‘ಫ್ಯಾಮಿಲಿ ಪ್ಯಾಕ್​’ ನಿರ್ದೇಶಕನಿಗೆ ಸ್ಟಾರ್​ ನಿರ್ಮಾಪಕರ ಬುಲಾವ್​​; ತೆಲುಗಿನಿಂದ ಬಂತು ಆಫರ್

| Updated By: ರಾಜೇಶ್ ದುಗ್ಗುಮನೆ

Updated on: Feb 25, 2022 | 1:55 PM

ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ‘ಫ್ಯಾಮಿಲಿ ಪ್ಯಾಕ್​’ ಚಿತ್ರದಲ್ಲಿ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಸಿಹಿ-ಕಹಿ ಚಂದ್ರು, ರಂಗಾಯಣ ರಘು ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ತಮಿಳಿನ ರಜನಿಕಾಂತ್ ಅವರ ಪಿಆರ್​ಒ ಆಗಿರುವ ರಿಯಾಜ್ ಕೆ. ಅಹ್ಮದ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

 ‘ಫ್ಯಾಮಿಲಿ ಪ್ಯಾಕ್​’ ನಿರ್ದೇಶಕನಿಗೆ ಸ್ಟಾರ್​ ನಿರ್ಮಾಪಕರ ಬುಲಾವ್​​; ತೆಲುಗಿನಿಂದ ಬಂತು ಆಫರ್
ಅರ್ಜುನ್​ ಕುಮಾರ್-ಪುನೀತ್​
Follow us on

ಫೆಬ್ರವರಿ 16ರಂದು ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ (Amazon Prime Video) ‘ಫ್ಯಾಮಿಲಿ ಪ್ಯಾಕ್​’ (Family Pack) ರಿಲೀಸ್​ ಆಗಿತ್ತು. ಈ ಸಿನಿಮಾವನ್ನು ಪುನೀತ್​ ರಾಜ್​ಕುಮಾರ್ (Puneeth Rajkumar) ಒಡೆತನದ ‘ಪಿಆರ್​ಕೆ ಸ್ಟುಡಿಯೋಸ್​’ ನಿರ್ಮಾಣ ಮಾಡಿದೆ. ಈ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾಮಿಡಿ ಕಥಾ ಹಂದರವುಳ್ಳ ಈ ಸಿನಿಮಾ ಎಲ್ಲರನ್ನೂ ನಗಿಸಿತ್ತು. ದಕ್ಷಿಣ ಭಾರತದ ಹಲವು ದಿಗ್ಗಜರಿಂದಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಈ ಚಿತ್ರವನ್ನು ನಿರ್ದೇಶನ ಮಾಡಿದ ಅರ್ಜುನ್​ ಕುಮಾರ್​ ಅವರಿಗೆ ಈಗ ಬೇಡಿಕೆ ಹೆಚ್ಚಿದೆ. ಟಾಲಿವುಡ್​ನಿಂದ ಅವರಿಗೆ ಬುಲಾವ್​ ಬಂದಿದೆ.

ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ‘ಫ್ಯಾಮಿಲಿ ಪ್ಯಾಕ್​’ ಚಿತ್ರದಲ್ಲಿ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಸಿಹಿ-ಕಹಿ ಚಂದ್ರು, ರಂಗಾಯಣ ರಘು ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ತಮಿಳಿನ ರಜನಿಕಾಂತ್ ಅವರ ಪಿಆರ್​ಒ ಆಗಿರುವ ರಿಯಾಜ್ ಕೆ. ಅಹ್ಮದ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಬಾಹುಬಲಿ’ ಮತ್ತು ‘ಆರ್​ಆರ್​ಆರ್’ ಸಿನಿಮಾ ತಂಡದ ಜತೆ ಗುರುತಿಸಿಕೊಂಡಿರುವ ವಂಶಿ ಕಾಕಾ ಕೂಡ ಅರ್ಜುನ್​ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ದಕ್ಷಿಣ ಭಾರತದ ಸಿನಿ ತಜ್ಞ ರಮೇಶ್ ಬಾಲ ಅವರಿಂದಲೂ ‘ಫ್ಯಾಮಿಲಿ ಪ್ಯಾಕ್​’ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ.  ಈ ಕಾರಣಕ್ಕೆ ಪರಭಾಷಿಕರು ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಅಲ್ಲು ಅರ್ಜುನ್ ಒಡೆತನದ ‘ಆಹಾ’ ಓಟಿಟಿ ಮೀಡಿಯಾದ ಕಂಟೆಂಟ್​ ಮುಖ್ಯಸ್ಥೆ ಪ್ರಣೀತಾ ಅವರು ‘ಫ್ಯಾಮಿಲಿ ಪ್ಯಾಕ್​’ ಸಿನಿಮಾ ನೋಡಿದ್ದಾರೆ. ಅಲ್ಲದೆ, ಅರ್ಜುನ್​ ಅವರಿಗೆ ಹೈದರಾಬಾದ್​ಗೆ ಆಹ್ವಾನ ನೀಡಿದ್ದಾರೆ. ವಿಜಯ್ ದೇವರಕೊಂಡ ಅವರ ಪಿಆರ್​ಒ ಆಗಿರುವ ಸುರೇಶ್ ಕೊಂಡ, ತೆಲುಗಿನಲ್ಲಿಯೂ ಈ ಸಿನಿಮಾ ಮಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ‘ಫ್ಯಾಮಿಲಿ ಪ್ಯಾಕ್’ ಚಿತ್ರದಿಂದ ನಿರ್ದೇಶಕ ಅರ್ಜುನ್ ಕುಮಾರ್ ಅವರನ್ನು ಬೇರೆ ಬೇರೆ ಇಂಡಸ್ಟ್ರಿಯವರೂ ಗುರುತಿಸುತ್ತಿದ್ದಾರೆ.

