AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಬಾಕ್ಸ್​ ಆಫೀಸ್​​ನಲ್ಲಿ ದೊಡ್ಡ ಕ್ಲ್ಯಾಶ್​; ಇಲ್ಲಿದೆ ತೆರೆಗೆ ಬರ್ತಿರೋ ಸಿನಿಮಾ ಮಾಹಿತಿ

ಗುರುವಾರ (ಫೆಬ್ರವರಿ 24) ಕೆಲ ಸಿನಿಮಾಗಳು ತೆರೆಗೆ ಬಂದಿವೆ. ಶುಕ್ರವಾರವೂ ಸಿನಿಮಾ ರಿಲೀಸ್​ ಆಗುತ್ತಿದೆ. ಹಾಗಾದರೆ, ಈ ವಾರ ರಿಲೀಸ್​ ಆದ ಹಾಗೂ ರಿಲೀಸ್​ ಆಗುತ್ತಿರುವ ಸಿನಿಮಾಗಳು ಯಾವವು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ವಾರ ಬಾಕ್ಸ್​ ಆಫೀಸ್​​ನಲ್ಲಿ ದೊಡ್ಡ ಕ್ಲ್ಯಾಶ್​; ಇಲ್ಲಿದೆ ತೆರೆಗೆ ಬರ್ತಿರೋ ಸಿನಿಮಾ ಮಾಹಿತಿ
TV9 Web
| Edited By: |

Updated on: Feb 25, 2022 | 8:11 AM

Share

ಕೊರೊನಾ ಮೂರನೇ ಅಲೆಯ (Corona 3rd Wave) ಕಾಟ ಬಹುತೇಕ ಕಡಿಮೆ ಆಗಿದೆ. ಹೀಗಾಗಿ, ಚಿತ್ರರಂಗದಲ್ಲಿ (Cinema Industry) ಮತ್ತೆ ಮೊದಲಿನ ಚೈತನ್ಯ ಕಾಣಿಸಿಕೊಂಡಿದೆ. ಈ ವಾರ ಸಾಕಷ್ಟು ಸಿನಿಮಾಗಳು ರಿಲೀಸ್​ ಆಗುತ್ತಿವೆ. ಸ್ಯಾಂಡಲ್​ವುಡ್​, ಬಾಲಿವುಡ್​, ಟಾಲಿವುಡ್​ (Tollywood) ಹಾಗೂ ಕಾಲಿವುಡ್​ನಲ್ಲಿ ಬಿಗ್​ ಬಜೆಟ್​ ಚಿತ್ರಗಳು ತೆರೆಗೆ ಬರುತ್ತಿವೆ. ವಿಶೇಷ ಎಂದರೆ, ಗುರುವಾರವೂ (ಫೆಬ್ರವರಿ 24) ಕೆಲ ಸಿನಿಮಾಗಳು ತೆರೆಗೆ ಬಂದಿವೆ. ಹಾಗಾದರೆ, ಈ ವಾರ ರಿಲೀಸ್​ ಆದ ಹಾಗೂ ರಿಲೀಸ್​ ಆಗುತ್ತಿರುವ ಸಿನಿಮಾಗಳು ಯಾವವು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಓಲ್ಡ್​ ಮಾಂಕ್​

ಅದಿತಿ ಪ್ರಭುದೇವ ಮತ್ತು ಶ್ರೀನಿ ಅವರು ಎರಡನೇ ಬಾರಿಗೆ ಜೋಡಿಯಾಗಿ ನಟಿಸಿದ ಸಿನಿಮಾ ‘ಓಲ್ಡ್​ ಮಾಂಕ್​’. ಈ ಹಿಂದೆ ‘ರಂಗನಾಯಕಿ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಎಸ್​. ನಾರಾಯಣ್​, ಸುಜಯ್​ ಶಾಸ್ತ್ರಿ, ಅರುಣಾ ಬಾಲರಾಜ್​ ಮುಂತಾದ ಪ್ರತಿಭಾವಂತ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಸೌರಭ್​ ಮತ್ತು ವೈಭವ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ದೀಪು ಎಸ್​. ಕುಮಾರ್​ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಭರತ್​ ಪರಶುರಾಮ್​ ಛಾಯಾಗ್ರಹಣ ಮಾಡಿದ್ದಾರೆ.

