National Award: ರಾಷ್ಟ್ರ ಪ್ರಶಸ್ತಿ ಪಡೆದ ಕರುನಾಡ ಸಿನಿಮಾಗಳು; ಹೆಮ್ಮೆ ತಂದ ಡೊಳ್ಳು, ತಲೆದಂಡ, ಜೀಟಿಗೆ, ನಾದದ ನವನೀತ

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕರುನಾಡಿನ ಸಿನಿಮಾಗಳು ಮನ್ನಣೆಗೆ ಪಾತ್ರವಾಗಿವೆ. ಡೊಳ್ಳು, ತಲೆದಂಡ, ಜೀಟಿಗೆ, ನಾದದ ನವನೀತ ಚಿತ್ರಗಳು ಪ್ರಶಸ್ತಿ ಪಡೆದುಕೊಂಡಿವೆ.

National Award: ರಾಷ್ಟ್ರ ಪ್ರಶಸ್ತಿ ಪಡೆದ ಕರುನಾಡ ಸಿನಿಮಾಗಳು; ಹೆಮ್ಮೆ ತಂದ ಡೊಳ್ಳು, ತಲೆದಂಡ, ಜೀಟಿಗೆ, ನಾದದ ನವನೀತ
ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳು
Edited By:

Updated on: Jul 22, 2022 | 6:31 PM

ಮಾಡಿದ ಕಾರ್ಯಕ್ಕೆ ರಾಷ್ಟ್ರ ಪ್ರಶಸ್ತಿಯಂತಹ ಮನ್ನಣೆ ಸಿಕ್ಕರೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಪ್ರತಿ ಬಾರಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಪ್ರಕಟ ಆದಾಗ ಆಯಾ ಭಾಷೆಗೆ ಎಷ್ಟು ಅವಾರ್ಡ್ಸ್​ ಲಭಿಸಿತು ಎಂಬುದನ್ನು ತಿಳಿಯುವ ಕೌತುಕ ಎಲ್ಲರಲ್ಲೂ ಮನೆ ಮಾಡಿರುತ್ತದೆ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ (68th National Film Awards) ಕನ್ನಡಕ್ಕೆ ಕೆಲವು ಪ್ರಶಸ್ತಿಗಳು ಬಂದಿವೆ. ವಿಶಿಷ್ಟ ಕಥಾಹಂದರ ಹೊಂದಿರುವ ‘ಡೊಳ್ಳು’ (Dollu) ಸಿನಿಮಾ, ಪರಿಸರ ಕಾಳಜಿಯ ಕಥಾವಸ್ತುವುಳ್ಳು ‘ತಲೆದಂಡ’ (Taledanda) ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಒಲಿದಿದೆ. ‘ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಸಿನಿಮಾ’ ವಿಭಾಗದಲ್ಲಿ ಗಿರೀಶ್​ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ ಡಾ. ಪಿಟಿ ವೆಂಕಟೇಶ್​ ಕುಮಾರ್​’ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ತುಳು ಭಾಷೆಯ ‘ಜೀಟಿಗೆ’ ಸಿನಿಮಾ ಕೂಡ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಈ ಎಲ್ಲ ಸಿನಿಮಾ ತಂಡಗಳಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ.

ಪವನ್​ ಒಡೆಯರ್​ ಹಾಗೂ ಅಪೇಕ್ಷಾ ಪುರೋಹಿತ್​ ನಿರ್ಮಾಣದ ‘ಡೊಳ್ಳು’ ಚಿತ್ರಕ್ಕೆ ಸಾಗರ್​ ಪುರಾಣಿಕ್​ ನಿರ್ದೇಶನ ಮಾಡಿದ್ದಾರೆ. ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಪಡೆದಿದ್ದ ಈ ಚಿತ್ರಕ್ಕೆ ಈಗ ‘ರಾಷ್ಟ್ರ ಪ್ರಶಸ್ತಿ’ಯ ಗರಿ ಸಿಕ್ಕಿದೆ. ‘ಅತ್ಯುತ್ತಮ ಆಡಿಯೋಗ್ರಫಿ’ ವಿಭಾಗದಲ್ಲೂ ಈ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.

