ಮಜಾ ಟಾಕೀಸ್ ತಂಡವನ್ನು ಅಪರ್ಣಾ ಸೇರಿಕೊಂಡಿದ್ದು ಹೇಗೆ? ಸೃಜನ್ ರಿವೀಲ್ ಮಾಡಿದರು ಅಸಲಿ ಕಥೆ
ಅಪರ್ಣಾ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಆಗಮಿಸಿದ ಸೃಜನ್ ಅವರು ಅಗಲಿದ ಅಪರ್ಣಾಗೆ ನಮನ ಸಲ್ಲಿಸಿದ್ದಾರೆ. ಆ ಬಳಿಕ ಮಾತನಾಡಿದ ಅಪರ್ಣಾ, ‘ಮಜಾ ಟಾಕೀಸ್ ನೋಡಿ ನಿಮಗೆ ಹೊಸ ಹುರುಪು ಬರ್ತಿದೆ ಎಂದು ವೈದ್ಯರು ಅಪರ್ಣಾಗೆ ಹೇಳಿದ್ದರಂತೆ.
ಸೃಜನ್ ಲೋಕೇಶ್ ಅವರು ನಡೆಸಿಕೊಡುತ್ತಿದ್ದ ‘ಮಜಾ ಟಾಕೀಸ್’ನಲ್ಲಿ ಅಪರ್ಣಾ ಅವರು ನಟಿಸಿದ್ದರು. ಅವರು ವರಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಈ ಪಾತ್ರ ಹುಟ್ಟಿಕೊಂಡಿದ್ದು ಹೇಗೆ? ಈ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆಗೆ ಸೃಜನ್ ಲೋಕೇಶ್ ಅವರು ಮಾತನಾಡಿದ್ದಾರೆ. ಅಪರ್ಣಾ ಅವರು ಕ್ಯಾನ್ಸರ್ನಿಂದ ನಿಧನ ಹೊಂದಿದ್ದಾರೆ.
ಅಪರ್ಣಾ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಆಗಮಿಸಿದ ಸೃಜನ್ ಅವರು ಅಗಲಿದ ಅಪರ್ಣಾಗೆ ನಮನ ಸಲ್ಲಿಸಿದ್ದಾರೆ. ಆ ಬಳಿಕ ಮಾತನಾಡಿದ ಅಪರ್ಣಾ, ‘ಮಜಾ ಟಾಕೀಸ್ ನೋಡಿ ನಿಮಗೆ ಹೊಸ ಹುರುಪು ಬರ್ತಿದೆ ಎಂದು ವೈದ್ಯರು ಅಪರ್ಣಾಗೆ ಹೇಳಿದ್ದರಂತೆ. ನನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದು ಅವರು ನನಗೆ ಹೇಳಿದ್ದರು. ಅವರು ದೊಡ್ಡ ಮಟ್ಟದ ಹೆಸರು ಮಾಡಿದ್ದರು. ಆದರೂ ತಗ್ಗಿ-ಬಗ್ಗಿ ನಡೆಯುತ್ತಿದ್ದರು. ಎರಡು ವರ್ಷಗಳ ಕಾಲ ಕ್ಯಾನ್ಸರ್ನಿಂದ ಬಳಲಿದ್ದರು’ ಎಂದು ಬೇಸರದ ನುಡಿಗಳನ್ನು ಆಡಿದ್ದಾರೆ ಸೃಜನ್.
‘ನಾನು ಅಪರ್ಣಾ ಪಾತ್ರಕ್ಕೆ ವರಲಕ್ಷ್ಮಿ ಅಂತ ಹೆಸರು ಇಟ್ಟಿದ್ದೆ. ಅವರೇ ಒನ್ ಆ್ಯಂಡ್ ಓನ್ಲಿ ವರಲಕ್ಷ್ಮಿ ಅಂತ ಹೆಸರು ಇಟ್ಟುಕೊಂಡರು. ಮಜಾ ಟಾಕೀಸ್ ಒಂದು ನೆಪ ಮಾತ್ರ. ಅವರಲ್ಲಿರೋ ಪ್ರತಿಭೆಯನ್ನು ಇದರಲ್ಲಿ ತೋರಿಸಿದರು. ಅವರು ಶೂಟಿಂಗ್ ವೇಳೆ ಯಾವಾಗಲೂ ರೀಟೇಕ್ ತೆಗೆದುಕೊಂಡಿಲ್ಲ ಎಂದಿದ್ದಾರೆ ಸೃಜನ್. ಈ ಮೂಲಕ ಅಪರ್ಣಾ ನಟನೆಯನ್ನು ಬಾಯ್ತುಂಬ ಹೊಗಳಿದ್ದಾರೆ.
ಇದನ್ನೂ ಓದಿ: ಅಪರ್ಣಾಗೆ ಮದುವೆ ಮಾಡಬೇಡಿ ಎಂದು ಕೋರಿದ್ದ ನಿರ್ದೇಶಕ; ಚಿತ್ರರಂಗಕ್ಕೆ ಬರಲು ಕಾರಣವಾಗಿದ್ದು ಇದೇ ವ್ಯಕ್ತಿ
‘ಅಪರ್ಣಾ ಅವರನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದ್ದು ನನ್ನ ಪತ್ನಿ. ಮಜಾ ಟಾಕೀಸ್ ಹಾಸ್ಯ ಶೋ. ಅವರು ಎಲ್ಲರ ಎದುರು ಸದಾ ಗಂಭೀರವಾಗಿ ಇರುತ್ತಿದ್ದರು. ಹೀಗಾಗಿ, ತಮಗೆ ಈ ಶೋ ಸರಿ ಹೊಂದಲ್ಲ ಎಂದುಕೊಂಡಿದ್ದರು. ಕೊನೆಗೆ ನನ್ನ ಪತ್ನಿ ಅವರೇ ಈ ಪಾತ್ರ ಮಾಡಿಸಲು ಒಪ್ಪಿಸಿದರು. ಅಪರ್ಣಾ ನಮ್ಮ ಮನಸ್ಸಲ್ಲಿ ಹಾಗೆಯೇ ಇರುತ್ತಾರೆ. ಅವರ ನೆನಪು ಶಾಶ್ವತವಾಗಿ ಇರುತ್ತದೆ’ ಎಂದಿದ್ದಾರೆ ಸೃಜನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.