‘ಪಿನಾಕ’ ಟೀಸರ್; ಪುನರ್ಜನ್ಮದ ಕಥೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಪಿನಾಕ' ಸಿನಿಮಾ ಟೀಸರ್ ಭಾರಿ ಮೆಚ್ಚುಗೆ ಪಡೆದಿದೆ. ಗಣೇಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಒಂದು ಆಧುನಿಕ ಮತ್ತೊಂದು ರಾಜನ ಗೆಟಪ್‌ನಲ್ಲಿ ಮಿಂಚಿದ್ದಾರೆ. ಪುನರ್ಜನ್ಮದ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ಎರಡು ಕಾಲಘಟ್ಟಗಳಲ್ಲಿ ಸಾಗುತ್ತದೆ. ಅಕ್ಟೋಬರ್ 2ರಂದು ತೆರೆಗೆ ಬರಲಿರುವ 'ಪಿನಾಕ' ಚಿತ್ರವು ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

‘ಪಿನಾಕ’ ಟೀಸರ್; ಪುನರ್ಜನ್ಮದ ಕಥೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್
ಗಣೇಶ್

Updated on: Jul 06, 2026 | 2:50 PM

ಮುಖ್ಯಾಂಶಗಳು

  • ಗಮನ ಸೆಳೆದ ಗಣೇಶ್ ನಟನೆಯ 'ಪಿನಾಕ' ಟೀಸರ್‌
  • 'ಪಿನಾಕ' ಚಿತ್ರದ ಪುನರ್ಜನ್ಮದ ರೋಚಕ ಕಥಾಹಂದರ
  • ಅಕ್ಟೋಬರ್ 2ಕ್ಕೆ 'ಪಿನಾಕ' ರಿಲೀಸ್

ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ವೃತ್ತಿ ಜೀವನದಲ್ಲಿ ಹಲವು ರೀತಿಯ ಕಥೆಗಳನ್ನು ಮಾಡಿದ್ದಾರೆ. ರೊಮ್ಯಾಂಟಿಕ್ ಹೀರೋ, ಎಮೋಷನಲ್ ಬಾಯ್ ಆಗಿ ಅವರು ಮಿಂಚಿದ್ದಾರೆ. ಈಗ ‘ಪಿನಾಕ’ ಸಿನಿಮಾ ಮೂಲಕ ಗಣೇಶ್ ಅವರು ಪುರ್ನಜ್ಮನದ ಕಥೆ ಹೇಳಲು ಹೊರಟಿದ್ದಾರೆ ಎಂಬುದುರ ಸೂಚನೆ ಸಿಕ್ಕಿದೆ. ಇಂದು (ಜುಲೈ 6) ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಮೆಚ್ಚುಗೆ ಪಡೆಯುತ್ತಿದೆ. ಗಣೇಶ್​ ಅವರ ಲುಕ್ ಗಮನ ಸೆಳೆದಿದೆ.

ಗಣೇಶ್ ಅವರು ಎರಡು ರೀತಿಯ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದರಲ್ಲಿ ಮಾಡರ್ನ್ ಅವತಾರದಲ್ಲಿ ಮಿಂಚದರೆ ಮತ್ತೊಂದು ಗೆಟಪ್​​ನಲ್ಲಿ ರಾಜರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋಟೆ, ಫೈಟ್​ ದೃಶ್ಯಗಳು ಕೂಡ ಸಿನಿಮಾದಲ್ಲಿ ಹೈಲೈಟ್ ಆಗಿವೆ. ಇದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಎರಡು ಕಾಲಘಟ್ಟದಲ್ಲಿ ಚಿತ್ರದ ಕಥೆ ಸಾಗುತ್ತದೆ ಎಂಬುದು ಟೀಸರ್​​ನಲ್ಲಿ ಸ್ಪಷ್ಟವಾಗಿದೆ. ಇದು ಸಿನಿಮಾ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈ ಮೊದಲು ಈ ರೀತಿಯ ಹಲವು ಪ್ರಯತ್ನಗಳು ಚಿತ್ರರಂಗದಲ್ಲಿ ನಡೆದಿದ್ದು, ಹಲವು ಯಶ್ಸು ಕಂಡಿದೆ. ‘ಪಿನಾಕ’ ಸಿನಿಮಾ ಯಾವ ರೀತಿಯ ಪ್ರತಿಕ್ರಿಯೆ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

YouTube video player

ಗಣೇಶ್ ಜನ್ಮದಿನದ ಪ್ರಯುಕ್​ತ ‘ಪಿನಾಕ’ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಈ ಚಿತ್ರ ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಇದಕ್ಕೆ ಈಗಿನಿಂದಲೇ ನಿಧಾನವಾಗಿ ಪ್ರಚಾರ ಆರಂಭಿಸಲಾಗಿದೆ. ಅಕ್ಟೋಬರ್ 16ರಂದು ಗಣೇಶ್ ನಟನೆಯ ಮತ್ತೊಂದು ಸಿನಿಮಾ ‘‘ಬೃಂದವಿಹಾರಿ’ ರಿಲೀಸ್ ಆಗಲಿದೆ ಅನ್ನೋದು ವಿಶೇಷ.

ಇದನ್ನೂ ಓದಿ: ಒಂದೇ ತಿಂಗಳಲ್ಲಿ ಗಣೇಶ್ ನಟನೆಯ ಎರಡು ಸಿನಿಮಾಗಳು ರಿಲೀಸ್; ಅಭಿಮಾನಿಗಳಿಗೆ ಡಬಲ್ ಹಬ್ಬ

‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ವಿಶ್ವಪ್ರಸಾದ್ ‘ಪಿನಾಕ’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನೃತ್ಯ ನಿರ್ದೇಶಕ ಧನಂಜಯ್ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಗೌರ ಹರಿ ಈ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us