ಸ್ಟಾರ್ ನಟರ ನಡುವೆ ಕನ್ನಡದ ನಟಿಯನ್ನು ಗುರುತಿಸಿದ ಪಾಕ್ ಜನ: ಕೆಜಿಎಫ್ ಮಹಿಮೆ
‘ಕೆಜಿಎಫ್’ ಬಾಕ್ಸ್ ಆಫೀಸ್ನಲ್ಲಿ ಭಾರಿ ಮೊತ್ತ ಕಲೆ ಹಾಕಿರಬಹುದು ಆದರೆ ಅದರ ನಿಜವಾದ ಯಶಸ್ಸೆಂದರೆ ಆ ಸಿನಿಮಾವನ್ನು ಕನ್ನಡ ಚಿತ್ರರಂಗವನ್ನು ಗಡಿಗಳ ಆಚೆಗೆ ಕೊಂಡೊಯ್ದಿರುವುದು. ಅದಕ್ಕೆ ತಾಜಾ ಉದಾಹರಣೆಯನ್ನು ಸಿನಿಮಾದ ನಟಿ ಮಾಳವಿಕಾ ಅವಿನಾಶ್ ನೀಡಿದ್ದಾರೆ.

‘ಕೆಜಿಎಫ್’ ಚಿತ್ರವು ಮಾಡಿದ ದಾಖಲೆ ಹಾಗೂ ಅದು ಕೊಟ್ಟ ಜನಪ್ರಿಯತೆಯನ್ನು ಯಾರಿಂದಲೂ ಅಳಿಸೋಕೆ ಸಾಧ್ಯವಿಲ್ಲ. ಕನ್ನಡ ಚಿತ್ರರಂಗವನ್ನು ಬೇರೆ ಹಂತಕ್ಕೆ ಈ ಚಿತ್ರವು ಕರೆದುಕೊಂಡು ಹೋಯಿತು. ವಿಶೇಷ ಎಂದರೆ, ಈ ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರಿಗೆ ಜನಪ್ರಿಯತೆ ಸಿಕ್ಕಿತು. ಈ ಬಗ್ಗೆ ನಟಿ ಮಾಳವಿಕಾ ಮೋಹನ್ ಅವರು ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಕೆಜಿಎಫ್’ಗಿಂತ ‘ಕೆಜಿಎಫ್ 2’ ಹೆಚ್ಚು ಜನಪ್ರಿಯತೆ ಪಡೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಯಶ್ ಅವರ ಜನಪ್ರಿಯತೆ ಎಷ್ಟು ಹೆಚ್ಚಿದೆ ಎಂದು ಹೇಳಬೇಕಿಲ್ಲ. ಇನ್ನು ಪ್ರಶಾಂತ್ ನೀಲ್ ಅವರಿಗೆ ಪರಭಾಷೆಯಿಂದ ಆಫರ್ಗಳು ಬರೋಕೆ ಆರಂಭ ಆಗಿವೆ. ಈ ಎಲ್ಲಾ ವಿಚಾರಗಳ ಕುರಿತು ಮಾಳವಿಕಾ ಮಾತನಾಡಿದ್ದಾರೆ.
‘ನಾನು ಲಂಡನ್ಗೆ ಹೋಗಿದ್ದೆ. ಚರ್ಮದ ಕ್ಲೀನಿಂಗ್ ಮಾಡಿಸೋಕೆ ಹೋಗಿದ್ದೆ. ಅಲ್ಲೊಬ್ಬಳು ನನ್ನ ಬಳಿ ಬಂದು ನಿಮ್ಮನ್ನು ನೋಡಿದ್ದೇನೆ ಎನ್ನುತ್ತಿದ್ದರು. ನಾನು ಎಸ್ಟೋನಿಯಾದವಳು ಎಂದಳು. ಕೆಜಿಎಫ್ ಅಲ್ಲಿ ನಿಮ್ಮನ್ನು ನೋಡಿದ್ದೇನೆ ಎಂದಳು’ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ ಮಾಳವಿಕಾ.
