Bigg Boss TRP: ‘ಬಿಗ್ ಬಾಸ್’ಗೆ ಸಿಕ್ತು ಭರ್ಜರಿ ಟಿಆರ್ಪಿ; ದಾಖಲೆಗಳೆಲ್ಲ ಉಡೀಸ್
ಧಾರಾವಾಹಿಗಳ ಟಿಆರ್ಪಿಯಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಕಳೆದ ವಾರ ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು. ಎರಡನೇ ಸ್ಥಾನದಲ್ಲಿ ‘ಅಮೃತಧಾರೆ’ ದಾರಾವಾಹಿ ಇದೆ. ಈ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಬಿಗ್ ಬಾಸ್ ಧಾರಾವಾಹಿಯ ಟಿಆರ್ಪಿ ವಿವರ ಇಲ್ಲಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಸೆಪ್ಟೆಂಬರ್ 29ರಂದು ಆರಂಭ ಆಯಿತು. ಸುದೀಪ್ ನಿರೂಪಣೆ, ಸ್ಪರ್ಧಿಗಳ ವಿವರಣೆ ನೋಡಲು ಫ್ಯಾನ್ಸ್ ಕಾದಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಈ ಶೋನ ಟಿಆರ್ಪಿ ಹೊರ ಬಿದ್ದಿದೆ. ಓಪನಿಂಗ್ ಡೇಗೆ ಎಷ್ಟು ಹಾಗೂ ವಾರದ ದಿನಗಳಲ್ಲಿ ಈ ಧಾರಾವಾಹಿಗೆ ಎಷ್ಟು ಟಿಆರ್ಪಿ ಸಿಕ್ಕಿದೆ ಎಂಬ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಟಿಆರ್ಪಿ
ಗ್ರ್ಯಾಂಡ್ ಓಪನಿಂಗ್ ದಿನ ಬಿಗ್ ಬಾಸ್ಗೆ 9.9 ಟಿಆರ್ಪಿ ಸಿಕ್ಕಿದೆ. ಬಿಗ್ ಬಾಸ್ ಲಾಂಚ್ ದಿನ ಇಷ್ಟು ದೊಡ್ಡ ಮಟ್ಟದ ಟಿಆರ್ಪಿ ಸಿಕ್ಕಿದ್ದು ಇದೇ ಮೊದಲು ಎನ್ನಲಾಗಿದೆ. ವಾರದ ದಿನಗಳಲ್ಲಿ ಬಿಗ್ ಬಾಸ್ಗೆ 6.9 ಟಿಆರ್ಪಿ ದೊರೆತಿದೆ. ವಾರಗಳು ಕಳೆದಂತೆ ಟಿಆರ್ಪಿ ಹೆಚ್ಚುತ್ತಾ ಹೋಗುವ ಸಾಧ್ಯತೆ ಇದೆ. ನಿತ್ಯವೂ ಕಲರ್ಸ್ನಲ್ಲಿ ರಾತ್ರಿ 9.30ಕ್ಕೆ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.
ಧಾರಾವಾಹಿಗಳ ಟಿಆರ್ಪಿ
ಧಾರಾವಾಹಿಗಳ ಟಿಆರ್ಪಿಯಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಕಳೆದ ವಾರ ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು. ಎರಡನೇ ಸ್ಥಾನದಲ್ಲಿ ‘ಅಮೃತಧಾರೆ’ ದಾರಾವಾಹಿ ಇದೆ. ಈ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಹಲವು ರಹಸ್ಯಗಳು ಹೊರ ಬರುತ್ತಿವೆ. ಹೀಗಾಗಿ, ಧಾರಾವಾಹಿಗೆ ಬೇಡಿಕೆ ಹೆಚ್ಚಿದೆ.
ಮೂರನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಸಮಯ ಬದಲಾವಣೆಯ ಹೊರತಾಗಿಯೂ ಧಾರಾವಾಹಿಗೆ ಇರೋ ಬೇಡಿಕೆ ಕಡಿಮೆ ಆಗಿಲ್ಲ. ಜನರು ಇಷ್ಟಪಟ್ಟು ಈ ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ. ಐದನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ.
ಇದನ್ನೂ ಓದಿ: ‘ಬಿಗ್ ಬಾಸ್ನಲ್ಲಿ ದೆವ್ವದ ಕಾಟ? ಆ ಒಂದು ಘಟನೆಗೆ ಬೆಚ್ಚಿಬಿದ್ದ ಮನೆ ಮಂದಿ
‘ಬಿಗ್ ಬಾಸ್’ ಪ್ರಸಾರದ ಸಂದರ್ಭದಲ್ಲೇ ಜೀ ಕನ್ನಡದಲ್ಲಿ ‘ಸೀತಾ ರಾಮ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಬಿಗ್ ಬಾಸ್ನ ಎಲ್ಲರೂ ವೀಕ್ಷಿಸುತ್ತಿರುವದಕ್ಕೆ ಈ ಧಾರಾವಾಹಿಯ ಟಿಆರ್ಪಿಯಲ್ಲಿ ಕುಸಿತ ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.