ಒಂದಾಗುತ್ತಿರುವ ‘ರಮೇಶ್-ಗಣೇಶ್’: ಇದು ಭಗ್ನ ಪ್ರೇಮಿಗಳ ಕತೆಯಾ?
ಗಣೇಶ್ ಮತ್ತು ರಮೇಶ್ ಅರವಿಂದ್ ಮೊದಲ ಬಾರಿ ಒಟ್ಟಿಗೆ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಈ ಇಬ್ಬರು ನಾಯಕರನ್ನು ಒಟ್ಟಿಗೆ ಸೇರಿಸುತ್ತಿರುವುದು ನಿರ್ದೇಶಕ ವಿಖ್ಯಾತ್ ಎಆರ್, ಸಿನಿಮಾವನ್ನು ಸತ್ಯ ರಾಯಲ ನಿರ್ಮಾಣ ಮಾಡಲಿದ್ದಾರೆ.

ರಮೇಶ್ ಅರವಿಂದ್ ಹಾಗೂ ನಟ ಗಣೇಶ್ ಅವರಲ್ಲಿ ಬಹಳ ಸಾಮ್ಯತೆ ಇದೆ. ಇಬ್ಬರೂ ಸಹ ಕಿರುತೆರೆಯಲ್ಲಿ ಕೆಲಸ ಮಾಡಿದ್ದಾರೆ. ಇಬ್ಬರೂ ಸಹ ಪ್ರೇಮಕತೆಗಳ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇಬ್ಬರೂ ನಟರು ಹೆಂಗೆಳೆಯರ ಮೆಚ್ಚಿನ ನಾಯಕರು. ಇಬ್ಬರಿಗೂ ಅಂತ್ಯದಲ್ಲಿ ನಾಯಕಿ ಸಿಗುವುದು ಅಪರೂಪವೇ. ಇಬ್ಬರೂ ‘ಭಗ್ನ ಪ್ರೇಮಿಗಳ’ ಗುಂಪಿನ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಈ ರೊಮ್ಯಾಂಟಿಕ್ ಹೀರೋಗಳು ಒಟ್ಟಿಗೆ ನಟಿಸಿದರೆ? ಸಿನಿಮಾ ಪ್ರೇಮಿಗಳ ಆಸೆ ಈಡೇರುತ್ತಿದೆ. ರಮೇಶ್ ಹಾಗೂ ಗಣೇಶ್ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ವಿಖ್ಯಾತ್ ಎಆರ್, ಮೊದಲ ಬಾರಿಗೆ ಗಣೇಶ್ ಹಾಗೂ ರಮೇಶ್ ಅವರನ್ನು ಒಟ್ಟಿಗೆ ತೆರೆಗೆ ತರುತ್ತಿದ್ದಾರೆ. ಇಬ್ಬರ ಇಮೇಜಿಗೂ ಒಪ್ಪಿಗೆ ಆಗುವ ಕತೆಯೊಂದನ್ನು ನಿರ್ದೇಶಕ ವಿಖ್ಯಾತ್ ತಯಾರಿಸಿಕೊಂಡಿದ್ದು, ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾದ ಹೆಸರು ಮೊದಲ ಲುಕ್ ಆಗಸ್ಟ್ 16ಕ್ಕೆ ತೆರೆಗೆ ಬರಲಿದೆ. ಸಿನಿಮಾವನ್ನು ಸತ್ಯ ರಾಯಲ ನಿರ್ಮಾಣ ಮಾಡಲಿದ್ದಾರೆ.
ಇದನ್ನೂ ಓದಿ:ಪ್ರಜ್ವಲ್ ಕೇಸ್ ಬೆನ್ನಲ್ಲೇ ರಮೇಶ್ ಅರವಿಂದ್ಗೆ ಪೆನ್ಡ್ರೈವ್ ಕೊಟ್ಟ ಫ್ಯಾನ್; ನಟನ ರಿಯಾಕ್ಷನ್ ನೋಡಿ
ಸಿನಿಮಾದ ಘೋಷಣೆಗಾಗಿ ಪೋಸ್ಟರ್ ಒಂದನ್ನು ಇದೀಗ ಬಿಡುಗಡೆ ಮಾಡಿದ್ದು, ಪೋಸ್ಟರ್ನಲ್ಲಿ ರಮೇಶ್ ಹಾಗೂ ಗಣೇಶ್ರ ಹಳೆಯ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಕಾಗದ ಪತ್ರದ ಮೇಲೆ ಸಿನಿಮಾದ ಘೋಷಣೆ ಮಾಡಲಾಗಿದೆ. ಕಾಗದಕ್ಕೆ 19 ಫೆಬ್ರವರಿ 46ರ ವರ್ಷದ ಸೀಲ್ ಇದೆ. ಶಾಂಘಾಯ್ ದೇಶದ ಹೆಸರು ಸಹ ಸೀಲ್ ಮೇಲಿದೆ. ಸೀಲ್ನಲ್ಲಿ ವಿಮಾನದ ಚಿತ್ರವೂ ಇದೆ. ಇದೆಲ್ಲವೂ ಈ ಸಿನಿಮಾ 40ರ ದಶಕದಲ್ಲಿ ನಡೆಯುವ ಕತೆ ಇರಬಹುದೆಂಬ ಸುಳಿವು ನೀಡುತ್ತಿವೆ.
ಗಣೇಶ್ ಪ್ರಸ್ತುತ ‘ಕೃಷ್ಣಂ ಪ್ರಣಯ ಸಖಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟ ರಮೇಶ್ ಅರವಿಂದ್ ‘ಮಹಾನಟಿ’ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿರುವ ಜೊತೆಗೆ ಕೆಲವು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ರಮೇಶ್ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿಯೂ ಸಹ ನಟಿಸಿದ್ದು, ಈ ಸಿನಿಮಾದಲ್ಲಿ ಅವರದ್ದು ಮಾಸ್ ಪಾತ್ರ ಎನ್ನಲಾಗುತ್ತಿದೆ. ಅಲ್ಲದೆ ರಮೇಶ್ ಮೊದಲ ಬಾರಿಗೆ ‘ಕೆಡಿ’ ಸಿನಿಮಾನಲ್ಲಿ ಲಾಂಗ್ ಸಹ ಹಿಡಿದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