ಸೀರಿಯಲ್ಗಳಲ್ಲಿ ಮಿಂಚಿ ನಂತರ ಹಿರಿತೆರೆಯಲ್ಲಿ ಖ್ಯಾತಿ ಗಳಿಸಿದ ಅನೇಕರು ಇದ್ದಾರೆ. ಅವರ ಸಾಲಿಗೆ ನಿಶಾ ರವಿಕೃಷ್ಣನ್ ಕೂಡ ಸೇರ್ಪಡೆ ಆಗುತ್ತಿದ್ದಾರೆ. ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಿಶಾ ಅವರು ಅಮೂಲ್ಯಾ ಎಂಬ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ‘ಅಂಶು’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆಯುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾದ ಝಲಕ್ ತೋರಿಸುವಲ್ಲಿ ಟ್ರೇಲರ್ ಯಶಸ್ಸಿ ಆಗಿದೆ. ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..
‘ಅಂಶು’ ಸಿನಿಮಾದ ಟ್ರೇಲರ್ನಲ್ಲಿ ಕಥೆಯ ಬಗ್ಗೆ ಸುಳಿವು ಬಿಟ್ಟುಕೊಡಲಾಗಿದೆ. ಇದು ಮಹಿಳಾ ಪ್ರಧಾನ ಸಿನಿಮಾ. ಇಡೀ ಸಿನಿಮಾದಲ್ಲಿ ನಿಶಾ ರವಿಕೃಷ್ಣನ್ ಅವರ ಪಾತ್ರವೇ ಪ್ರಮುಖವಾಗಿ ಇರಲಿದೆ. ಪಕ್ಕಾ ಕಮರ್ಷಿಯಲ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗುತ್ತದೆ. ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಟ್ರೇಲರ್ ನೋಡಿದ ಪ್ರೇಕ್ಷಕರ ಮನಸ್ಸಿನಲ್ಲಿ ಕೌತುಕ ಹೆಚ್ಚಾಗಿದೆ.
ಕಿರುತೆರೆ ಲೋಕಕ್ಕೂ ಸಿನಿಮಾಗೂ ಸಾಕಷ್ಟು ವ್ಯತ್ಯಾಸ ಇದೆ. ಧಾರಾವಾಹಿಗಳಲ್ಲಿ ನಿಶಾ ರವಿಕೃಷ್ಣನ್ ಅವರಿಗೆ ಇರುವ ಇಮೇಜ್ ಬೇರೆ. ಆದರೆ ಆ ಇಮೇಜ್ ಬದಲಿಸುವ ರೀತಿಯ ಪಾತ್ರವನ್ನು ಅವರು ‘ಅಂಶು’ ಸಿನಿಮಾದಲ್ಲಿ ಮಾಡಿದ್ದಾರೆ. ಎಂ.ಸಿ. ಚನ್ನಕೇಶವ ಅವರು ಈ ಸಿನಿಮಾಗೆ ನಿರ್ದೇಶನದ ಮಾಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಸಮಾಜದಲ್ಲಿ ನಡೆಯುವ ಘಟನೆಗಳನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಈ ಸಿನಿಮಾ ಸಿದ್ಧವಾಗಿದೆ.
ಇದನ್ನೂ ಓದಿ: Bigg Boss TRP: ‘ಬಿಗ್ ಬಾಸ್’ಗೆ ಸಿಕ್ತು ಭರ್ಜರಿ ಟಿಆರ್ಪಿ; ದಾಖಲೆಗಳೆಲ್ಲ ಉಡೀಸ್
‘ಅಂಶು’ ಚಿತ್ರವು ‘ಗ್ರಹಣ ಎಲ್ಎಲ್ಪಿ’ ಬ್ಯಾನರ್ ಮೂಲಕ ನಿರ್ಮಾಣ ಆಗಿದೆ. ರತನ್ ಗಂಗಾಧರ್, ಕೃತಿ ನಾಣಯ್ಯ, ಸಂಪತ್ ಶಿವಶಂಕರ್ ಅವರು ನಿರ್ಮಾಣ ಮಾಡಿದ್ದಾರೆ. ಚಲುವರಾಜ್ ಅವರು ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಜೈಚಂದ್ರ, ಪ್ರಮೋದ್, ಡಾ. ಮಧುರಾಜ್, ವೀರನ್ ಗೌಡ ಸಹ ಈ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಸುನೀಲ್ ನರಸಿಂಹಮೂರ್ತಿ ಅವರ ಛಾಯಾಗ್ರಹಣ, ಕೆ.ಸಿ. ಬಾಲಸಾರಂಗನ್ ಅವರ ಸಂಗೀತ ನಿರ್ದೇಶನ, ವಿಘ್ನೇಶ್ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಗಿದೆ. ಮಹೇಂದ್ರ ಗೌಡ ಅವರು ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.