‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ ಕಲೆಕ್ಷನ್; ಯಾವುದು ಪಾಸ್, ಯಾವುದು ಫೇಲ್?

Ekka And Junior Movie Collection: 'ಎಕ್ಕ' ಮತ್ತು 'ಜೂನಿಯರ್' ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಹೊಸ ಉತ್ಸಾಹ ತುಂಬಿವೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿವೆ. ಯುವ ರಾಜ್‌ಕುಮಾರ್ ಅಭಿನಯದ 'ಎಕ್ಕ' ಹಾಗೂ ಕಿರೀಟಿ ನಟನೆಯ 'ಜೂನಿಯರ್' ಚಿತ್ರಗಳ ಮೊದಲ ವಾರದ ಗಳಿಕೆ ಅಭೂತಪೂರ್ವವಾಗಿದೆ.

‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ ಕಲೆಕ್ಷನ್; ಯಾವುದು ಪಾಸ್, ಯಾವುದು ಫೇಲ್?
ಜೂನಿಯರ್-ಎಕ್ಕ

Updated on: Jul 22, 2025 | 7:05 AM

ಸೊರಗಿದ್ದ ಕನ್ನಡ ಚಿತ್ರರಂಗಕ್ಕೆ ‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾಗಳು (Junior Movie) ಹೊಸ ಹುರುಪು ನೀಡಿವೆ. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಇವೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯನ್ನು ಸಿನಿಮಾಗಳು ಹುಸಿ ಮಾಡಿಲ್ಲ. ಈಗ ಈ ಚಿತ್ರಗಳ ಸೋಮವಾರದ ಕೆಲೆಕ್ಷನ್ ಬಗ್ಗೆ ಮಾಹಿತಿ ಸಿಕ್ಕಿದೆ. ಯಾವ ಸಿನಿಮಾ ಫೇಲ್ ಹಾಗೂ ಯಾವ ಸಿನಿಮಾ ಪಾಸ್ ಎಂಬುದರ ಸಂಪೂರ್ಣ ವಿವರ ದೊರೆತಿದೆ. ಎರಡೂ ಸಿನಿಮಾಗಳು ಒಂದು ಹಂತಕ್ಕೆ ಪಾಸ್ ಆಗಿವೆ.

‘ಎಕ್ಕ’ ಸಿನಿಮಾ

ಯುವ ರಾಜ್​ಕುಮಾರ್ ಅಭಿನಯದ ಎರಡನೇ ಸಿನಿಮಾ ‘ಎಕ್ಕ’. ಈ ಚಿತ್ರವನ್ನು ರೋಹಿತ್ ಪದಕಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾನ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಯುವ ಅವರ ನಟನೆ, ಯುವ ಆ್ಯಕ್ಷನ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ‘ಬ್ಯಾಂಗಲ್ ಬಂಗಾರಿ’ ಹಾಡು ಕೂಡ ಚಿತ್ರಕ್ಕೆ ಮೈಲೇಜ್ ನೀಡಿದೆ. ಈ ಸಿನಿಮಾ ಮೊದಲ ವೀಕೆಂಡ್​ನಲ್ಲಿ 5.60 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈಗ ಸೋಮವಾರ ಸಿನಿಮಾ 50 ಲಕ್ಷದಿಂದ 80 ಲಕ್ಷ ರೂಪಾಯಿ ಅಂತರದಲ್ಲಿ ಕಲೆಕ್ಷನ್ ಮಾಡಿದೆ. ಇದರಿಂದ ಚಿತ್ರದ ಒಟ್ಟಾರೆ ಗಳಿಕೆ 6 ಕೋಟಿ ರೂಪಾಯಿ ದಾಟಿದೆ.

ಜೂನಿಯರ್

ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾ ಕೂಡ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿದೆ. ಈ ಚಿತ್ರ ಮೊದಲ ಮೂರು ದಿನಕ್ಕೆ 5.40 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಸಿನಿಮಾದ ಕಲೆಕ್ಷನ್ ಸೋಮವಾರ 75 ಲಕ್ಷದಿಂದ 1 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಈ ಮೂಲಕ ಈ ಚಿತ್ರದ ಕಲೆಕ್ಷನ್ ಆರೂವರೆ ಕೋಟಿ ರೂಪಾಯಿ ಸಮೀಪಿಸಿದೆ.

ಇದನ್ನೂ ಓದಿ
ಈ ದಿನಂದು ‘ಕಣ್ಣಪ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ?
ಈ ಸಸ್ಪೆನ್ಸ್ ಥ್ರಿಲ್ಲರ್​ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಲೇಬೇಡಿ
‘ಎಕ್ಕ’ ಚಿತ್ರಕ್ಕೆ ಸರಿ ಸಮಾನವಾಗಿ ಗಳಿಕೆ ಮಾಡುತ್ತಿದೆ ‘ಜೂನಿಯರ್’
ಬಾಕ್ಸ್ ಆಫೀಸ್ ಉಡೀಸ್ ಮಾಡಿದ ‘ಎಕ್ಕ’ ಸಿನಿಮಾ; ಭಾನುವಾರ ಬಂಗಾರದ ಬೆಳೆ

ಇದನ್ನೂ ಓದಿ: ‘ಎಕ್ಕ’ ಚಿತ್ರಕ್ಕೆ ಸರಿ ಸಮಾನವಾಗಿ ಗಳಿಕೆ ಮಾಡುತ್ತಿದೆ ‘ಜೂನಿಯರ್’; ಕಿರೀಟಿಗೆ ಪರ್ಫೆಕ್ಟ್ ಲಾಂಚ್

‘ಜೂನಿಯರ್’ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ರವಿಚಂದ್ರನ್, ಜೆನಿಲಿಯಾ ಮೊದಲಾದವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಕಿರೀಟಿ ಅವರು ಒಳ್ಳೆಯ ರೀತಿಯಲ್ಲಿ ಡ್ಯಾನ್ಸ್ ಹಾಗೂ ಫೈಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:04 am, Tue, 22 July 25