ಮೈಸೂರು: ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚಿತ್ರಪ್ರದರ್ಶನವನ್ನು ನಿಲ್ಲಿಸಲಾಗಿದೆ. ಈ ಕುರಿತು ಮೈಸೂರಿನಲ್ಲಿ ಕರ್ನಾಟಕದ ಚಲನಚಿತ್ರ ಪ್ರದರ್ಶಕರ ಮಹಾ ಮಂಡಲ್ ಉಪಾಧ್ಯಕ್ಷ ರಾಜಾರಾಮ್ ಹೇಳಿಕೆ ನೀಡಿದ್ದಾರೆ. ಈಗಾಗಲೇ ಪ್ರಾರಂಭವಾಗಿರುವ ಚಿತ್ರ ಪ್ರದರ್ಶನ ಮುಂದುವರೆಯುತ್ತಿವೆ. 2.30 ಶೋ ಹಾಗೂ 4.30ಯ ನಂತರದ ಶೋಗಳು ಕ್ಯಾನ್ಸಲ್ ಆಗಿವೆ. ಚಿತ್ರರಂಗ ಮೊದಲು ಈ ಶಾಕ್ ನಿಂದ ಹೊರ ಬರಬೇಕು. ಮುಂದೆ ಯಾವಾಗ ಚಿತ್ರ ಪ್ರದರ್ಶನ ಮಾಡಬೇಕು ನೋಡೋಣ. ಪುನೀತ್ ಜೊತೆ ನಾನು ಚಾಮುಂಡಿ ಬೆಟ್ಟ ಹತ್ತಿ ಇಳಿಯುತ್ತಿದ್ದೆ. ಅವರು ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದರು. ಅವರಿಗೆ ಈ ರೀತಿ ಆಗಿರೊದು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಚಿತ್ರನಟ ಪುನೀತ ರಾಜಕುಮಾರ ನಿಧನ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲೆಯಾದ್ಯಂತ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ವಿಜಯಪುರ ನಗರದ 5 ಹಾಗೂ ತಾಲೂಕಾ ಕೇಂದ್ರಗಳಲ್ಲಿರೋ 9 ಚಿತ್ರಮಂದಿರಗಳ ಚಿತ್ರ ಪ್ರದರ್ಶನ ರದ್ದು ಮಾಡಲಾಗಿದೆ ಎಂದು ಜಿಲ್ಲಾ ಚಿತ್ರಮಂದಿರ ಮಾಲೀಕರ ಸಂಘದ ಅಧ್ಯಕ್ಷ ಶ್ರವಣಕುಮಾರ ಮಹೀಂದ್ರಕರ ಟಿವಿ9 ಗೆ ಮಾಹಿತಿ ನೀಡಿದ್ದಾರೆ. ಪುನೀತ್ ಅಗಲಿಕೆಗೆ ಚಿತ್ರಮಂದಿರ ಮಾಲೀಕರು ಕಂಬನಿ ಮಿಡಿದಿದ್ದು, ಪ್ರದರ್ಶನ ರದ್ದು ಮಾಡೋ ಮೂಲಕ ಶ್ರದ್ದಾಂಜಲಿ ಅರ್ಪಣೆ ಮಾಡಿದ್ದಾರೆ. ಚಾಮರಾಜನಗರ, ಚಿಕ್ಕಬಳ್ಳಾಪುರದಲ್ಲೂ ಸಿನಿಮಾ ಪ್ರದರ್ಶನ ಕ್ಯಾನ್ಸಲ್ ಆಗಿದೆ.
ಇದನ್ನೂ ಓದಿ:
Puneeth Rajkumar: ‘ದೇವರು ಇವರೆಲ್ಲರಿಗೂ ಒಳ್ಳೆಯದು ಮಾಡಲಿ’; ಇದು ವೇದಿಕೆ ಮೇಲೆ ಪುನೀತ್ ಕೊನೆಯ ಮಾತು
Puneeth Rajkumar Obituary: ಹೃದಯ ಬಡಿತ ನಿಲ್ಲಿಸುವುದಕ್ಕೂ ಮುನ್ನ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ಪುನೀತ್
Published On - 4:07 pm, Fri, 29 October 21