ಈ ಬಗ್ಗೆ ನಿರ್ದೇಶಕರು ಹೇಳುವುದೇ ಬೇರೆ. ‘ಮಾತುಕತೆಗಳು ನಡೆಯುತ್ತಿವೆ. ಆದರೆ, ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಈಗಲೇ ಅದೆಲ್ಲವನ್ನೂ ನಾನು ರಿವೀಲ್ ಮಾಡುವುದಿಲ್ಲ. ‘ಪಿಆರ್​ಕೆ’ ಸಂಸ್ಥೆ ವತಿಯಿಂದ ನಿರ್ಮಾಣವಾಗಿರುವ ‘ಫ್ಯಾಮಿಲಿ ಪ್ಯಾಕ್’ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅದೇ ಖುಷಿಯ ವಿಚಾರ ಎಂಬುದು ಅರ್ಜುನ್​ ಮಾತು.

 ಫ್ಯಾಮಿಲಿ ಪ್ಯಾಕ್​ ಸಿನಿಮಾದ ಒಂದೆಳೆ ಏನು?

ಅಭಿ (ಲಿಖಿತ್​ ಶೆಟ್ಟಿ) ಚಿಕ್ಕ ವಯಸ್ಸಿನಲ್ಲಿರುವಾಗಲೇ ಆತನ ತಂದೆ-ತಾಯಿ (ಅಚ್ಯುತ್​ ಕುಮಾರ್​-ಪದ್ಮಜಾ ರಾವ್​) ಬೇರೆ ಆಗುತ್ತಾರೆ. ಅಭಿ ಬೆಳೆದು ದೊಡ್ಡವನಾಗುವವರೆಗೆ ಆತನ ತಂದೆಗೆ ಮೂರನೇ ಮದುವೆ ಆಗಿರುತ್ತದೆ. ಆದರೆ, ಅಭಿಗೆ ಮಾತ್ರ ಪ್ರೀತಿಯ ಆಸರೆ ಸಿಕ್ಕಿರುವುದಿಲ್ಲ. ಆರು ತಿಂಗಳು ತಂದೆಯ ಮನೆಯಲ್ಲಿರುವ ಅಭಿ ಮತ್ತಾರು ತಿಂಗಳು ಅಮ್ಮನ ಮನೆಯಲ್ಲಿ ವಾಸಿಸುತ್ತಿರುತ್ತಾನೆ. ಈ ಕಾಂಟ್ರ್ಯಾಕ್ಟ್​ನಿಂದ ಬೇಸತ್ತಿರುವ ಅಭಿಗೆ ಭೂಮಿಕಾ (ಅಮೃತಾ) ಮೇಲೆ ಲವ್​ ಆಗಿರುತ್ತದೆ. ಆದರೆ, ಆಕೆ ಈತನ ಕಡೆಗೂ ತಿರುಗಿ ನೋಡಿರುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್​ ಆಗೋಕೆ ಆಕೆ ಏನು ಮಾಡೋಕೂ ರೆಡಿ. ಹೀಗಿರುವಾಗಲೇ ಅಭಿ ಆತ್ಮಹತ್ಯೆಯ ನಿರ್ಧಾರಕ್ಕೆ ಬರುತ್ತಾನೆ. ಆಗ ಬಂದು ಕಾಪಾಡೋದು ಮಂಜುನಾಥ್​ (ರಂಗಾಯಣ ರಘು). ಅಷ್ಟಕ್ಕೂ ಈ ಮಂಜುನಾಥ್​ ಯಾರು? ಅವನು ಅಭಿಯನ್ನು ಏಕೆ ಕಾಪಾಡುತ್ತಾನೆ? ಈ ಎಲ್ಲಾ ಪ್ರಶ್ನೆಗೆ ನೀವು ಸಿನಿಮಾದಲ್ಲಿ ಉತ್ತರ ಹುಡುಕಬೇಕು.

ಒದನ್ನೂ ಓದಿ: ಪುನೀತ್​ ರಾಜ್​ಕುಮಾರ್ ಕುರಿತು ಬಯೋಗ್ರಫಿ; ಈ ಪುಸ್ತಕದಲ್ಲಿ ಏನೆಲ್ಲ ಮಾಹಿತಿ ಇರಲಿದೆ?

Family Pack Movie Review: ‘ಫ್ಯಾಮಿಲಿ ಪ್ಯಾಕ್’ ತುಂಬ ಮನರಂಜನೆ, ಸ್ವಲ್ಪ ಎಮೋಷನ್ಸ್, ಒಂದಷ್ಟು ಫ್ಯಾಂಟಸಿ