ಡಾ ರಾಜ್ ಸಮಾಧಿ ಬಗ್ಗೆ ಕೊಂಕು ತೆಗೆದ ಚೇತನ್ ಅಹಿಂಸ ವಿರುದ್ಧ ದೂರು

Chetan Ahimsa: ನಟ, ಸ್ವಯಂ ಘೋಷಿತ ಹೋರಾಟಗಾರ ಚೇತನ್ ಅಹಿಂಸ ಅವರು ರಾಜ್​​ಕುಮಾರ್ ಅವರ ಸಮಾಧಿಗೆ ಸರ್ಕಾರ ಸ್ಥಳ ಕೊಟ್ಟಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಒಂದನ್ನು ಹಂಚಿಕೊಂಡರು. ಅಣ್ಣಾವ್ರ ಸಮಾಧಿಗೆ 2.50 ಎಕರೆ ಸ್ಥಳ ನೀಡಿತ್ತು ಸೂಕ್ತ ನಿರ್ಧಾರವಲ್ಲ ಎಂದು ಚೇತನ್ ಹೆಳಿದ್ದರು. ನಿನ್ನೆಯೇ ಚೇತನ್ ಅವರ ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ರಾಜ್​ಕುಮಾರ್ ಅಭಿಮಾನಿಗಳು ಚೇತನ್ ವಿರುದ್ಧ ದೂರು ಸಹ ದಾಖಲಿಸಿದ್ದಾರೆ.

ಡಾ ರಾಜ್ ಸಮಾಧಿ ಬಗ್ಗೆ ಕೊಂಕು ತೆಗೆದ ಚೇತನ್ ಅಹಿಂಸ ವಿರುದ್ಧ ದೂರು
Chetan Ahimsa

Updated on: Apr 25, 2026 | 5:23 PM

ನಿನ್ನೆ (ಏಪ್ರಿಲ್ 24) ರಾಜ್ಯದಾದ್ಯಂತ ಕಲಾಚೇತನ ಡಾ ರಾಜ್​ಕುಮಾರ್ (Dr Rajkumar) ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯ್ತು. ಡಾ ರಾಜ್​ಕುಮಾರ್ ಅವರ ಕರ್ನಾಟಕಕ್ಕೆ, ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯ್ತು. ಆದರೆ ಈ ವೇಳೆ ನಟ, ಸ್ವಯಂ ಘೋಷಿತ ಹೋರಾಟಗಾರ ಚೇತನ್ ಅಹಿಂಸ ಅವರು ರಾಜ್​​ಕುಮಾರ್ ಅವರ ಸಮಾಧಿಗೆ ಸರ್ಕಾರ ಸ್ಥಳ ಕೊಟ್ಟಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಒಂದನ್ನು ಹಂಚಿಕೊಂಡರು. ಅಣ್ಣಾವ್ರ ಸಮಾಧಿಗೆ 2.50 ಎಕರೆ ಸ್ಥಳ ನೀಡಿತ್ತು ಸೂಕ್ತ ನಿರ್ಧಾರವಲ್ಲ ಎಂದು ಚೇತನ್ ಹೆಳಿದ್ದರು. ನಿನ್ನೆಯೇ ಚೇತನ್ ಅವರ ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ರಾಜ್​ಕುಮಾರ್ ಅಭಿಮಾನಿಗಳು ಚೇತನ್ ವಿರುದ್ಧ ದೂರು ಸಹ ದಾಖಲಿಸಿದ್ದಾರೆ.

ಡಾ ರಾಜ್​ಕುಮಾರ್ ಸೇನೆ ಹೆಸರಿನ ಸಂಘಟನೆಯು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಚೇತನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ‘ಚೇತನ್‌ ಅಹಿಂಸ ಎಂಬ ವ್ಯಕ್ತಿ ಕನ್ನಡ ಚಿತ್ರರಂಗದ ವರನಟ ಡಾ ರಾಜಕುಮಾರ್‌ ಅವರ ಸ್ಮಾರಕದ ಬಗ್ಗೆ ಆತನ ಸಾಮಾಜಿಕ ಜಾಲತಾಣವಾದಲ್ಲಿ ಅವಹೇಳನಕಾರಿ ಹೇಳಿಕೆ ಬರೆದುಕೊಂಡು ಕನ್ನಡ ಚಿತ್ರಾಭಿಮಾನಿಗಳಿಗೆ ಹಾಗೂ ಡಾ ರಾಜ್‌ ಕುಮಾರ್‌ ಅವರ ಅಭಿಮಾನಿಗಳಿಗೆ ಅಪಮಾನಿಸಿದ್ದಾನೆ. ಘನ ಪೊಲೀಸ್‌ ಇಲಾಖೆ ಕೂಡಲೆ ಕ್ರಮ ಕೈಗೊಂಡು ಚೇತನ್‌ ಅಹಿಂಸ ಎಂಬ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿದ್ದೇವೆ’ ಎಂದಿದ್ದಾರೆ.

