Music Director: ಕನ್ನಡದ ಮೊದಲ ಸಂಗೀತ ನಿರ್ದೇಶಕಿ ‘ನೀಲಮ್ಮ ಕಡಾಂಬಿ’

Female Music Director: ಈಗ ಲಭ್ಯವಾಗಿರುವ ಹೊಸ ಮಾಹಿತಿಯ ಪ್ರಕಾರ 1949ರಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಮಹಿಳೆಯೊಬ್ಬರು ಸಂಗೀತ ನೀಡಿದ್ದಾರೆ. ಅದು ಯಶಸ್ವಿ ಕೂಡ ಆಗಿದೆ. ಹೀಗಾಗಿ ಕನ್ನಡದ ಮೊದಲ ಮಹಿಳಾ ಸಂಗೀತ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ನೀಲಮ್ಮ ಕಡಾಂಬಿ ಪಾತ್ರಾಗಿದ್ದಾರೆ.

Music Director: ಕನ್ನಡದ ಮೊದಲ ಸಂಗೀತ ನಿರ್ದೇಶಕಿ ‘ನೀಲಮ್ಮ ಕಡಾಂಬಿ’
ನೀಲಮ್ಮ ಕಡಾಂಬಿ ಮತ್ತು ಎನ್. ಎಸ್​. ಶ್ರೀಧರ ಮೂರ್ತಿ
Follow us
ಶ್ರೀದೇವಿ ಕಳಸದ
|

Updated on:Mar 30, 2022 | 11:21 AM

ಸಂಗೀತ ನಿರ್ದೇಶಕಿ | Music Director : ಚಿತ್ರರಂಗದಲ್ಲಿ ಸಂಗೀತ, ಸಂಕಲನ, ಛಾಯಾಗ್ರಹಣ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ ಸಂಖ್ಯೆ ಎಂದಿನಿಂದಲೂ ಕಡಿಮೆ. ಅದರಲ್ಲಿಯೂ ಸಂಗೀತ ನಿರ್ದೇಶಕಿಯರ ಸಂಖ್ಯೆ ಇನ್ನಷ್ಟು ವಿರಳ. ಭಾರತೀಯ ಚಿತ್ರರಂಗದ ಮೊದಲ ಸಂಗೀತ ನಿರ್ದೇಶಕಿ ಎನ್ನಿಸಿಕೊಂಡವರು ಸರಸ್ವತಿದೇವಿ. 1935ರಲ್ಲಿಯೇ ಅಚ್ಯುತ ಕನ್ಯಾ’ ಚಿತ್ರಕ್ಕೆ ಸಂಗೀತ ನೀಡಿದ್ದರು. ‘ಮಾಯಾ ಬೇಬಿ’ವಚನ್’ಬಂಧನ್’ಆಮ್ರಪಾಲಿ’ ಅವರು ಸಂಗೀತ ನೀಡಿದ ಚಿತ್ರಗಳು. ಇದೇ ಸಂದರ್ಭದಲ್ಲಿ ಖ್ಯಾತ ತಾರೆ ನರ್ಗೀಸ್ ಅವರ ತಾಯಿ ಜದನ್ ಬಾಯಿ ಕೂಡ ಸಂಗೀತ ನಿರ್ದೇಶಕಿಯಾದರು. ಕೆ. ಎನ್. ಸೈಗಲ್ ಅವರ ಪ್ರತಿಭೆಯನ್ನು ಗುರುತಿಸಿ ಸಂಗೀತ ನಿರ್ದೇಶಕಿಯಾಗುವಂತೆ ಪ್ರೋತ್ಸಾಹ ನೀಡಿದರು. ‘ಪ್ರೇಮ ಪರೀಕ್ಷೆ’ ‘ಸೇವಾ ಸದನ’ ‘ತಲಾಷ್‍’ ಮೊದಲಾದವು ಅವರು ಸಂಗೀತ ನೀಡಿದ ಕೆಲವು ಚಿತ್ರಗಳು. ಚಿತ್ರರಂಗದ ಆರಂಭಿಕ ದಿನಗಳಲ್ಲಿಯೇ ಇಬ್ಬರು ಮಹಿಳಾ ಸಂಗೀತ ನಿರ್ದೇಶಕಿಯರು ಬಂದರೂ ಇದೊಂದು ಪರಂಪರೆಯಾಗಿ ಮುಂದುವರೆಯಲಿಲ್ಲ. ಸುಮಾರು ಮೂರು ದಶಕಗಳ  ನಂತರ ಭಾರತದ ಯಶಸ್ವಿ ಸಂಗೀತ ನಿರ್ದೇಶಕಿ ಎನ್ನಿಸಿಕೊಂಡ ಉಷಾ ಖನ್ನಾ ಕಾಣಿಸಿಕೊಂಡರು. ಎನ್.ಎಸ್.ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತ

