ರಿಲೀಸ್​ ಆಗುತ್ತಿದೆ. ಸಿನಿಮಾದಲ್ಲಿ ಯಶ್​ಗೆ ಜತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್​, ರವೀನಾ ಟಂಡನ್ ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಪರಭಾಷೆಯಲ್ಲಿ ಚಿತ್ರದ ಬುಕ್ಕಿಂಗ್ ಶುರುವಾಗಿದೆ.

ಇದನ್ನೂ ಓದಿ: KGF 2: ‘ಯಶ್ ಬಹಳ ಪ್ರತಿಭಾವಂತ ನಟ’; ರಾಕಿಂಗ್ ಸ್ಟಾರ್ ಬಗ್ಗೆ ರವೀನಾ ವಿಶೇಷ ಮಾತು

KGF Chapter 2: ಮುಂಬೈನಲ್ಲಿ ‘ಕೆಜಿಎಫ್ 2’ ಚಿತ್ರತಂಡ; ಯಶ್ ನೋಡಲು ಮುಗಿಬಿದ್ದ ಫ್ಯಾನ್ಸ್- ಇಲ್ಲಿವೆ ಫೋಟೋಗಳು