AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡವ ಭಾಷೆಯಲ್ಲಿ ಪ್ರೀತಿ ಹೊರಹಾಕಿದ ರಶ್ಮಿಕಾ ಮಂದಣ್ಣ; ಆ ಸಾಲುಗಳ ಅರ್ಥವೇನು?

ನಟಿ ರಶ್ಮಿಕಾ ಮಂದಣ್ಣ ಅವರ ಮಾತೃಭಾಷೆ ಕೊಡವ. ಆದರೆ, ಅವರು ಅದನ್ನು ಮಾತನಾಡಿದ್ದು ತುಂಬಾನೇ ಕಡಿಮೆ. ಈಗ ಅವರು ಈ ಭಾಷೆಯಲ್ಲಿ ಮಾತನಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಅವರು ಮಾತನಾಡಿದ್ದು ಅನೇಕರಿಗೆ ಅರ್ಥ ಆಗಿಲ್ಲ. ರಶ್ಮಿಕಾ ಅವರು ಹೇಳಿದ ಶಬ್ದಗಳ ಅರ್ಥ ಇಲ್ಲಿದೆ.

ಕೊಡವ ಭಾಷೆಯಲ್ಲಿ ಪ್ರೀತಿ ಹೊರಹಾಕಿದ ರಶ್ಮಿಕಾ ಮಂದಣ್ಣ; ಆ ಸಾಲುಗಳ ಅರ್ಥವೇನು?
ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on: Jul 02, 2024 | 8:55 AM

Share

ನಟಿ ರಶ್ಮಿಕಾ ಮಂದಣ್ಣ ಅವರು ಕೊಡಗಿನವರು. ಕೊಡಗಿನ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಅವರು ಸಿನಿಮಾ ಕೆಲಸಕ್ಕಾಗಿ ಮುಂಬೈ, ಹೈದರಾಬಾದ್, ಚೆನ್ನೈ ಹೀಗೆ ಬೇರೆ ಬೇರೆ ನಗರಗಳಿಗೆ ಸುತ್ತುತ್ತಿರುತ್ತಾರೆ. ಸಮಯ ಸಿಕ್ಕಾಗ ಅವರು ಹುಟ್ಟೂರಿಗೆ ಬರುತ್ತಾರೆ. ಅಲ್ಲಿ ಸಮಯ ಕಳೆಯುತ್ತಾರೆ. ಇತ್ತೀಚೆಗೆ ರಶ್ಮಿಕಾ ಅವರು ಫ್ರೆಂಡ್ ಮದುವೆಗೆ ತೆರಳಿದ್ದರು. ಈ ವೇಳೆ ಅವರು ಕೊಡವ ಸ್ಟೈಲ್​ನಲ್ಲಿ ಮಿಂಚಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಫ್ರೆಂಡ್ ಮದುವೆಗಾಗಿ ರಶ್ಮಿಕಾ ಮಂದಣ್ಣ ಅವರು ಕೊಡಗಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಕೊಡವ ಶೈಲಿಯಲ್ಲಿ ಸೀರೆ ಉಟ್ಟಿದ್ದಾರೆ. ಅಷ್ಟೇ ಅಲ್ಲ ತಮ್ಮ ಮಾತೃಭಾಷೆ ಕೊಡವದಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದ ವಿಡಿಯೋನ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅವರು ಮಾತನಾಡಿದ್ದು ಅನೇಕರಿಗೆ ಅರ್ಥ ಆಗಿಲ್ಲ. ಅವರು ಹೇಳಿದ ಶಬ್ದಗಳ ಅರ್ಥ ಇಲ್ಲಿದೆ.

‘ಎಲ್ಲರಿಗೂ ನಮಸ್ಕಾರ. ಕೊಡಗಿನಲ್ಲಿ ಫ್ರೆಂಡ್​ ಮದುವೆಗೆ ಬಂದ್ದೀನಿ. ಕೊಡಗಿನಲ್ಲಿರುವಾಗ ನಿಮ್ಮ ಜೊತೆ ಮಾತನಾಡೋದು ಖುಷಿ ವಿಚಾರ ಹೀಗಾಗಿ ಈ ವಿಡಿಯೋ ಮಾಡಿದ್ದೇನೆ. ನಿಮ್ಮ ಆಶೀರ್ವಾದಿಂದ ಇಷ್ಟು ಮುಂದೆ ಬಂದಿದೀನಿ. ಈಗಲೂ ನಾನು ಕಾವೇರಮ್ಮ ಮತ್ತು ಇಗ್ಗುತಪ್ಪ ಆಶೀರ್ವಾದಿಂದ ಮುಂದುವರಿಯುತ್ತಿದ್ದೇನೆ. ನೀವು ಯಾವಾಗಲೂ ನನಗೆ ಸಪೋರ್ಟ್ ಮಾಡಿದೀರಾ. ಇನ್ನಷ್ಟು ಹಾರ್ಡ್​ವರ್ಕ್ ಮಾಡಿ ನಾನು ಮುಂದೆ ಮತ್ತಷ್ಟು ಸಾಧಿಸುತ್ತೇನೆ ಎಂದು ಪ್ರಾಮಿಸ್ ಮಾಡುತ್ತೇನೆ. ನಿಮ್ಮೆಲ್ಲರ ಸಪೋರ್ಟ್​ಗೆ ಥ್ಯಾಂಕ್ಸ್. ನೀವು ಯಾವಾಗಲೂ ನಮ್ಮ ಮನಸ್ಸಲ್ಲಿ ಇರುತ್ತೀರಾ. ಧನ್ಯವಾದ’ ಎಂದಿದ್ದಾರೆ ರಶ್ಮಿಕಾ.

ಇದನ್ನೂ ಓದಿ: ಸ್ಟಾರ್ ನಟನೊಟ್ಟಿಗೆ ಸಿನಿಮಾ ಮುಹೂರ್ತ, ರಶ್ಮಿಕಾ ಮಂದಣ್ಣ ಗೈರು

ರಶ್ಮಿಕಾ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಆಗಸ್ಟ್ 15ರಂದು ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ಬಿಡುಗಡೆ ದಿನಾಂಕ ಡಿಸೆಂಬರ್​ಗೆ ಮುಂದೂಡಲ್ಪಟ್ಟಿದೆ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಇದಲ್ಲದೆ ಇನ್ನೂ ಹಲವು ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.