‘ಭೈರತಿ ರಣಗಲ್’ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಇದೆ. ಇಷ್ಟು ದಿನ ಸಿನಿಮಾದ ಪೋಸ್ಟರ್ಗಳು ಗಮನ ಸೆಳೆದಿದ್ದವು. ಈಗ ಇದೇ ಮೊದಲ ಬಾರಿಗೆ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಶಿವರಾಜ್ಕುಮಾರ್ ಅವರಿಗೆ ಇಂದು (ಜುಲೈ 12) ಜನ್ಮದಿನ. ಇದರ ಅಂಗವಾಗಿ ಟೀಸರ್ ಬಿಡುಗಡೆ ಆಗಿದೆ. ಈ ಟೀಸರ್ ನೋಡಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದೆ. ಶಿವಣ್ಣ ಅವರು ಹೇಳುವ ಒಂದೇ ಒಂದು ಡೈಲಾಗ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶಿವಣ್ಣ ಅವರ ಬರ್ತ್ಡೇ ಕ್ರೇಜ್ನ ಈ ಟೀಸರ್ ಹೆಚ್ಚಿಸಿದೆ.
ನರ್ತನ್ ಹಾಗೂ ಶಿವರಾಜ್ಕುಮಾರ್ ಅವರು ‘ಮಫ್ತಿ’ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದರು. ಈಗ ಇವರು ಮತ್ತೆ ಒಂದಾಗಿರೋದು ಈ ಚಿತ್ರದ ಪ್ರೀಕ್ವೆಲ್ಗಾಗಿ. ‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣ ಅವರು ಭೈರತಿ ರಣಗಲ್ ಹೆಸರಿನ ಪಾತ್ರ ಮಾಡಿದ್ದರು. ಇದೇ ಪಾತ್ರವನ್ನು ಸಿನಿಮಾ ರೂಪದಲ್ಲಿ ತರಲಾಗುತ್ತಿದೆ. ಈಗ ರಿಲೀಸ್ ಆಗಿರೋ ಟೀಸರ್ ಭರ್ಜರಿ ಗಮನ ಸೆಳೆದಿದೆ.
ಭೈರತಿ ರಣಗಲ್ ಊರು ಹೇಗಿದೆ ಎನ್ನುವುದನ್ನು ತೋರಿಸುವ ಪ್ರಯತ್ನ ಟೀಸರ್ನಲ್ಲಿ ಆಗಿದೆ. ಈ ಚಿತ್ರದಲ್ಲಿ ರೌಡಿಸಂ ಕಥೆ ಇರಲಿದೆ. ಈ ಟೀಸರ್ನಲ್ಲಿ ಶಿವರಾಜ್ಕುಮಾರ್ ಹೇಳುವ, ‘ನಾನು ತಾಳ್ಮೆ ಕಳೆದುಕೊಂಡಾಗೆಲ್ಲ ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’ ಎಂಬ ಡೈಲಾಗ್ ಹೈಲೈಟ್ ಆಗಿದೆ.
#BhairathiRanagal First Verdict Loading in… https://t.co/XRrMABl9AM @NimmaShivanna #Narthan @rukminitweets @RahulBose1 @RaviBasrur @aanandaaudio @The_BigLittle #GeethaPictures
— Geetha Pictures (@GeethaPictures) July 12, 2024
ಈ ಮೊದಲು ‘ಭೈರತಿ ರಣಗಲ್’ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ ಎನ್ನುವ ಮಾಹಿತಿ ನೀಡಲಾಗಿತ್ತು. ಆದರೆ, ಈಗ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಸೆಪ್ಟೆಂಬರ್ನಲ್ಲಿ ಚಿತ್ರ ತೆರೆಗೆ ಬರಲಿದೆ ಎನ್ನುವ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಮಫ್ತಿಗಿಂತಲೂ ಭೈರತಿ ರಣಗಲ್ ಹೇಗೆ ಭಿನ್ನ? ಶಿವಣ್ಣನ ಲುಕ್ ಹೇಗಿರುತ್ತೆ? ನಿರ್ದೇಶಕ ನರ್ತನ್ ಉತ್ತರ
ಗೀತಾ ಪಿಕ್ಚರ್ಸ್ ಮೂಲಕ ಗೀತಾ ಶಿವರಾಜ್ಕುಮಾರ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನರ್ತನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ರಿಲೀಸ್ಗೆ ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.