Dwarakish Vishnu Friendship: ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಫ್ರೆಂಡ್​ಶಿಪ್ ಮುರಿದುಬಿದ್ದಿದ್ದೇಕೆ? ಇಲ್ಲಿದೆ ಹಳೆಯ ಘಟನೆ  

ದ್ವಾರಕೀಶ್ ಮಾಡಿದ 50 ಚಿತ್ರಗಳಲ್ಲಿ 19 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾ ಮಾಡಲು ವಿಷ್ಣುವರ್ಧನ್ ಡೇಟ್ಸ್​​​ಗಾಗಿ ನಾಲ್ಕು ವರ್ಷ ಕಾದಿದ್ದರು ದ್ವಾರಕೀಶ್. ರಕ್ತ ಸಂಬಂಧಕ್ಕಿಂತ ದೊಡ್ಡದಾಗಿತ್ತು ಇವರ ಸಂಬಂಧ.

Dwarakish Vishnu Friendship: ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಫ್ರೆಂಡ್​ಶಿಪ್ ಮುರಿದುಬಿದ್ದಿದ್ದೇಕೆ? ಇಲ್ಲಿದೆ ಹಳೆಯ ಘಟನೆ  
ದ್ವಾರಕೀಶ್​-ವಿಷ್ಣು (ಕೃಪೆ: ಶ್ರೀ ಗಣೇಶ್ ವಿಡಿಯೋ)
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 16, 2024 | 1:53 PM

ದ್ವಾರಕೀಶ್ (Dwarakish) ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಒಪ್ಪಿಕೊಳ್ಳೋದು ಕಷ್ಟ ಆಗುತ್ತಿದೆ. ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದರು. ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ. ರಾಜ್​ಕುಮಾರ್, ವಿಷ್ಣುವರ್ಧನ್ ಸೇರಿ ಹಲವು ಕಲಾವಿದರ ಜೊತೆ ದ್ವಾರಕೀಶ್ ನಟಿಸಿ ಫೇಮಸ್ ಆದರು. ವಿಷ್ಣುವರ್ಧನ್ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ನಂತರ ಇಬ್ಬರೂ ಬೇರೆ ಆಗುವಂಥಾಯಿತು. ಆ ಬಗ್ಗೆ ಇಲ್ಲಿದೆ ಮಾಹಿತಿ.

1975ರಲ್ಲಿ ರಿಲೀಸ್ ಆದ ‘ಕಳ್ಳ ಕುಳ್ಳ’ ಸಿನಿಮಾದಲ್ಲಿ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಒಟ್ಟಾಗಿ ನಟಿಸಿದರು. ಇವರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಯಲು ಈ ಸಿನಿಮಾ ಸಹಕಾರಿ ಆಯಿತು. 1977ರ ‘ಕಿಟ್ಟು ಪುಟ್ಟು’, ‘ಸಿಂಗಾಪುರನಲ್ಲಿ ರಾಜ ಕುಳ್ಳ’, ‘ಗುರು ಶಿಷ್ಯರು’, ‘ಪ್ರಚಂಡ ಕುಳ್ಳ’, ‘ಆಪ್ತಮಿತ್ರರು’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ಈ ಪೈಕಿ ಕೆಲವು ಸಿನಿಮಾಗಳನ್ನು ದ್ವಾರಕೀಶ್ ಅವರೇ ನಿರ್ಮಾಣ ಮಾಡಿದ್ದರು.