ಬ್ಲಾಂಕ್​

‘ಬ್ಲಾಂಕ್​’ ಚಿತ್ರ ಈಗಾಗಲೇ ಟ್ರೇಲರ್​ ಮೂಲಕ ಗಮನ ಸೆಳೆದಿದೆ. ಕೃಷಿ ತಾಪಂಡ, ಭರತ್ ಹಾಸನ್, ರಶ್ ಮಲ್ಲಿಕ್, ಸಚೀಂದ್ರ ಪ್ರಸಾದ್, ಪೂರ್ಣಚಂದ್ರ ಮೈಸೂರು, ಪ್ರಶಾಂತ್ ಸಿದ್ದಿ ಮುಂತಾದವರು ‘ಬ್ಲಾಂಕ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಎಸ್​. ಜಯ್​ ನಿರ್ದೇಶನ ಮಾಡಿದ್ದಾರೆ. ಎನ್​.ಪಿ. ಮಂಜುನಾಥ ಪ್ರಸನ್ನ ಅವರು ‘ಬ್ಲಾಂಕ್’ ಚಿತ್ರವನ್ನು ನಿರ್ಮಿಸಿದ್ದಾರೆ.

ಭೀಮ್ಲಾ ನಾಯಕ್

ಮಲಯಾಳಂನ ‘ಅಯ್ಯಪ್ಪನುಮ್​ ಕೋಶಿಯುಮ್​’ ಸಿನಿಮಾ ತೆಲುಗಿನಲ್ಲಿ ​ ‘ಭೀಮ್ಲಾ ನಾಯಕ್’ ಆಗಿ ರಿಮೇಕ್​ ಆಗಿದೆ. ಪೊಲೀಸ್​ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ಪೃಥ್ವಿರಾಜ್​ ಹಾಗೂ ಬಿಜು ಮೆನನ್​ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್​ ಪಾತ್ರವನ್ನು ರಾಣಾ ದಗ್ಗುಬಾಟಿ ಹಾಗೂ ಬಿಜು ಮಾಡಿದ್ದ ಪಾತ್ರವನ್ನು ಪವನ್​ ಕಲ್ಯಾಣ್​ ನಿರ್ವಹಿಸುತ್ತಿದ್ದಾರೆ. ಪವನ್​ ಕಲ್ಯಾಣ್​ ಸಿನಿಮಾ ಎಂಬ ಕಾರಣಕ್ಕೆ ದೊಡ್ಡ ನಿರೀಕ್ಷೆ ಇದೆ.

ಗಂಗೂಬಾಯಿ ಕಾಠಿಯಾವಾಡಿ

ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾದಲ್ಲಿ ಗಂಗೂಬಾಯಿ ಆಗಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಮುಂಬೈನ ಕಾಮಾಟಿಪುರದ ಡಾನ್​ ಆಗಿ ಮೆರೆದ ಗಂಗೂಬಾಯಿ ಜೀವನದ ವಿವರಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಆಲಿಯಾ ಜೊತೆ ವಿಜಯ್​ ರಾಝ್​, ಹುಮಾ ಖುರೇಶಿ ಮತ್ತು ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ವಿವಾದದ ಮೂಲಕ ಸುದ್ದಿ ಆಗಿತ್ತು.

ಮತ್ಯಾವ ಸಿನಿಮಾ?

ಗುರುವಾರ ಅಜಿತ್​ ನಟನೆಯ ‘ವಲಿಮೈ’, ಕನ್ನಡದ ‘ಏಕ್​ ಲವ್​ ಯಾ’ ಸಿನಿಮಾ ತೆರೆಗೆ ಬಂದಿದೆ. ಶುಕ್ರವಾರ (ಫೆಬ್ರವರಿ 25) ಅಭಯ್​ ಚಂದ್ರು ಹಾಗೂ ಮೇಘಶ್ರೀ ನಟನೆಯ ‘ಮನಸಾಗಿದೆ’ ಸಿನಿಮಾ ಕೂಡ ತೆರೆಗೆ ಬರುತ್ತಿದೆ.

ಇದನ್ನೂ ಓದಿ:

ಅಂಗಡಿ ಉದ್ಘಾಟನೆ ಮಾಡೋಕೆ ಬಂದ್ರೆ ನಟಿ ಸಮಂತಾ ಪಡೆಯುವ ಸಂಭಾವನೆ ಎಷ್ಟು?

‘ವಿಜಯ್​ ದೇವರಕೊಂಡ ನೋಡಿ ಭಯ ಆಗಿತ್ತು’; ಮತ್ತೆ ಮುನ್ನೆಲೆಗೆ ಬಂತು ರಶ್ಮಿಕಾ ಹೇಳಿದ್ದ ಆ ಮಾತು

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