‘ಡೊಳ್ಳು’ ಚಿತ್ರ ಈ ಹಿಂದೆ ಕೂಡ ಅನೇಕ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಗಮನ ಸೆಳೆದಿತ್ತು. ಕಾರ್ತಿಕ್​ ಮಹೇಶ್​, ನಿಧಿ ಹೆಗಡೆ, ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್​, ವಿಜಯಲಕ್ಷ್ಮೀ, ಡಾ. ಪ್ರಭುದೇವ ಡಿಎಸ್​, ವರುಣ್​ ಶ್ರೀನಿವಾಸ್​, ಚಂದ್ರಮನು, ಗಂಗಾಧರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ
68th National Film Awards: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ‘ಡೊಳ್ಳು’ ಕನ್ನಡದ ಅತ್ಯುತ್ತಮ ಚಿತ್ರ
RRR: ಆಸ್ಕರ್​ ಪ್ರಶಸ್ತಿ ಪಡೆಯುತ್ತಾ ‘ಆರ್​ಆರ್​​ಆರ್​’ ಸಿನಿಮಾ? ಜಾಗತಿಕ ಮಟ್ಟದಲ್ಲಿ ರಾಜಮೌಳಿ ಚಿತ್ರದ ಬಗ್ಗೆ ಚರ್ಚೆ
Akshi: ‘ಅಕ್ಷಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಸಂಭ್ರಮ; ಇಲ್ಲಿವೆ ಚಿತ್ರಗಳು
‘ಕಂಗನಾ ರಣಾವತ್​ ‘ತಲೈವಿ’ಗೆ ಐದು ರಾಷ್ಟ್ರ ಪ್ರಶಸ್ತಿ ಬರಲೇಬೇಕು, ಇಲ್ಲವಾದರೆ ಬೇಸರವಾಗುತ್ತದೆ’

ಸಂಚಾರಿ ವಿಜಯ್​ ನಟನೆಯ ‘ತಲೆದಂಡ’ ಸಿನಿಮಾಗೆ ‘ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ಬಂದಿದೆ. ಈ ಸಂದರ್ಭದಲ್ಲಿ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಎಂಬುದು ನೋವಿನ ಸಂಗತಿ. ಈ ಹಿಂದೆ ವಿಜಯ್ ನಟಿಸಿದ್ದ ‘ಹರಿವು’, ‘ನಾತಿಚರಾಮಿ’ ಚಿತ್ರಗಳು ಕೂಡ ಪ್ರಶಸ್ತಿ ಪಡೆದುಕೊಂಡಿದ್ದವು. ಅಂಥ ನಟನನ್ನು ಸಿನಿಪ್ರಿಯರು ಈಗ ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ‘ತಲೆದಂಡ’ ಚಿತ್ರದಲ್ಲಿ ಅವರ ಪಾತ್ರ ಸಖತ್​ ಭಿನ್ನವಾಗಿದೆ.

ಕೊವಿಡ್​ 19 ಪ್ರೇರಿತ ಮೊಟ್ಟ ಮೊದಲ ತುಳು ಚಿತ್ರ ಎಂಬ ಕಾರಣಕ್ಕೆ ‘ಜೀಟಿಗೆ’ ಸಿನಿಮಾ ಗಮನ ಸೆಳೆದಿದೆ. ಈ ಸಿನಿಮಾಗೆ ‘ಅತ್ಯುತ್ತಮ ತುಳು ಸಿನಿಮಾ’ ರಾಷ್ಟ್ರ ಪ್ರಶಸ್ತಿ ಒಲಿದಿದೆ. ‘ಜೀಟಿಗೆ’ ಚಿತ್ರಕ್ಕೆ ಸಂತೋಷ್​ ಮಾಡ ನಿರ್ದೇಶನ ಮಾಡಿದ್ದು, ಅರುಣ್​ ರೈ ನಿರ್ಮಾಣ ಮಾಡಿದ್ದಾರೆ.