(ಭಾಗ 1)

ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ 1947ರಲ್ಲಿ ‘ಬಿಂದು ಬಿ.ಎ’ ಎನ್ನುವ ಚಿತ್ರ ಹಿಮಾಂಶು ರೂಪವಾಣಿ ಲಾಂಛನದಲ್ಲಿ ಆರಂಭವಾಯಿತು. ಬೋಳಾರ ಭೋಜರಾವ್ ಚಿತ್ರದ ನಾಯಕರಾದರೆ ಪ್ರತಿಮಾದೇವಿ ನಾಯಕಿ. ಮಹಿಳೆಯರ ವಿದ್ಯಾಭ್ಯಾಸದ ಮಹತ್ವವನ್ನು ಬಿಂಬಿಸುವ ಚಿತ್ರ ಇದಾಗಿತ್ತು. ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ದೊರೆಸ್ವಾಮಿಯವರು ದಾಖಲೆ ಮಾಡಿರುವಂತೆ ಇದಕ್ಕೆ ಮಹಿಳಾ ಸಂಗೀತ ನಿರ್ದೇಶಕಿ ಬೇಕು ಎಂದೇ ಹುಡುಕಲಾಯಿತು. ಆಗ ಸಿಕ್ಕವರು ರಜಿಯಾ. ಎಸ್. ಅಹಮದ್. ಈ ಚಿತ್ರ ಪೂರ್ತಿಯಾಗಲಿಲ್ಲ. ಇದರ ಕುರಿತು ಬಂದಿದ್ದ ಜಾಹಿರಾತು ಒಂದೇ ಈಗ ಉಳಿದಿರುವ ಏಕೈಕ ದಾಖಲೆ. ಆ ಕಾಲದಲ್ಲಿಯೇ ಮಹಿಳೆಯೊಬ್ಬರು ಸಂಗೀತ ನೀಡಿದ್ದು ದೊಡ್ಡ ಸಾಧನೆಯಾದರೂ ಈ ರಜಿಯಾ. ಎಸ್. ಅಹಮದ್ ಯಾರು? ಮುಂದೆ ಅವರು ಏನಾದರು ಎನ್ನುವ ಕುರಿತು ವಿವರಗಳು ಲಭ್ಯವಿಲ್ಲ.

ಇದನ್ನೂ ಓದಿ : S.V.Parameshwar Bhat Birth Anniversary: ‘ಬಡಕವಿಯ ಮನೆಗೆ ನುಗ್ಗಿದ ಕಳ್ಳ ತಾನೇ ಐದು ರೂಪಾಯಿ ಇಟ್ಟು ಹೋಗಿದ್ದ’

