ನಿಖಿಲ್​ ಕುಮಾರ್​ ಸಿನಿಮಾದಲ್ಲಿ ದುನಿಯಾ ವಿಜಯ್​ ವಿಲನ್​? ಹಬ್ಬಿದೆ ಗುಸು ಗುಸು

|

Updated on: Oct 09, 2023 | 10:20 PM

ನಿಖಿಲ್​ ಕುಮಾರ್​ ನಟನೆಯ ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬರಲಿದೆ. ‘ಲೈಕಾ ಪ್ರೊಡಕ್ಷನ್ಸ್​’ ಬಂಡವಾಳ ಹೂಡುತ್ತಿದೆ. ದುನಿಯಾ ವಿಜಯ್​ ಜೊತೆ ನಿರ್ಮಾಪಕರು ಮಾತುಕತೆ ನಡೆಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿದೆ. ಆದರೆ ನಿರ್ಮಾಣ ಸಂಸ್ಥೆಯಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳುವುದು ಬಾಕಿ ಇದೆ.

ನಿಖಿಲ್​ ಕುಮಾರ್​ ಸಿನಿಮಾದಲ್ಲಿ ದುನಿಯಾ ವಿಜಯ್​ ವಿಲನ್​? ಹಬ್ಬಿದೆ ಗುಸು ಗುಸು
ನಿಖಿಲ್​ ಕುಮಾರ್​, ದುನಿಯಾ ವಿಜಯ್​
Follow us on

ನಟ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಅವರು ರಾಜಕೀಯದ ಜೊತೆ ಸಿನಿಮಾದ ಕೆಲಸಗಳಲ್ಲೂ ಆ್ಯಕ್ಟೀವ್​ ಆಗಿದ್ದಾರೆ. ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾದ ‘ಲೈಕಾ ಪ್ರೊಡಕ್ಷನ್ಸ್​’ (Lyca Productions) ಜೊತೆ ಅವರು ಕೈ ಜೋಡಿಸಿರುವುದರಿಂದ ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಚಿತ್ರೀಕರಣ ಪ್ರಗತಿಯಲ್ಲಿದ್ದು, ಪಾತ್ರವರ್ಗದ ಬಗ್ಗೆ ಅಪ್​ಡೇಟ್​ ಸಿಗುತ್ತಿದೆ. ಅಚ್ಚರಿ ಏನೆಂದರೆ, ಕನ್ನಡ ಚಿತ್ರರಂಗದ ಸ್ಟಾರ್​ ನಟ ದುನಿಯಾ ವಿಜಯ್​ ಅವರು ಈ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ನಿಖಿಲ್​ ಕುಮಾರ್​ (Nikhil Kumar) ನಾಯಕನಾಗಿರುವ ಈ ಸಿನಿಮಾದಲ್ಲಿ ದುನಿಯಾ ವಿಜಯ್​ ಅವರು ವಿಲನ್​ ಪಾತ್ರ ಮಾಡುತ್ತಾರೆ ಎಂದು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಗಾಸಿಪ್​ ಹಬ್ಬಿದೆ.

ದುನಿಯಾ ವಿಜಯ್​ ಅವರಿಗೆ ವಿಲನ್​ ಪಾತ್ರಗಳು ಹೊಸದೇನೂ ಅಲ್ಲ. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಅವರು ಖಳನಟನಾಗಿ​ ಅಬ್ಬರಿಸಿದ್ದರು. ಅಷ್ಟೇ ಅಲ್ಲದೇ, ಹೀರೋ ಆಗಿ ಮಿಂಚಿದ ನಂತರವೂ ಅವರು ಖಳನಾಗಿ ಕಾಣಿಸಿಕೊಂಡಿದ್ದು ‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ. ಈ ವರ್ಷ ಜನವರಿಯಲ್ಲಿ ರಿಲೀಸ್​ ಆದ ಆ ಸಿನಿಮಾದಲ್ಲಿನ ದುನಿಯಾ ವಿಜಯ್​ ಅವರ ನಟನೆಗೆ ಟಾಲಿವುಡ್​ ಮಂದಿ ಮೆಚ್ಚುಗೆ ಸೂಚಿಸಿದರು. ಈಗ ಮತ್ತೆ ಅವರು ವಿಲನ್​ ಆಗುತ್ತಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಯುಕ್ತಿ ತರೇಜಾ, ಕೋಮಲ್​ ಕುಮಾರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಜನೀಶ್ ಬಿ. ಲೋಕನಾಥ್​ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ: ನಿಖಿಲ್​ ಕುಮಾರ್​ ಸಿನಿಮಾದ ಸೆಟ್​ಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಫೋಟೋ ವೈರಲ್​

ದುನಿಯಾ ವಿಜಯ್​ ಜೊತೆ ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆ ಮಾತುಕತೆ ನಡೆಸುತ್ತಿದೆ ಎಂದು ಸುದ್ದಿ ಹಬ್ಬಿದೆ. ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬರಲಿದೆ. ‘ವೀರ ಸಿಂಹ ರೆಡ್ಡಿ’ ಸಿನಿಮಾ ಮೂಲಕ ಟಾಲಿವುಡ್​ ಪ್ರೇಕ್ಷಕರಿಗೆ ದುನಿಯಾ ವಿಜಯ್​ ಇಷ್ಟ ಆಗಿದ್ದಾರೆ. ಹಾಗಾಗಿ ಅವರನ್ನು ಮತ್ತೊಮ್ಮೆ ಖಡಕ್​ ಪಾತ್ರದಲ್ಲಿ ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ನಟಿಸುವ ಬಗ್ಗೆ ನಿರ್ಮಾಣ ಸಂಸ್ಥೆಯ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ.

ಇದನ್ನೂ ಓದಿ: ‘ರಾಜಕಾರಣದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿದ್ದೇನೆ ಎಂಬ ಭಾವನೆ ಯಾರಿಗೂ ಬೇಡ’: ನಿಖಿಲ್​ ಕುಮಾರ್​ ಸ್ಪಷ್ಟನೆ

ನಟನೆ ಮಾತ್ರವಲ್ಲದೇ ನಿರ್ದೇಶನದಲ್ಲೂ ದುನಿಯಾ ವಿಜಯ್​ ಅವರು ಯಶಸ್ಸು ಕಂಡಿದ್ದಾರೆ. ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ಸಲಗ’ ಸೂಪರ್​ ಹಿಟ್​ ಆಯಿತು. ಈಗ ಅವರು ‘ಭೀಮ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುವುದರ ಜೊತೆಗೆ ಮುಖ್ಯ ಪಾತ್ರದಲ್ಲೂ ನಟಿಸಿದ್ದು, ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾದ ಹಾಡು ಬಿಡುಗಡೆ ಆಗಿ ಧೂಳೆಬ್ಬಿಸುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.