‘ಪದ್ಮಭೂಷಣ ಕರ್ನಾಟಕ ರತ್ನ ಡಾ ರಾಜಕುಮಾರ್‌ ಎಂದರೆ ಅವರೊಂದು ಬೃಹತ್‌ ಶಕ್ತಿ. ಡಾ ರಾಜ್‌ ಎಂದರೆ ಗೋಕಾಕ್‌ ಚಳವಳಿ ನೇತಾರ ಮತ್ತು ಕನ್ನಡ ನಾಡು ನುಡಿ ನೆಲ ಜಲ ಭಾಷೆಗಾಗಿ ಶ್ರಮಿಸಿದ ಗಣ್ಯಮಾನ್ಯರು ನಮ್ಮ ರಾಜಕುಮಾರ್‌. ಶೈಕ್ಷಣಿಕ ಸಂಸ್ಥೆಗಳಿಗೆ ಧಾರ್ಮಿಕ ಕ್ಷೇತ್ರಗಳಿಗೆ ಪೊಲೀಸ್‌ ಇಲಾಖೆಯ ಪರಿಹಾರ ನಿಧಿ, ನೆರೆ ಹಾವಳಿ, ಬರಪರಿಹಾರ ನಿಧಿಗಾಗಿ ಶ್ರಮಿಸಿದ ವ್ಯಕ್ತಿ ರಾಜಕುಮಾರ್‌, ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಯೋಧರ ಸೇವೆಗೆ ರಸಮಂಜರಿ ಕಾರ್ಯಕ್ರಮದ ಮುಖಾಂತರ ಸಹಾಯಧನ ಮಾಡಿದ ವ್ಯಕ್ತಿ ರಾಜಕುಮಾರ್‌, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆಸ್ಪತ್ರೆಗಳಿಗೆ ಮಿಡಿದ ಜೀವ ಡಾ.ರಾಜಕುಮಾರ್‌, ಕನ್ನಡದ ಅಸ್ಮಿತೆ ರಾಜಕುಮಾರ್‌ ಬಡತನದ ಬೇಗೆಯಲ್ಲಿ ವೃತ್ತಿ ರಂಗಭೂಮಿಗೆ ದುಡಿದ ವ್ಯಕ್ತಿ ಮುಂದೆ ಕನ್ನಡ ಚಲನಚಿತ್ರರಂಗದಲ್ಲಿ ಪೌರಾಣಿಕ ಐತಿಹಾಸಿಕ ಜನಪದ ಸಾಮಾಜಿಕ ಸಾಂಸಾರಿಕ ಭಕ್ತಿಪ್ರಧಾನ ಭಾವಪ್ರಧಾನತೆಯ ಮೂಲಕ ಅತ್ಯುನ್ನತ ಪಾತ್ರಗಳನ್ನು ನಿರ್ವಹಿಸಿದವರು ಡಾ.ರಾಜಕುಮಾರ್‌ ಇಂತಹ ಮಹಾನ್‌ ಕಲಾವಿದ ಮೇರುನಟನ ಸಾಧನೆಯನ್ನು ಗಮನಿಸಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ದೇಶ ವಿದೇಶಗಳು ಅತ್ಯಂತ ಪ್ರೀತಿಯಿಂದ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ. ಕನ್ನಡ ನಾಡಿನ ಕೋಟಿ ಕೋಟಿ ಅಭಿಮಾನಿಗಳ ಮನಸ್ಸಿಗೆ ಧಕ್ಕೆ ಉಂಟುಮಾಡಿರುವ ಚೇತನ ಎಂಬ ವ್ಯಕ್ತಿಯ ಮೇಲೆ ಕೂಡಲೆ ಕ್ರಮ ಕೈಗೊಂಡು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ಮತ್ತು ಕರ್ನಾಟಕದ ಜನತೆಯಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸುತ್ತೇವೆ’ ಎಂದಿದ್ದಾರೆ.

ಇದನ್ನೂ ಓದಿ:ಕಾಣಿಸುತ್ತಿಲ್ಲ ‘ಕೆಡಿ’ ಸಿನಿಮಾ ಟ್ರೇಲರ್; ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ವಿಘ್ನ

ಚೇತನ್ ಅಹಿಂಸ ಹೇಳಿರುವ ಮಾತಿನ ವಿರುದ್ಧ ಹಲವಾರು ಮಂದಿ ಈಗಾಗಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್​ಕುಮಾರ್ ಅವರಿಗೆ ಸರ್ಕಾರವು ಸೂಕ್ತ ಗೌರವವನ್ನೇ ನೀಡಿದೆ. ಅಲ್ಲದೆ ಸ್ಮಾರಕ ನಿರ್ಮಾಣವಾಗಿ ಮೂರು ದಶಕಗಳ ಬಳಿಕ ಈಗ ವಿನಾಕಾರಣ ಆ ಬಗ್ಗೆ ಆಕ್ಷೇಪ ಎತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಹ ಅಹಿಂಸ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಾರಾ ಗೋವಿಂದು ಸಹ ಚೇತನ್ ಅಹಿಂಸ ವಿರುದ್ಧ ಗುಡುಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us