ಇದನ್ನೂ ಓದಿ:ಹೊಂಬಾಳೆ ಸಂಸ್ಥೆಗೆ 4 ರಾಷ್ಟ್ರ ಪ್ರಶಸ್ತಿ; ಅದೇ ಖುಷಿಯಲ್ಲಿ ‘ಕೆಜಿಎಫ್ 3’ ಬಗ್ಗೆ ನಿರ್ಮಾಪಕರ ಮಾತು
‘ನಾನು ಒಮ್ಮೆ ತಮಿಳು ಸಿನಿಮಾ ಶೂಟ್ಗೆ ದುಬೈ ಹೋಗಿದ್ದೆ. ವಿಶಾಲ್, ಆರ್ಯ ಕೂಡ ಶೂಟ್ನಲ್ಲಿ ಇದ್ದರು. ಅಲ್ಲಿದ್ದ ಪಾಕಿಸ್ತಾನಿ ಜೂನಿಯರ್ ಆರ್ಟಿಸ್ಟ್ಗಳು ನನ್ನ ಬಳಿ ಬಂದು ಫೋಟೋ ಕೇಳಿದರು. ನಾನು ಪ್ರಶಾಂತ್ ನೀಲ್ಗೆ ಕರೆ ಮಾಡಿ ಹೆಮ್ಮೆ ವ್ಯಕ್ತಪಡಿಸಿದೆ. ಭಾಷೆಗಳನ್ನು ಮೀರಿ ಸಾಗೋ ಶಕ್ತಿ ಕನ್ನಡ ಚಿತ್ರಕ್ಕೂ ಬಂದಿದೆ’ ಎಂದು ಹೆಮ್ಮೆಯಿಂದ ಹೇಳಿದರು ಅವರು.
View this post on Instagram
‘ಕೆಜಿಎಫ್ 2’ ಚಿತ್ರದಲ್ಲಿ ಮಾಳವಿಕಾ ಅವರು ಟಿವಿ ಚಾನೆಲ್ನ ಎಡಿಟರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಹೆಚ್ಚು ಹೊತ್ತು ತೆರೆಮೇಲೆ ಬರೋದಿಲ್ಲ. ಆದರೆ, ಅವರು ಕಾಣಿಸಿಕೊಂಡ ಹೊತ್ತಷ್ಟೂ ಸಾಕಷ್ಟು ಹೈಲೈಟ್ ಆಗಿದ್ದರು. ‘ಈಗೇನು ಮಾಡುತ್ತಾನೆ ನಿಮ್ಮ ಹೀರೋ’ ಎಂದೆಲ್ಲ ಕೇಳಿ ಜನಪ್ರಿಯತೆ ಪಡೆದಿದ್ದರು. ಆ ವಿಡಿಯೋಗಳು ವೈರಲ್ ಆಗಿದ್ದವು.
‘ಕೆಜಿಎಫ್ 2’ ಕ್ಲೈಮ್ಯಾಕ್ಸ್ನಲ್ಲಿ ‘ಕೆಜಿಎಫ್ 3’ ಬಗ್ಗೆ ಅಪ್ಡೇಟ್ ನೀಡಲಾಗಿತ್ತು. ಶೀಘ್ರವೇ ಇದರ ಅಪ್ಡೇಟ್ ನೀಡೋದಾಗಿ ವಿಜಯ್ ಕಿರಂಗದೂರು ಅವುರ ಹೇಳಿಕೆ ನೀಡಿದ್ದಾರೆ. ‘ಕೆಜಿಎಫ್ 3’ ಸಿನಿಮಾದಲ್ಲಿಯೂ ಮಾಳವಿಕಾ ಅವಿನಾಶ್ ಪಾತ್ರ ಇರುವ ಸಾಧ್ಯತೆ ಹೆಚ್ಚಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