ಸಿಂಪಲ್ ಸುನಿ ಹೊಸ ಸಿನಿಮಾ, ಕುವೆಂಪು ಕೃತಿಯಿಂದ ಸ್ಪೂರ್ತಿ

ಕನ್ನಡದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾದ ಸಿಂಪಲ್ ಸುನಿ ತಮ್ಮ ಮುಂದಿನ ಸಿನಿಮಾದ ಕತೆಯನ್ನು ಕುವೆಂಪು ಅವರ ಕವಿತೆಯಿಂದ ಸ್ಪೂರ್ತಿ ಪಡೆದು ಬರೆದಿದ್ದಾರೆ. ಈ ಸಿನಿಮಾ ಮೂಲಕ ಹೊಸ ನಟನೊಬ್ಬನನ್ನು ಪರಿಚಯಿಸುವ ಉಮೇದಿನಲ್ಲಿದ್ದಾರೆ.

ಸಿಂಪಲ್ ಸುನಿ ಹೊಸ ಸಿನಿಮಾ, ಕುವೆಂಪು ಕೃತಿಯಿಂದ ಸ್ಪೂರ್ತಿ
ಸಿಂಪಲ್ ಸುನಿ-ಕುವೆಂಪು
Follow us
ಮಂಜುನಾಥ ಸಿ.
|

Updated on: Jul 02, 2024 | 12:50 PM

ನಿರ್ದೇಶಕ ಸಿಂಪಲ್ ಸುನಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಹೀರೋಗಳ ಮಾಸ್ ಇಮೇಜು, ಅದ್ಧೂರಿ ಮೇಕಿಂಗ್ ಅನ್ನು ಮಾತ್ರವೇ ನೆಚ್ಚಿಕೊಳ್ಳದೆ, ಕತೆಗೆ ಒತ್ತು ಕೊಡುವ ಕೆಲವೇ ನಿರ್ದೇಶಕರಲ್ಲಿ ಸಿಂಪಲ್ ಸುನಿ ಸಹ ಒಬ್ಬರು. ಸಿಂಪಲ್ ಸುನಿ ಇದೀಗ ಹೊಸ ಸಿನಿಮಾ ಒಂದಕ್ಕೆ ಕೈ ಹಾಕಿದ್ದಾರೆ. ವಿಶೇಷವೆಂದರೆ ಸಿಂಪಲ್ ಸುನಿ ಅವರ ಹೊಸ ಸಿನಿಮಾಕ್ಕೆ ಸ್ಪೂರ್ತಿ ನೀಡಿರುವುದು ರಾಷ್ಟ್ರಕವಿ ಕುವೆಂಪು ಅವರ ಒಂದು ಕವಿತೆ. ಕುವೆಂಪು ಅವರ ಕವಿತೆಯ ಹೆಸರನ್ನೇ ಸಿಂಪಲ್ ಸುನಿ ಹೊಸ ಸಿನಿಮಾಕ್ಕೂ ಇರಿಸಿದ್ದಾರೆ.

‘ಕನ್ನಡಿಗರಿಗೆ ಸಾಹಿತ್ಯದ ಬಗ್ಗೆ ವಿಶೇಷ ಪ್ರೀತಿ ಇದೆ. ಕನ್ನಡದಲ್ಲಿ ಸಾಹಿತ್ಯ ನಿಧಿಯೇ ಇದೆ. ಅದರಿಂದ ಸ್ಪೂರ್ತಿ ಪಡೆದು ನಾವು ಸಿನಿಮಾ ಕತೆಗಳನ್ನು ಕಟ್ಟಬೇಕಿದೆ’ ಎಂದು ಸಿಂಪಲ್ ಸುನಿ. ಕುವೆಂಪು ಅವರ ಜನಪ್ರಿಯ ಕವಿತೆ ‘ದೇವರು ಋಜು ಮಾಡಿದನು’ ಇಂದ ಸ್ಪೂರ್ತಿ ಪಡೆದು ಹೊಸ ಕತೆ ಬರೆದು ಸಿನಿಮಾ ಮಾಡುತ್ತಿರುವ ಸಿಂಪಲ್ ಸುನಿ, ತಮ್ಮ ಸಿನಿಮಾಕ್ಕೆ ಅದೇ ಹೆಸರನ್ನು ಇರಿಸಿದ್ದಾರೆ.

