
ಜೂನಿಯರ್ ಎನ್ಟಿಆರ್ (JR NTR) ಹಾಗೂ ಪ್ರಶಾಂತ್ ನೀಲ್ ಸಿನಿಮಾ ಘೋಷಣೆ ಆಗಿ ಸಾಕಷ್ಟು ಸಮಯ ಕಳೆದಿದೆ. ಆದರೆ, ಸಿನಿಮಾದ ಕೆಲಸಗಳು ಇನ್ನೂ ಅಧಿಕೃತವಾಗಿ ಆರಂಭ ಆಗಿರಲಿಲ್ಲ. ಈಗ ಕೆಲ ಹಂತದ ಶೂಟಿಂಗ್ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಸಿನಿಮಾ ಬಗ್ಗೆ ಶಾಕಿಂಗ್ ವಿಚಾರ ಒಂದು ಹೊರ ಬಿದ್ದಿದೆ. ಶೂಟ್ನ ಫೂಟೇಜ್ ನೋಡಿರೋ ಜೂನಿಯರ್ ಎನ್ಟಿಆರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವದಂತಿಗಳು ಹಬ್ಬಿವೆ.
ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಾಧಾರಣ ಎನಿಸಿಕೊಂಡಿತು. ಆ ಬಳಿಕ ಬಂದ ‘ವಾರ್ 2’ ಸಿನಿಮಾ ಡಿಸಾಸ್ಟರ್ ಆಯಿತು. ಈ ಚಿತ್ರದ ಮೂಲಕ ಎನ್ಟಿಆರ್ ಬಾಲಿವುಡ್ ಕದ ತಟ್ಟಿ ಬಂದಿದ್ದರು. ಆದರೆ, ವರ್ಷಾನುಗಟ್ಟಲೆ ಹಾಕಿದ ಶ್ರಮ ವ್ಯರ್ಥವಾಯಿತು. ಈಗ ಜೂ. ಎನ್ಟಿಆರ್ ಅವರು ತಮ್ಮ ಹೊಸ ಸಿನಿಮಾ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ.
ಪ್ರಶಾಂತ್ ನೀಲ್ ಅವರು ಸಿನಿಮಾ ಕೆಲಸಗಳಲ್ಲಿ ತಮ್ಮದೇ ಆದ ಸ್ಟೈಲ್ ಹೊಂದಿದ್ದಾರೆ. ಅದೇ ಸ್ಟೈಲ್ನಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆದರೆ, ಸಿನಿಮಾದ ಕೆಲಸ ನೋಡಿದ ಜೂನಿಯರ್ ಎನ್ಟಿಆರ್ ಅವರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. ಈ ಕ್ಲ್ಯಾಶ್ ಯಾವ ಹಂತಕ್ಕೆ ಹೋಗುತ್ತದೆ ಎಂಬ ಚರ್ಚೆಗಳೂ ನಡೆದಿವೆ.
BREAKING: #NTRNeel officially SCRAPPED
Insiders say clash between #JrNTR & #PrashanthNeel turned into a full-blown fallout ☹️
After #War2 DISASTER, #YRFSpyFilm, #NTRNelson & #Muruga shelved, kicked out from #Rajamouli biopic — @tarak9999’s lineup is ZERO, except forced #Devara2 pic.twitter.com/edwj3TJOGf
— OMaramanishi♂️_2 (@UrsMaheshBabu_1) October 20, 2025
Don’t Believe Rumours Tigers 🔥
Kavali Ani Negative Spread Chestunaru Already Bayam Start Aindhi Other Fandom’s ki 👍🏻
Team Very Confident 🔥🌋🐉#NTRNeel Beyond Your Imagination ❤️🔥 🔥 @tarak9999 🐉🔥🌋❤️🔥😭 pic.twitter.com/qeFqpu3eqG
— NANI Tweets 🐉 (@Nani_tweets9999) October 20, 2025
ಇನ್ನೂ ಕೆಲವು ಫ್ಯಾನ್ಸ್ಗಳು ಈ ಬಗ್ಗೆ ಸ್ಪಷ್ಟನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಸುಳ್ಳು, ಇದನ್ನು ನಂಬ ಬೇಡಿ ಎಂದು ಕೋರಿಕೊಂಡಿದ್ದಾರೆ. ಈ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ. ಮೈತ್ರಿ ಮೂವೀ ಮೇಕರ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಜೂ. ಎನ್ಟಿಆರ್ ಅತಿಥಿ
2018ರಲ್ಲಿ ‘ಕೆಜಿಎಫ್’ ಸಿನಿಮಾ ರಿಲೀಸ್ ಆಯಿತು. 2019ರಲ್ಲಿ ನೀಲ್ ಹಾಗೂ ಎನ್ಟಿಆರ್ ಭೇಟಿ ಮಾಡಿ, ಕಥೆ ಹೇಳಿದರು. ಅಂದಿನಿಂದಲೂ ಈ ಸಿನಿಮಾ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂಬ ಟೈಟಲ್ ಇಡಲಾಗಿದೆ ಎನ್ನಲಾಗುತ್ತಿದೆ. ಏಪ್ರಿಲ್ನಲ್ಲಿ ಸಿನಿಮಾದ ಶೂಟ್ ಆರಂಭ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:04 am, Tue, 21 October 25