AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂಚನೆ ಪ್ರಯತ್ನ ; ನಟ ದರ್ಶನ್​ ಬಳಿ ತೆರಳಿದ ನಕಲಿ ಬ್ಯಾಂಕ್​ ಸಿಬ್ಬಂದಿ ಅರೆಸ್ಟ್​

ನಕಲಿ ಬ್ಯಾಂಕ್​ ಸಿಬ್ಬಂದಿ ಓರ್ವಳು ದರ್ಶನ್​ ಬಳಿ ತೆರಳಿದ್ದಳು. ನಿಮ್ಮ​ ಹೆಸರಿನಲ್ಲಿ ಲೋನ್​ಗೆ ಸ್ನೇಹಿತರು ಅರ್ಜಿ ಹಾಕಿದ್ದಾರೆ ಎಂದು ಮಹಿಳೆ ಹೇಳಿದ್ದಳು.

ವಂಚನೆ ಪ್ರಯತ್ನ ; ನಟ ದರ್ಶನ್​ ಬಳಿ ತೆರಳಿದ ನಕಲಿ ಬ್ಯಾಂಕ್​ ಸಿಬ್ಬಂದಿ ಅರೆಸ್ಟ್​
ಮಹಿಳೆ ಹಾಗೂ ದರ್ಶನ್​
TV9 Web
| Edited By: |

Updated on:Jul 11, 2021 | 5:24 PM

Share

ಸೆಲೆಬ್ರಿಟಿಗಳ ಹೆಸರನ್ನು ಬಳಕೆ ಮಾಡಿಕೊಂಡು ಸಾಕಷ್ಟು ಜನರು ಮೋಸ ಮಾಡೋಕೆ ಕಾಯುತ್ತಿರುತ್ತಾರೆ. ಈ ಮೊದಲು ಈ ರೀತಿಯ ಸಾಕಷ್ಟು ಘಟನೆಗಳು ನಡೆದಿವೆ. ಈಗ ನಟ ದರ್ಶನ್ ವಿಚಾರದಲ್ಲೂ ಅದೇ ರೀತಿ ಆಗಿದೆ. ನಿಮ್ಮ ಗೆಳೆಯರು 25 ಕೋಟಿ ಸಾಲಕ್ಕೆ ಅರ್ಜಿ ಹಾಕಿದ್ದು, ಶ್ಯೂರಿಟಿಯಲ್ಲಿ ನಿಮ್ಮ ಹೆಸರಿದೆ ಎಂದು ನಕಲಿ ಬ್ಯಾಂಕ್​ ಸಿಬ್ಬಂದಿ ದರ್ಶನ್​ ಬಳಿ ತೆರಳಿದ್ದರು. ಈಗ ಅವರನ್ನು ಬಂಧಿಸಲಾಗಿದೆ.

ನಕಲಿ ಬ್ಯಾಂಕ್​ ಸಿಬ್ಬಂದಿ ಅರುಣಾ ಎನ್ನುವವರು ದರ್ಶನ್​ ಬಳಿ ತೆರಳಿದ್ದರು. ನಿಮ್ಮ​ ಹೆಸರಿನಲ್ಲಿ ಲೋನ್​ಗೆ ಸ್ನೇಹಿತರು ಅರ್ಜಿ ಹಾಕಿದ್ದಾರೆ ಎಂದು ಮಹಿಳೆ ಹೇಳಿದ್ದರು. ನಾನು ಬ್ಯಾಂಕ್ ಮ್ಯಾನೇಜರ್ ಎಂದೇ ಆಕೆ ಪರಿಚಯಿಸಿಕೊಂಡಿದ್ದರು. ‘ನಿಮ್ಮ ಸ್ನೇಹಿತರಿಂದ ನಿಮ್ಮ ಶ್ಯೂರಿಟಿಯಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ₹25 ಕೋಟಿ ಲೋನ್‌ಗೆ ಬೇಡಿಕೆ ಇಟ್ಟಿದ್ದಾರೆ’ ಎಂದು ಅರುಣಾ ಹೆಳಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಲೋನ್‌ಗೆ ಯಾರು ಅರ್ಜಿ ಸಲ್ಲಿಸಿಲ್ಲ ಎಂಬುದು ಗೊತ್ತಾಗಿದೆ.

ಎರಡು ದಿನದ ಹಿಂದೆ ನಟ ದರ್ಶನ್ ಸ್ನೇಹಿತರು ಈ ಬಗ್ಗೆ ಮೈಸೂರಿನ ಹೆಬ್ಬಾಳ ಠಾಣೆಗೆ ದೂರು ನೀಡಿದ್ದಾರೆ. ನಟ ದರ್ಶನ್​ ಸ್ನೇಹಿತರ ದೂರನ್ನು ಆಧರಿಸಿ ಮಹಿಳೆ ವಶಕ್ಕೆ ಪಡೆಯಲಾಗಿದೆ.

ಸದ್ಯ ಮೈಸೂರಿನ ಎನ್​ಆರ್​​ ಎಸಿಪಿ ಕಚೇರಿಗೆ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರನ್ನು ಪೊಲೀಸರು ಕರೆಸಿದ್ದಾರೆ. ಸದ್ಯ, ಇಬ್ಬರಿಂದ ಹೇಳಿಕೆ ಪಡೆಯಲಾಗುತ್ತಿದೆ.

ಇದನ್ನೂ ಓದಿ: Darshan: ಸಿನಿಮಾ ಥಿಯೇಟರ್​ಗೆ ಭವಿಷ್ಯ ಇಲ್ಲವೇ?; ಉದಾಹರಣೆ ಸಹಿತ ವಿವರಿಸಿದ ದರ್ಶನ್

‘ದರ್ಶನ್​ ಮತ್ತು ನಾನು ಬಾಲ್ಯದ ಸ್ನೇಹಿತರು. ಅವರು ಕನ್ನಡ ಚಿತ್ರರಂಗದ ಹೆಮ್ಮೆ’

Published On - 4:41 pm, Sun, 11 July 21

Follow Us
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