ದ್ವಾರಕೀಶ್ ಮಾಡಿದ 50 ಚಿತ್ರಗಳಲ್ಲಿ 19 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾ ಮಾಡಲು ವಿಷ್ಣುವರ್ಧನ್ ಡೇಟ್ಸ್​​​ಗಾಗಿ ನಾಲ್ಕು ವರ್ಷ ಕಾದಿದ್ದರು ದ್ವಾರಕೀಶ್. ರಕ್ತ ಸಂಬಂಧಕ್ಕಿಂತ ದೊಡ್ಡದಾಗಿತ್ತು ಇವರ ಸಂಬಂಧ. ವಿಷ್ಣುವರ್ಧನ್ ನಿಧನದ ನಂತರ ದ್ವಾರಕೀಶ್ ಸಾಕಷ್ಟು ದುಃಖಕ್ಕೆ ಒಳಗಾಗಿದ್ದರು. ಅಸಲಿಗೆ ಇವರ ಮಧ್ಯೆ ಆಗಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ವೆಂಕಟೇಶ್ ನಾರಾಯಣಸ್ವಾಮಿ ಅವರು ಈ ಬಗ್ಗೆ ಫೇಸ್​ಬುಕ್​ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. ‘ನೀ ತಂದ ಕಾಣಿಕೆ’ ಸಿನಿಮಾ ಬಿಡುಗಡೆ ಆಗಿ ಸೋತಿತ್ತು. ‘ದ್ವಾರಕೀಶ್ ನಂಬಿಕೆಗೆ ಅರ್ಹನಲ್ಲ’ ಎಂದು ವಿಷ್ಣುವರ್ಧನ್ ಹೇಳಿರುವುದಾಗಿ ಪತ್ರಿಕೆಯಲ್ಲಿ ವರದಿ ಆಗಿತ್ತು. ಇದರಿಂದ ದ್ವಾರಕೀಶ್ ಸಿಟ್ಟಾದರು. ಆಗ ಅವರು ದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರಂತೆ.

ಪ್ರಕಟಣೆಯಲ್ಲಿ ಏನಿತ್ತು?

‘ಮೊದಮೊದಲು, ಅಂಕಲ್ ಅನ್ನುತ್ತಿದ್ದಮ ನಂತರ ಸರ್ ಎನ್ನುತ್ತಿದ್ದ, ಆ ನಂತರ ಏನೋ ದ್ವಾರ್ಕಿ… ಎಂದು ನನ್ನ ಹೆಗಲ ಮೇಲೆಯೇ ಕೈ ಹಾಕುವಷ್ಟು ಸಲುಗೆ ಬೆಳಸಿಕೊಂಡ. ನಾನೂ ಕೂಡಾ, ಹುಡುಗ ಬೆಳ್ಳಗೆ ಹ್ಯಾಂಡ್ಸಮ್ ಆಗಿದ್ದಾನೆ, ನನ್ನ ಚಿತ್ರಗಳಿಗೆ ಸೂಕ್ತವಾದ ನಾಯಕನಾಗುತ್ತಾನೆ ಎಂದು ಎಲ್ಲವನ್ನೂ ಸಹಿಸಿಕೊಂಡೆ. ಆದರೆ ಆತನ ನಕರಾಗಳು ದಿನೇ ದಿನೇ ನನ್ನ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡುತ್ತಿತ್ತು.. ರಜನಿಕಾಂತ್ ನಂತೆ ನನಗೂ ಒಂದು ತಮಿಳು ಚಿತ್ರವನ್ನು ಮಾಡು ಎಂದು ಪೀಡಿಸುತ್ತಾನೆ.  ರಜನೀಕಾಂತ್ ಎಲ್ಲಿ ಇವನೆಲ್ಲಿ. ಇವನಿಗಾಗಿ ನಾನು ಎಷ್ಟೆಲ್ಲಾ ಮಾಡಿದ್ದೇನೆ. ಸ್ವಲ್ಪವೂ ಕೃತಜ್ಞತೆ ಇಲ್ಲ’ ಎಂದು ದ್ವಾರಕೀಶ್ ಹೇಳಿದ್ದರು.