ಅಲ್ಲಿಂದ ಮುಂದೆ 1962ರಲ್ಲಿ ‘ಮಹಾತ್ಮ ಕಬೀರ’ ಚಿತ್ರಕ್ಕೆ ಸಂಗೀತ ನೀಡಿದ ಅನುಸೂಯಾದೇವಿಯವರೇ ಕನ್ನಡದ ಮೊದಲ ಸಂಗೀತ ನಿರ್ದೇಶಕಿ ಎಂದು ಇತಿಹಾಸದಲ್ಲಿ ದಾಖಲಾಗಿತ್ತು. ಇಷ್ಟು ದಿನವೂ ಇದೇ ಸರಿಯಾದ ಮಾಹಿತಿ ಎಂದುಕೊಳ್ಳಲಾಗಿತ್ತು. ಈಗ ಲಭ್ಯವಾಗಿರುವ ಹೊಸ ಮಾಹಿತಿಗಳ ಪ್ರಕಾರ 1949ರಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಮಹಿಳೆಯೊಬ್ಬರು ಸಂಗೀತ ನೀಡಿದ್ದಾರೆ. ಅದು ಯಶಸ್ವಿ ಕೂಡ ಆಗಿದೆ. ಹೀಗಾಗಿ ಕನ್ನಡದ ಮೊದಲ ಮಹಿಳಾ ಸಂಗೀತ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ನೀಲಮ್ಮ ಕಡಾಂಬಿ ಪಾತ್ರಾಗಿದ್ದಾರೆ. ‘ಸತಿ ತುಳಸಿ’ ಚಿತ್ರಕ್ಕೆ ಅವರು ನೀಡಿದ ಸಂಗೀತ ವಿಶಿಷ್ಟವಾಗಿತ್ತು. ಚಿತ್ರದ 13 ಗೀತೆಗಳೂ ಕೂಡ ಪ್ರಯೋಗಶೀಲವಾಗಿರುವುದನ್ನು ನಾವು ಗಮನಿಸಬಹುದಾಗಿದೆ.  ಈ ಚಿತ್ರದಲ್ಲಿ ಒಟ್ಟು 13 ಹಾಡುಗಳಿದ್ದು ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲಿ ಧ್ವನಿಮುದ್ರಣಗೊಂಡಿದ್ದವು. ಮೈಸೂರಿನ ಅಯ್ಯಂಗಾರ್ ಪ್ರೊಡಕ್ಷನ್‍ನ ಈ ಚಿತ್ರದ ನಿರ್ದೇಶಕರು ಎಂ. ಎ. ಎನ್. ಅಯ್ಯಂಗಾರ್.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಇದನ್ನೂ ಓದಿ : Chi. Udayashankar’s Birth Anniversary: ಎರಡುತಾಸಿಗೆ ‘ಬೆಂಗಳೂರ್ ಮೈಲ್’, ಹತ್ತುನಿಮಿಷಕ್ಕೆ ಕೆ.ಜಿ ಮೈಸೂರ್​ಪಾಕ್ ಖಾಲಿ

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/kannada-music-directors

Published On - 11:20 am, Wed, 30 March 22

ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಯತ್ನಾಳ್ ಹೆಸರೇಳದೆ ನಾಯಿ-ಕುರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದ ಕಾಶಪ್ಪನವರ್
ಯತ್ನಾಳ್ ಹೆಸರೇಳದೆ ನಾಯಿ-ಕುರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದ ಕಾಶಪ್ಪನವರ್
ಅವಿವಾಹಿತ ಜಯಣ್ಣ ನಾಳೆ ಗೃಹಪ್ರವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು!
ಅವಿವಾಹಿತ ಜಯಣ್ಣ ನಾಳೆ ಗೃಹಪ್ರವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು!
ರಾಜ್ ಕುಮಾರ್, ಅಂಬರೀಶ್ ಅಂತ್ಯಕ್ರಿಯೆಗೂ ಶ್ರೀಗಂಧದ ಕಟ್ಟಿಗೆ ಬಳಸಲಾಗಿತ್ತು
ರಾಜ್ ಕುಮಾರ್, ಅಂಬರೀಶ್ ಅಂತ್ಯಕ್ರಿಯೆಗೂ ಶ್ರೀಗಂಧದ ಕಟ್ಟಿಗೆ ಬಳಸಲಾಗಿತ್ತು