ಇದನ್ನೂ ಓದಿ:ಒಟಿಟಿ ಬಗ್ಗೆ ಕಹಿ ಸತ್ಯ ಹೇಳಿದ ನಿರ್ದೇಶಕ ಸಿಂಪಲ್ ಸುನಿ

ಕತೆ ಹುಟ್ಟಿದ ರೀತಿಯ ಬಗ್ಗೆ ಮಾತನಾಡಿದ ಸಿಂಪಲ್ ಸುನಿ, ‘ನಾನು ಒಮ್ಮ ಸಂಜೆ ವೇಳೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆಗೆ ಹೋಗಿದ್ದೆ. ಆಗ ಅವರೊಡನೆ ಮಾತನಾಡುತ್ತಾ, ಸಂಜೆ ವೇಳೆ ಇಲ್ಲಿ ವಾತಾವರಣ ಬಹಳ ರಮ್ಯವಾಗಿರುತ್ತದೆ. ಸಂಜೆ ನಮ್ಮ ಮನೆಯ ಮೇಲಿನಿಂದ ಗಿಳಿಗಳ ಹಿಂಡು ಒಟ್ಟಿಗೆ ಹಾರಿ ಹೋಗುತ್ತವೆ’ ಎಂದರಂತೆ. ಆಗ ಸಿಂಪಲ್ ಸುನಿಗೆ ಕುವೆಂಪು ಅವರ ‘ದೇವರು ಋಜು ಮಾಡಿದನು’ ಕವಿತೆ ನೆನಪಾಗಿದೆ. ಎಲ್ಲವೂ ಪೂರ್ವ ನಿರ್ಧರಿತ, ಎಲ್ಲವೂ ದೇವರ ಸೃಷ್ಟಿ ಎಂಬರ್ಥದ ಸಾಲುಗಳು ಅವರ ಮನದಲ್ಲಿ ಅನುರಣಿಸಿ ಅದೇ ಥೀಮ್ ಇಟ್ಟುಕೊಂಡು ಸಿನಿಮಾದ ಕತೆ ತಿದ್ದಿದರಂತೆ ಸುನಿ.

‘ದೇವರು ಋಜು ಮಾಡಿದರು’ ಎಂದು ಸಿನಿಮಾಕ್ಕೆ ಹೆಸರಿಟ್ಟಿದ್ದಲ್ಲದೆ, ಆ ಕವಿತೆಯ ಭಾವದ ಆಧಾರದಲ್ಲಿಯೇ ಕತೆ ರಚಿಸಿಕೊಂಡಿರುವ ಸಿಂಪಲ್ ಸುನಿ, ವಿರಾಜ್ ಹೆಸರಿನ ಹೊಸ ಪ್ರತಿಭೆಯನ್ನು ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಶೀಘ್ರವೇ ಪ್ರಾರಂಭ ಆಗಲಿದೆ.

ಕನ್ನಡ ಸಿನಿಮಾ ಪ್ರೇಕ್ಷಕರ ಬಗ್ಗೆಯೂ ಮಾತನಾಡಿರುವ ಸುನಿ, ‘ಕೋವಿಡ್​ಗೆ ಹಿಂದೆ ಸಾಧಾರಣ ಸಿನಿಮಾಗಳನ್ನು ಸಹ ಪ್ರೇಕ್ಷಕ ಒಪ್ಪಿಕೊಂಡು ಬಿಡುತ್ತಿದ್ದ, ಕೋವಿಡ್ ಬಳಿಕ ‘ಕೆಜಿಎಫ್’, ‘ಕಾಂತಾರ’ ಇನ್ನಿತರೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೋಡಿ ಈಗ ಅತ್ಯುತ್ತಮವಾದ ಸಿನಿಮಾಗಳನ್ನಷ್ಟೆ ಪ್ರೇಕ್ಷಕ ಗೆಲ್ಲಿಸುತ್ತಿದ್ದಾನೆ. ಅದ್ಭುತವಾದ ದೃಶ್ಯಗಳು, ಶಬ್ದ ವಿನ್ಯಾಸ ಎಲ್ಲವೂ ಚೆನ್ನಾಗಿದ್ದರೆ ಮಾತ್ರ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುತ್ತಾರೆ’ ಎಂದಿದ್ದಾರೆ ಸುನಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!