‘ನಾನು ರಜನೀಕಾಂತ್ ಶ್ರೀದೇವಿ ಯಂತಹ ಸ್ಟಾರ್ ಕಲಾವಿದರನ್ನು ಹಾಕಿಕೊಂಡು ಹಿಂದಿ, ತಮಿಳು ಸಿನಿಮಾಗಳನ್ನು ಮಾಡಿದ ಪ್ರೊಡ್ಯೂಸರ್. ಇವನಿಲ್ಲದೆಯೂ ನಾನು ಸಿನಿಮಾ ಮಾಡಿ ಗೆಲ್ಲ ಬಲ್ಲೆ. ಆದರೆ ನನ್ನಂತಹ ನಿರ್ಮಾಪಕನನ್ನು ಎದುರು ಹಾಕಿಕೊಂಡು ಇವನು ಇಂಡಸ್ಟ್ರಿಯಲ್ಲಿ ಹೇಗೆ ನಿಲ್ಲುತ್ತಾನೋ ನೋಡೋಣ. ಅವನು ನನಗೆ ಮಾಡಿದ ದ್ರೋಹವನ್ನೇ ಕಥಾವಸ್ತುವನ್ನಾಗಿ ಇಟ್ಟುಕೊಂಡು ಸ್ಕ್ರಿಪ್ಟ್ ಮಾಡಿಸುತ್ತಿದ್ದೇನೆ ಸ್ಕ್ರಿಪ್ಟ್ ರೈಟರ್ ಕ್ಲೈಮ್ಯಾಕ್ಸ್ ನಲ್ಲಿ ಬೆನ್ನಿಗೆ ಚೂರಿ ಹಾಕುವಂತೆ ಮಾಡಿದ್ದಾರೆ. ಇಲ್ಲ, ನೇರವಾಗಿ ಎದೆಗೇ ಚುಚ್ಚುವಂತೆ ಬದಲಾಯಿಸುತ್ತಿದ್ದೇನೆ. ಚಿತ್ರಕಥೆ ಫೈನಲ್ ಆದ ನಂತರ ಕಲಾವಿದರು ಮತ್ತು ತಾಂತ್ರಿಕ ವರ್ಗದ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ’ ಎಂದು ದ್ವಾರಕೀಶ್ ಹೇಳಿದ್ದರು. ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ವಾಶ್​ರೂಂನಲ್ಲಿ ದ್ವಾರಕೀಶ್​ಗೆ ಡೇಟ್ಸ್ ಕೊಟ್ಟಿದ್ದ ರಜನಿಕಾಂತ್; ಇಲ್ಲಿದೆ ಮಜವಾದ ಪ್ರಸಂಗ

ವಿಷ್ಣುವರ್ಧನ್ ಇಲ್ಲದೆ ಬೇರೆ ಬೇರೆ ಹೀರೋಗಳ ಜೊತೆ ದ್ವಾರಕೀಶ್ ಅವರು ನಿರ್ಮಿಸಿ/ನಿರ್ದೇಶಿಸಿದ (ಶೃತಿ ಸಿನಿಮಾ ಹೊರತುಪಡಿಸಿ) ಸಿನಿಮಾ ಒಂದರ ಹಿಂದೊಂದರಂತೆ ಸತತವಾಗಿ 18 ಫ್ಲಾಪ್ ಆಯಿತು. ಅವರು ವೃತ್ತಿಬದುಕಿನಲ್ಲಿ ಸೋತು ಸುಣ್ಣವಾಗುವಂತೆ ಮಾಡಿತ್ತು. ‘ಆಪ್ತಮಿತ್ರ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿ ಸಿನಿಮಾ ಸೂಪರ್ ಹಿಟ್ ಆಯಿತು. ಆದರೂ ಅವರ ಗೆಳೆತನ ಸಂಪೂರ್ಣವಾಗಿ ಸರಿ ಆಗಿರಲಿಲ್ಲ ಎನ್ನಲಾಗಿದೆ.

ಸುದೀಪ್ ನಟನೆಯ ‘ವಿಷ್ಣುವರ್ಧನ’ ಸಿನಿಮಾದಲ್ಲಿ ದ್ವಾರಕೀಶ್ ನಟಿಸಿದ್ದರು. ವಿಷ್ಣು ಅವರ ಗೆಳೆಯನ ಪಾತ್ರದಲ್ಲಿ ದ್ವಾರಕೀಶ್ ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?